Womens Commission Complaint On Bigg Boss Gilli Nata: ಇದೀಗ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕನ್ನಡ 12 ರಲ್ಲಿ ಆದ ಚಿಕ್ಕ ಗಲಾಟೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇದೀಗ ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ನಟನ ಮೇಲೆ ದೂರು ದಾಖಲಾಗಿದೆ. ಹಾಗಾದರೆ ನಾವೀಗ ಅಷ್ಟಕ್ಕೂ ಬಿಗ್ ಬಾಸ್ ನಲ್ಲಿ ಆಗಿದ್ದೇನು ಅನ್ನುವ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಘಟನೆಯ ಹಿನ್ನೆಲೆ
ಬಿಗ್ ಬಾಸ್ ಮನೆಯಲ್ಲಿ ರಿಷಾ ಗೌಡ ಬಿಸಿನೀರಿನ ಬಕೆಟ್ ಅನ್ನು ಇಟ್ಟುಕೊಂಡಿದ್ದರು, ಗಿಲ್ಲಿ ನಟ ಅದನ್ನು ತಕ್ಷಣ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ, ಆದರೆ ರಿಷಾ ಬಕೆಟ್ ಕೊಡಲು ಸ್ವಲ್ಪ ವಿಳಂಬ ಮಾಡುತ್ತಾರೆ. ಈ ಕಾರಣಕ್ಕೆ ಗಿಲ್ಲಿ ನಟ ‘ಬಕೆಟ್ ಕೊಡದಿದ್ದಕ್ಕೆ ನೋಡು ನಾನು ಏನು ಮಾಡ್ತಿನಿ’ ಅಂತ ಹೇಳಿ, ರಿಷಾ ಅವರ ಬಟ್ಟೆಗಳನ್ನ ಸ್ವರ್ಶಿಸಿ ಹೊರಗೆ ತಂದು ಇಡುತ್ತಾರೆ. ಇದರಿಂದ ಕೋಪಗೊಂಡ ರಿಷಾ ಗಿಲ್ಲಿ ನಟ ಅವರನ್ನ ಎರಡು ಬಾರಿ ತಳ್ಳುತ್ತಾರೆ. ಈ ಘಟನೆಯಲ್ಲಿ ಗಿಲ್ಲಿ ನಟ ರಿಷಾ ಅವರ ಬಟ್ಟೆಯನ್ನು ಅನುಮತಿ ಇಲ್ಲದೆ ಸ್ಪರ್ಶಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ಘಟನೆ ಹೆಣ್ಣು ಮಕ್ಕಳ ಗೌರವಕ್ಕೆ ದಕ್ಕೆ ತಂದಿದೆ ಎಂದು ಹೇಳಿ ಮಹಿಳಾ ಆಯೋಗ ಗಿಲ್ಲಿ ನಟನ ವಿರುದ್ಧ ದೂರನ್ನು ದಾಖಲಿಸಿದ್ದಾರೆ.
ಮಹಿಳಾ ಆಯೋಗ ಕ್ರಮ
ಇದೀಗ ಕಲಾವಿದೆ ಎಚ್ . ಸಿ ಕುಶಲಾ ಅವರು ಗಿಲ್ಲಿ ನಟನ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಎಚ್ . ಸಿ ಕುಶಲಾ ಅವರು, ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಹೆಣ್ಣು ಮಕ್ಕಳಿಗೆ ನಿರಂತರ ತೊಂದರೆ ಕೊಡುತ್ತಿದ್ದಾರೆ, ಇದು ಕೇವಲ ಒಂದು ಘಟನೆಗೆ ಸೀಮಿತವಾಗಿಲ್ಲ, ಗಿಲ್ಲಿಯ ಒಟ್ಟಾರೆ ನಡವಳಿಕೆಯ ಮೇಲೆ ಆರೋಪವನ್ನು ಮಾಡಿದ್ದಾರೆ. ಕರ್ನಾಟಕ ಮಹಿಳಾ ಆಯೋಗ ಈ ದೂರನ್ನು ತನ್ನ ಕಾನೂನು ತಂಡಕ್ಕೆ ಕಳುಹಿಸಿದ್ದು, ಇನ್ನು ವಿವರವಾದ ಅಭಿಪ್ರಾಯಗಳನ್ನು ಪಡೆಯುತ್ತಿದೆ. ಬೆಂಗಳೂರು ಕಮಿಷನರ್ ಗೆ ಪತ್ರ ಬರೆದು ತನಿಖೆಗೆ ಸಹಾಯ ಮಾಡುವಂತೆ ಕೇಳಿದ್ದಾರೆ. ಆಯೋಗದ ಅಧ್ಯಕ್ಷರಾಗಿರುವ ನಾಗಲಕ್ಷ್ಮಿ ಚೌದರಿ ಅವರು ಈ ವಿಷಯದಲ್ಲಿ ನಾವು ತೀವ್ರ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಹೇಳಿಕೆಯನ್ನು ನೀಡಿದ್ದಾರೆ.
ಹೋಸ್ಟ್ ಕಿಚ್ಚ ಸುದೀಪ್ ಅವರ ಪ್ರತಿಕ್ರಿಯೆ
ಬಿಗ್ ಬಾಸ್ ಎಪಿಸೋಡ್ ನಲ್ಲಿ ನೆಡೆದ ಚರ್ಚೆಯಲ್ಲಿ ಹೋಸ್ಟ್ ಕಿಚ್ಚ ಸುದೀಪ್ ಅವರು ಗಿಲ್ಲಿ ನಟನನ್ನು ಕೇಳಿದ್ದಾರೆ,” ರಿಷಾ ನಿನ್ನ ಬಟ್ಟೆಗಳನ್ನ ಸ್ಪರ್ಶಿಸಿದಾಗ ಏನು ಮಾಡಿದೆ..? ಇದು ಸರಿಯೇ ..? ” ಗಿಲ್ಲಿ ತಮ್ಮ ನಡವಳಿಕೆಯನ್ನು ತಪ್ಪು ಎಂದು ಒಪ್ಪಿಕೊಂಡಿದ್ದಾರೆ ಮತ್ತು ರಿಷಾ ಗಿಲ್ಲಿ ನಟ ಅವರನ್ನು ತಳ್ಳಿದಕ್ಕೆ ಶಿಕ್ಷೆಯಾಗಿ ರೆಡ್ ಕಾರ್ಡ್ ದೊರೆತಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12
ಬಿಗ್ ಬಾಸ್ ಕನ್ನಡ ಸೀಸನ್ 12 ಈಗಾಗಲೇ ಹಲವಾರು ವಿವಾದವನ್ನು ಎದುರಿಸಿದೆ, ಹೌದು ಪರಿಸರ ನಿಯಮಗಳ ಉಲಂಘನೆಗಾಗಿ ಅಕ್ಟೋಬರ್ 7 ರಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತರ ಮಂಡಳಿ ಸ್ಟುಡಿಯೋ ಅನ್ನು ಮುಚ್ಚಿದೆ. ಸರ್ಕಾರ ಮಧ್ಯ ಹಸ್ತಕ್ಷೇಪ ಮಾಡಿ ಮತ್ತೆ ಶೋ ಆರಂಭಿಸಲಾಗಿದೆ. ಇದೀಗ ಗಿಲ್ಲಿ ನಟನ ಮೇಲಿನ ಆರೋಪ ಮಹಿಳಾ ಸುರಕ್ಷತೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

