Rights Of Parents On Property: ಸುಪ್ರೀಂ ಕೋರ್ಟ್ ಇತ್ತೀಚಿಗೆ ತಂದೆ ಮತ್ತು ತಾಯಿಯ ಆಸ್ತಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಕೊಟ್ಟಿದ್ದು ಸದ್ಯ ಸುಪ್ರೀಂ ಕೋರ್ಟಿನ ಈ ತೀರ್ಪು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹಿಂದೂ ಉತ್ತರಾಧಿಕಾರ ಕಾಯಿದೆಯ ಪ್ರಕಾರ, ಮಕ್ಕಳಿಗೆ ತಂದೆ ಮತ್ತು ತಾಯಿಯ ಆಸ್ತಿಯಲ್ಲಿ ಪಾಲು ಸಿಗುತ್ತೆ. ಮಕ್ಕಳು ಕೆಲವು ಸಮಯದಲ್ಲಿ ತಂದೆ ಮತ್ತು ತಾಯಿ ಆಸ್ತಿಯಲ್ಲಿ ಕಡ್ಡಾಯವಾಗಿ ಪಾಲು ಪಡೆದುಕೊಳ್ಳುತ್ತಾರೆ. ಆದರೆ ಈಗ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಇನ್ನುಮುಂದೆ ಮಕ್ಕಳು ತಂದೆ ಅಥವಾ ತಾಯಿ ಆಸ್ತಿಯಲ್ಲಿ ಪಾಲು ಪಡೆದುಕೊಳ್ಳಬೇಕಾದರೆ ಕಾನೂನು ನಿಯಮ ಪಾಲನೆ ಮಾಡಬೇಕು. ಹಾಗಾದರೆ ತಂದೆ ಮತ್ತು ತಾಯಿಯ ಆಸ್ತಿಯಲ್ಲಿ ಮಕ್ಕಳಿಗೆ ಯಾವಾಗ ಪಾಲು ಸಿಗಲ್ಲ ಮತ್ತು ಸುಪ್ರೀಂ ಹೊರಡಿಸಿರುವ ಆದೇಶ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೆತ್ತವರನ್ನು ಕಡೆಗಣಿಸಿದರೆ ಆಸ್ತಿ ಸಿಗಲ್ಲ
ಕೆಲವು ಮಕ್ಕಳು ಹೆತ್ತವರಿಂದ ಆಸ್ತಿಯಲ್ಲಿ ಪಾಲು ಪಡೆದುಕೊಂಡ ನಂತರ ಅವರನ್ನು ಕಡೆಗಣನೆ ಮಾಡುತ್ತಾರೆ. ಅಂದರೆ ವೃದ್ದಾಪ್ಯದಲ್ಲಿ ಅವರ ಆರೈಕೆ ಮಾಡದೆ ಇರುವುದು, ಅವರ ಖರ್ಚಿಗೆ ಹಣ ಕೊಡದೆ ಇರುವುದು, ಆರೋಗ್ಯ ಸರಿಯಾಗಿ ನೋಡಿಕೊಳ್ಳದೆ ಇರುವುದು, ಹೀಗೆ ಅವರನ್ನು ಕಡೆಗಣಿಸುವ ಕೆಲಸ ಮಾಡುತ್ತಾರೆ. ಹೆತ್ತವರು ಮುದುಕರಾದಾಗ ಅವರನ್ನು ನೋಡಿಕೊಳ್ಳದ, ಆರ್ಥಿಕವಾಗಿ-ಭಾವನಾತ್ಮಕವಾಗಿ ಬಿಟ್ಟುಬಿಟ್ಟ ಮಕ್ಕಳಿಗೆ ಆ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಸ್ಪಷ್ಟವಾಗಿ ಹೇಳಿದೆ.
ದಾನಪತ್ರ ರದ್ದು ಮಾಡಬಹುದು
ಹೆತ್ತವರು ಮಕ್ಕಳಿಗೆ ಆಸ್ತಿ ಹಂಚಿಕೆ ಮಾಡಿದ ನಂತರ ಮಕ್ಕಳು ಅವರನ್ನು ನೋಡಿಕೊಳ್ಳದೆ ಇದ್ದರೆ ಹೆತ್ತವರು ಮಕ್ಕಳಿಗೆ ಕೊಟ್ಟ ಆಸ್ತಿಯ ದಾನಪತ್ರ ರದ್ದುಮಾಡುವ ಅಧಿಕಾರ ಹೊಂದಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಇದೊಂದು ದೊಡ್ಡ ಬದಲಾವಣೆಯಾಗಿದ್ದು, ಇನ್ನು ಮುಂದೆ ಹಿರಿಯ ನಾಗರಿಕರ ಹಕ್ಕುಗಳು ಇನ್ನಷ್ಟು ಬಲಗೊಳ್ಳಲಿವೆ.
ಕಾನೂನು ನಿಯಮಗಳು ಹೇಳುವುದೇನು?
2007ರಲ್ಲಿ ಜಾರಿಗೆ ಬಂದ “Maintenance and Welfare of Parents and Senior Citizens Act” ಈಗಿರುವಂತೆ ಹೆತ್ತವರನ್ನು ನೋಡಿಕೊಳ್ಳುವುದು ಮಕ್ಕಳ ಕಾನೂನು ಜವಾಬ್ದಾರಿಯಾಗಿದೆ.ಈ ಕನೂ ದೇಶದ ಎಲ್ಲಾ ರಾಜ್ಯಗಳಿಗೆ ಅನ್ವಯ ಆಗಲಿದೆ. ಈ ಕಾಯ್ದೆಯ ಸೆಕ್ಷನ್ 23(2) ಪ್ರಕಾರ, ಹಿರಿಯರು ತಮ್ಮ ಆಸ್ತಿಯನ್ನು ಉಡುಗೊರೆಯಾಗಿ (gift) ಕೊಟ್ಟಿದ್ದರೆ ಮತ್ತು ನಂತರ ಮಕ್ಕಳು ಅವರನ್ನು ಕಡೆಗಣಿಸಿದ್ದಲ್ಲಿ ಆ ಉಡುಗೊರೆಯನ್ನು ರದ್ದುಗೊಳಿಸಬಹುದು ಅಥವಾ ಆಸ್ತಿಯನ್ನು ವಾಪಸ್ ಪಡೆಯಬಹುದು ಅಥವಾ ಆಸ್ತಿ ದಾನಪತ್ರ ರದ್ದು ಮಾಡಬಹುದು.
ಹೆತ್ತವರು ಪಾಲಿಸಬೇಕಾದ ಕೆಲವು ನಿಯಮಗಳು
* ಮಕ್ಕಳಿಗೆ ಆಸ್ತಿ ಕೊಡುವ ಮುನ್ನ ದಾಖಲೆಗಳನ್ನು ಸರಿಯಾಗಿ ಸಿದ್ಧಪಡಿಸಬೇಕು
* ಒಪ್ಪಂದ ಮಾಡಿಕೊಳ್ಳುವ ಸಮಯದಲ್ಲಿ ಆರೈಕೆ ಮತ್ತು ಇತರೆ ಅಂಶ ನಮೂದಿಸಬೇಕು
* ದಾನಪತ್ರದಲ್ಲಿ ಎಲ್ಲಾ ಷರತ್ತುಗಳನ್ನು ಸರಿಯಾಗಿ ನಮೂದಿಸಬೇಕು.
ಈ ತೀರ್ಪು ಭಾರತದಲ್ಲಿ ಲಕ್ಷಾಂತರ ಮುದುಕರಿಗೆ ದೊಡ್ಡ ನಿರಾಳತೆ ನೀಡಿದೆ. ಇನ್ನು ಮುಂದೆ “ಹೆತ್ತವರನ್ನು ಮರೆತರೆ ಆಸ್ತಿ ಸಿಗಲ್ಲ” ಎಂಬ ಸಂದೇಶ ದೇಶಾದ್ಯಂತ ಗಟ್ಟಿಯಾಗಿ ಕೇಳಿಸುತ್ತಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

