SBI MCash Discontiuation: ಇದೀಗ SBI ತನ್ನ ಗ್ರಾಹಕರಿಗೆ ಮಹತ್ವದ ಆದೇಶವನ್ನು ಹೊರಡಿಸಿದೆ. mCASH ಸೇವೆಯನ್ನು SBI ಸಂಪೂರ್ಣವಾಗಿ ನಿಲ್ಲಿಸಿದೆ. ಇದು SBI ನ ಒಂದು ಸರಳ ಮತ್ತು ವೇಗದ ಸೌಲಭ್ಯವಾಗಿತ್ತು. ಇದನ್ನು ಈಗ SBI ಸ್ಥಗಿತಗೊಳಿಸಿದೆ. ಇದು ದೈನಂದಿನ ಹಣದ ವ್ಯವಹಾರ ಮಾಡುವವರ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. mCASH ನ ಕೊನೆಯು ಹೊಸ ಆರಂಭವನ್ನು ಹುಟ್ಟಿಹಾಕಿದೆ, ಈ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳೋಣ.
SBI ನ mCASH ಸೌಲಭ್ಯ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ mCASH ಸೇವೆಯನ್ನು ನವೆಂಬರ್ 30 ರ ನಂತರ ಸಂಪೂರ್ಣವಾಗಿ ಬಂದ್ ಮಾಡಲು ತೀರ್ಮಾನವನ್ನು ಕೈಗೊಂಡಿದೆ. ಇದು ದೈನಂದಿನ ಹಣದ ವ್ಯವಹಾರ ಮಾಡುವವರ ಮೇಲೆ ಪರಿಣಾಮವನ್ನು ಬೀರುತ್ತದೆ. ಹಾಗೆ ಗ್ರಾಹಕರನ್ನು ಹೆಚ್ಚು ಸುರಕ್ಷಿತ ಡಿಜಿಟಲ್ ವಿಧಾನಗಳಾದ UPI , IMPS ,NEFT ಮತ್ತು RTGS ಗೆ ತಿರುಗುವಂತೆ ಮಾಡಿದೆ.
SBI ನ mCASH ಸೌಲಭ್ಯದ ಕಾರ್ಯ
SBI ನ mCASH ಇದು ಒಂದು ಸರಳವಾದ ಹಾಗೆ ವೇಗದ ಹಣ ರವಾನೆಯ ಒಂದು ಸೌಲಭ್ಯವಾಗಿತ್ತು. ಇದರಲ್ಲಿ ನೀವು ಬೆನಿಫಿಶಿಯರಿ ಸೇರಿಸದೆಯೇ ರಿಸೀವರ್ ನ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ID ಯನ್ನು ಬಳಸಿಕೊಂಡು ಹಣವನ್ನು ವರ್ಗಾವಣೆ ಮಾಡಬಹುದಾಗಿತ್ತು. ರಿಸೀವರ್ SMS ಅಥವಾ ಇಮೇಲ್ ಮೂಲಕ 8 ಅಂಕೆಯ ಪಾಸ್ ಕೋಡ್ ನೊಂದಿಗೆ ಒಂದು ಲಿಂಕ್ ಬರುತಿತ್ತು. ಅವರು State Bank mCASH ಆಫ್ ಅಥವಾ ಆನ್ಲೈನ್ SBI mCASH ಲಿಂಕ್ ಅನ್ನು ಬಳಸಿಕೊಂಡು MPIN ಸೆಟ್ ಮಾಡಿ ಹಣವನ್ನು ಕ್ಲೇಮ್ ಮಾಡಿ, ಆ ಹಣವನ್ನು ಯಾವುದೇ ಬ್ಯಾಂಕ್ ಖಾತೆಗೆ ಬೇಕಾದರೂ ರವಾನಿಸಬಹುದಾಗಿದೆ.
ಈ ಸೇವೆ ತುರ್ತು ಸಂದರ್ಭದಲ್ಲಿ ಮತ್ತು ಕಿರು ಮೊತ್ತಗಳ ಹಣ ರವಾನೆಗೆ ಅತ್ಯಂತ ಉಪಯುಕ್ತವಾಗಿರುತಿತ್ತು. ಈ ಆಫ್ ನಲ್ಲಿ ಗ್ರಾಹಕರು 6 ಫೇವರಿಟ್ ಖಾತೆಯನ್ನು ಸೇರಿಸಿ ಭವಿಷ್ಯದ ಕ್ಲೇಮ್ ಅನ್ನು ಸುಲಭಗೊಳಿಸಬಹುದಾಗಿತ್ತು. ಆನ್ಲೈನ್ SBI ಅಥವಾ YONO Lite ಆಫ್ ಮುಳಕ ಇದನ್ನು ಸುಲಭವಾಗಿ ನಿರ್ವಹಿಸಬಹುದಾಗಿತ್ತು. ಆದರೆ ಈ ಸೌಲಭ್ಯವನ್ನು ನಿಲ್ಲಿಸುತಿದ್ದೇವೆ ಎಂದು SBI ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.
mCASH ನಿಲ್ಲಿಸಲು ಕಾರಣ…?
mCASH ಒಂದು ಹಳೆಯ ವ್ಯವಸ್ಥೆಯಾಗಿದ್ದು, ಇಂದಿನ ನಿಯಂತ್ರಣಕ್ಕೆ ಸರಿಹೊಂದುದಿಲ್ಲ. ರಿಸೆರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಮದ ಪ್ರಕಾರ, ಹಣ ರವಾನೆಯಲ್ಲಿ ಹೆಚ್ಚಿನ ವಿನ್ಯಾಸ ಅಗತ್ಯವಾಗಿದೆ. mCASH ನಿಲ್ಲುದು SBI ಗೆ ತನ್ನ ಸೇವೆಯನ್ನು ಸರಳಗೊಳಿಸಲು ಸಹಾಯ ಮಾಡುತ್ತದೆ. ಗ್ರಾಹಕರಿಗೆ ಒಂದೇ ವ್ಯವಸ್ಥೆಯಲ್ಲಿ ಎಲ್ಲ ವ್ಯವಹಾರವನ್ನು ನಿರ್ವಹಿಸಲು ಅವಕಾಶ ನೀಡುತ್ತದೆ.
ಹಳೆ ವ್ಯವಸ್ಥೆಯ ಅಂತ್ಯದೊಂದಿದೆ ಹೊಸ ವ್ಯವಸ್ಥೆಯ ಆರಂಭ
ನವೆಂಬರ್ 30 ರ ನಂತರ mCASH ಸಂಪೂರ್ಣವಾಗಿ ನಿಲ್ಲುತ್ತದೆ ಹಾಗೆ SBI ನೀಡಿದ ಸಲಹೆಯಂತೆ UPI , IMPS , NEFT ಮತ್ತು RTGS ಬಳಸಿಕೊಂಡು ಇನ್ನುಮುಂದೆ ಹಣ ವರ್ಗಾವಣೆ ಮಾಡಬಹುದಾಗಿದೆ. 2025 ರಲ್ಲಿ UPI ವಹಿವಾಟು 15 ಬಿಲಿಯನ್ ತಲುಪಿದ್ದು, ಇದು ಡಿಜಿಟಲ್ ಇಂಡಿಯಾದ ಒಂದು ದೊಡ್ಡ ಯಶಸ್ಸು ಆಗಿದೆ. ಇದರಲ್ಲಿ ಯಾವುದೇ ಫೀ ಇಲ್ಲದೆ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ, ಯುಪಿ ಸೇವೆ 24/7 ಲಭ್ಯವಿರುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

