About Self Acquired Property: ಭಾರತದಲ್ಲಿ ಆಸ್ತಿಗೆ ಸಂಬಂಧಪಟ್ಟಂತೆ ಜಗಳ, ಗಲಾಟೆ, ಮನಸ್ತಾಪಗಳು ಸರ್ವೇ ಸಾಮಾನ್ಯವಾಗಿದೆ. ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ಕಾನೂನು ಹೊಸ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದೀಗ ಅಪ್ಪನ ಆಸ್ತಿಯಲ್ಲಿ ಮಕ್ಕಳಿಗೆ ಯಾವಾಗ ಹಕ್ಕು ಇರುವುದಿಲ್ಲ ಎನ್ನುವ ಪ್ರಶ್ನೆ ಹಲವರಲ್ಲಿ ಮೂಡಿದೆ. ಇದೀಗ ನಾವು ತಂದೆಯ ಆಸ್ತಿ ಮಕ್ಕಳಿಗೆ ಯಾವಾಗ ಸೇರುತ್ತದೆ ಮತ್ತು ಯಾವ ಸಮಯದಲ್ಲಿ ಸೇರಿವುದಿಲ್ಲ ಅನ್ನುವ ಬಗ್ಗೆ ಮಾಹಿತಿಯನ್ನ ತಿಳಿದುಕೊಳ್ಳೋಣ.
ತಂದೆಯ ಸ್ವಯಾರ್ಜಿತ ಆಸ್ತಿ
ತಂದೆ ಸ್ವತಃ ತಾನೇ ದುಡಿದು, ತನ್ನ ಆದಾಯದಿಂದ ಸಂಪಾದಿಸಿದ ಆಸ್ತಿಯಾಗಿರುತ್ತದೆ. ಅಂದರೆ ತಂದೆ ತಾನು ಮಾಡುವ ಉದ್ಯೋಗದ ಸಂಬಳದಿಂದ ಖರೀದಿಸಿದ ಮನೆ, ಭೂಮಿ, ಬ್ಯಾಂಕ್ ಬ್ಯಾಲೆನ್ಸ್ ಆಗಿರುತ್ತದೆ. ಈ ಆಸ್ತಿಯ ಮೇಲೆ ಮಾಲಿಕನಿಗೆ ಸಂಪೂರ್ಣ ಹಕ್ಕು ಇರುತ್ತದೆ, ಮತ್ತು ಆತ ಈ ಆಸ್ತಿಯನ್ನು ಯಾರಿಗೆ ಬೇಕಾದರೂ ದಾನ ಮಾಡಬಹುದಾಗಿದೆ.
ಅಪ್ಪನ ಆಸ್ತಿಯನ್ನು ಮಕ್ಕಳಿಗೆ ಈ 4 ಸಂದರ್ಭದಲ್ಲಿ ಹಕ್ಕು ಇರುವುದಿಲ್ಲ
1 ) ತಂದೆ ಜೀವಂತವಾಗಿದ್ದಾಗ
ಸ್ವಯಾರ್ಜಿತ ಆಸ್ತಿಯಲ್ಲಿ ಮಕ್ಕಳಿಗೆ ಜನ್ಮಸಿದ್ಧ ಹಕ್ಕು ಇರುವುದಿಲ್ಲ. ತಂದೆ ತಾನು ಸಂಪಾದಿಸಿದ ಆಸ್ತಿಯನ್ನು ತನ್ನ ಇಚ್ಚೆಯಂತೆ ದಾನ ಮಾಡುವ, ಮಾರಾಟ ಮಾಡುವ ಹಕ್ಕನ್ನು ಹೊಂದಿರುತ್ತಾನೆ.
2 ) ವಿಲ್ ಬರೆದಿಟ್ಟಿದ್ದರೆ
ತಂದೆ ತನ್ನ ಆಸ್ತಿಯನ್ನು ವಿಲ್ ಮೂಲಕ ಯಾರಿಗೆ ಬೇಕಾದರೂ (ಪತ್ನಿ, ಸ್ನೇಹಿತ, ಸಂಸ್ಥೆ, ದತ್ತಿ ಸಂಸ್ಥೆ) ಬರೆದುಕೊಟ್ಟಿದ್ದರೆ, ಮಕ್ಕಳಿಗೆ ಆ ಆಸ್ತಿಯಲ್ಲಿ ಯಾವುದೇ ಹಕ್ಕು ಇರುವುದಿಲ್ಲ. ವಿಲ್ ಕಾನೂನು ಬದ್ದವಾಗಿದ್ದರೆ ಅದು ಅಂತಿಮವಾಗಿರುತ್ತದೆ. (Indian Succession Act, 1925)
3 ) ಗಿಫ್ಟ್ ಡೀಡ್ ಮಾಡಿದ್ದರೆ
ತಂದೆ ಜೀವಂತವಾಗಿದ್ದಾಗಲೇ ತನ್ನ ಆಸ್ತಿಯನ್ನು ಗಿಫ್ಟ್ ಡೀಡ್ ಮೂಲಕ ಮಗನಿಗೆ ಅಥವಾ ಬೇರೆ ಯಾರಿಗಾದರೂ ಕೊಟ್ಟರೆ, ಆ ಆಸ್ತಿ ಆ ನಂತರ ಅವರ ಆಸ್ತಿಯೇ ಅಲ್ಲ. ಮಕ್ಕಳಿಗೆ ಕೇಳಲು ಹಕ್ಕು ಇರುವುದಿಲ್ಲ.
4 ) 2005 ಕಿಂತ ಮೊದಲು ತಂದೆ ಸತ್ತಿದ್ದರೆ ಮತ್ತು ಪುತ್ರಿಯರು ಮಾತ್ರ ಇದ್ದರೆ
2005 ರ ತಿದ್ದುಪಡಿಗಿಂತ ಮೊದಲು ತಂದೆ ಸತ್ತಿದ್ದರೆ ಮತ್ತು ಆ ಆಸ್ತಿಯನ್ನು ಇಲ್ಲಿಯತನಕ ಯಾರು ಕೂಡ ಆ ಆಸ್ತಿಯನ್ನು ವಿಭಾಗ ಮಾಡದೇ ಇದ್ದರೆ ಮಾತ್ರ ಹಳೆಯ ಕಾನೂನು ಅನ್ವಯವಾಗುತ್ತದೆ.
ತಂದೆ ಮೃತಪಟ್ಟ ನಂತರ
ತಂದೆ ಜೀವಂತವಿಲ್ಲದ ಸಂದರ್ಭದಲ್ಲಿ ಸ್ವಯಾರ್ಜಿತ ಆಸ್ತಿ ಉತ್ತರಾಧಿಕಾರಕ್ಕೆ ಬರುತ್ತದೆ. ವಿಲ್ ಇಲ್ಲದ ಸಂದರ್ಭದಲ್ಲಿ ಮಗ ಮತ್ತು ಮಗಳಿಗೆ ಆಸ್ತಿಯಲ್ಲಿ ಸಮಾನ ಹಕ್ಕು ಇದೆ. ಒಂದು ವೇಳೆ ವಿಲ್ ಬರೆದಿತ್ತು ಸತ್ತಿದ್ದರೆ, ಆತನ ಆಸ್ತಿಯಲ್ಲಿ ಮಕ್ಕಳಿಗೆ ಪಾಲು ಸಿಗುವುದಿಲ್ಲ. (ಹಿಂದೂ ಉತ್ತರಾಧಿಕಾರ ಕಾಯ್ದೆ, ಸೆಕ್ಷನ್ 8 ಮತ್ತು 2005 ರ ತಿದ್ದುಪಡಿ ಪ್ರಕಾರ). ಇದು ಸುಪ್ರೀಮ್ ಕೋರ್ಟ್ ದ್ರಢಪಡಿಸಿದ ಕಾನೂನು ಆಗಿರುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

