Gruha Lakshmi Bank Loan: ನೀವು ಮನೆಯಲ್ಲೇ ಕುಳಿತುಕೊಂಡು ಸ್ವಂತ ಉದ್ಯಮವನ್ನು ಆರಂಭಿಸಿ ಸ್ವಾವಲಂಭಿ ಆಗಬೇಕು ಅಂದುಕೊಂಡಿದ್ದರೆ, ಈಗಲೇ ಈ ಯೋಜನೆಗೆ ಸೇರಿಕೊಂಡು ಸಾಲ ಸೌಲಭ್ಯವನ್ನು ಪಡೆದು ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ. ಹೌದು, ಕರ್ನಾಟಕ ರಾಜ್ಯ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಯಾವುದೇ ಹೆಚ್ಚಿನ ದಾಖಲೆ ಇಲ್ಲದೆ 3 ಲಕ್ಷ ಸಾಲವನ್ನು ಕಡಿಮೆ ಬಡ್ಡಿಗೆ ನೀಡುತ್ತಿದೆ. ಮಹಿಳೆಯರ ಆರ್ಥಿಕ ಸಬಲೀಕರಣ ಇದರ ಮೂಲ ಉದ್ದೇಶ ಆಗಿದೆ. ಇದೀಗ ನಾವು 3 ಲಕ್ಷ ಸಾಲದೊಂದಿಗೆ ಯಾವೆಲ್ಲ ಉದ್ಯಮವನ್ನು ಆರಂಭಿಸಬಹುದು ಅನ್ನುವ ಬಗ್ಗೆ ಮಾಹಿತಿಯನ್ನ ತಿಳಿದುಕೊಳ್ಳೋಣ.
ಗೃಹ ಲಕ್ಷ್ಮಿ ಸಾಲ ಯೋಜನೆ
ಕರ್ನಾಟಕ ರಾಜ್ಯ ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ ಜಾರಿಗೊಳಿಸಿರುವ ಈ ಯೋಜನೆಯು ಗೃಹ ಲಕ್ಷ್ಮಿ ಹಣ ಪಡೆದುಕೊಳ್ಳುವ ಮಹಿಯರಿಗೆ ಮಾತ್ರ ಸೀಮಿತವಾಗಿವುದೇ. ಈ ಯೋಜನೆಯಡಿಯಲ್ಲಿ 3 ಲಕ್ಷ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಈ ಸಾಲವನ್ನು ಉಪಯೋಗಿಸಿಕೊಂಡು ಸ್ವಂತ ಉದ್ಯಮವನ್ನು ಆರಂಭಿಸಬಹುದಾಗಿದೆ.
ಗೃಹಲಕ್ಷ್ಮಿ ಸಾಲ ಯೋಜನೆಯ ಅರ್ಹತೆ
* BPL ,APL ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಸೀಮಿತವಾಗಿದೆ.
* ವಾರ್ಷಿಕ ಆದಾಯ 1.5 ಲಕ್ಷಕ್ಕಿಂತ ಕಡಿಮೆ ಇರಬೇಕು.
* ವಿಧವೆ ಅಥವಾ ಅಂಗವಿಕಲ ಮಹಿಳೆಯರಿಗೆ ಹೆಚ್ಚಿನ ಸೌಲಭ್ಯ ಸಿಗುತ್ತದೆ.
ಸ್ವಂತ ಉದ್ಯಮ ಆರಂಭಿಸಲು ಸಲಹೆಗಳು
* ಇದೀಗ ನೀವು 3 ಲಕ್ಷ ಸಾಲವನ್ನು ಪಡೆದುಕೊಂಡು ಸ್ವಂತ ಉದ್ಯಮವನ್ನು ಆರಂಭಿಸಬೇಕು ಅಂದುಕೊಂಡಿದ್ದರೆ, ಚಿಕ್ಕ ಮಟ್ಟದ ವ್ಯಾಪಾರಕ್ಕೆ ಈ ಸಾಲ ಸೂಕ್ತವಾಗಿದೆ. ಹೌದು, ನೀವು ದಿನಸಿ ಅಂಗಡಿ ತೆರೆಯುವ ಮೂಲಕ ನಿಮ್ಮ ವ್ಯಾಪಾರವನ್ನು ಆರಂಭಿಸಬಹುದಾಗಿದೆ. 1-2 ಲಕ್ಷ ರೂಪಾಯಿಯಲ್ಲಿ ಆರಂಭಿಕ ಸ್ಟಾಕ್ ಖರೀದಿಸಬಹುದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ದಿನಕ್ಕೆ 5000 ರೂಪಾಯಿ ಆದಾಯ ಗಳಿಸಬಹುದು.
* ಹಾಗೆ ಹ್ಯಾಂಡ್ ಕ್ರಾಫ್ಟ್ ಉತ್ಪನ್ನವನ್ನು ಕೂಡ ತಯಾರು ಮಾಡಿ ಮಾರಾಟ ಮಾಡಬಹುದಾಗಿದೆ. ಕೈಗಾರಿಕಾ ಸಾಮಗ್ರಿಗೆ 50,000 ಖರ್ಚು ಮಾಡಿ, ಆನ್ಲೈನ್ ಮೂಲಕ ಮಾರಾಟ ಮಾಡಿ ಲಾಭ ಗಳಿಸಬಹುದಾಗಿದೆ.
* ಇನ್ನು ಕೃಷಿ ಕ್ಷೇತ್ರದಲ್ಲಿ ಸಣ್ಣ ಯಂತ್ರಗಳನ್ನು ಸಾಲದ ಮೂಲಕ ಖರೀದಿಸಿ ಬೆಳೆಯನ್ನು ಬೆಳೆಯಬಹುದಾಗಿದೆ. ಇದರಿಂದ ವಾರ್ಷಿಕವಾಗಿ 2-3 ಲಕ್ಷ ಲಾಭ ಗಳಿಸಬಹುದಾಗಿದೆ.
* ಟೀ ಸ್ಟಾಲ್ ಅಥವಾ ಸಣ್ಣ ಹೋಟೆಲ್ ಆರಂಭಿಸುದರಿಂದ ದಿನಕ್ಕೆ 2 ರಿಂದ 3 ಸಾವಿರ ಸಂಪಾಧನೆ ಮಾಡಬಹುದು.
* ಟೈಲರಿಂಗ್ ಶಾಪ್, ಇದು ಗ್ರಾಮೀಣ ಮಹಿಳೆಯರಿಗೆ ಸೂಕ್ತವಾದ ಉದ್ಯೋಗವಾಗಿದೆ.
* ಇತರೆ ಉದ್ಯಮಗಳು; ಮೀನುಗಾರಿಕೆ, ಸಲೂನ್ ಸರ್ವಿಸ್ ಇತ್ಯಾದಿಗಳು.
ಇವುಗಳು ಕಡಿಮೆ ಹೂಡಿಕೆಯೊಂದಿಗೆ 6-12 ತಿಂಗಳುಗಳಲ್ಲಿ ಲಾಭವನ್ನು ಗಳಿಸಿಕೊಳ್ಳಬಹುದಾಗಿದೆ. ಹಾಗೆ ನಿಮ್ಮ ಸ್ಥಳೀಯ ಮಾರುಕಟ್ಟೆಯ ಅಗತ್ಯವನ್ನು ನೋಡಿಕೊಂಡು ಉದ್ಯಮವನ್ನು ಆರಂಭಿಸಿ.
ಈ ರೀತಿಯಾಗಿ ಅರ್ಜಿ ಸಲ್ಲಿಸಿ
ಮೊದಲು ಸೇವಾ ಸಿಂಧು ಪೋರ್ಟಲ್ (https://sevasindhu.karnataka.gov.in/Sevasindhu/Kannada?ReturnUrl=%2F) ಗೆ ಭೇಟಿನೀಡಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತು ಆದಾಯ ಸರ್ಟಿಫಿಕೇಟ್ ಮಾಹಿತಿಯನ್ನು ಅಪ್ಲೋಡ್ ಮಾಡಿ, ಗೃಹ ಲಕ್ಷ್ಮಿ ಸಾಲ ಯೋಜನೆ ಹುಡುಕಿ ಫಾರ್ಮ್ ಭರ್ತಿ ಮಾಡಿ. ನಂತರ ಸ್ಥಳೀಯ ಸಹಕಾರಿ ಸಂಘ ಅಥವಾ ಬ್ಯಾಂಕಿನ ಮೂಲಕ ಸಾಲ ಪಡೆದುಕೊಳ್ಳಿ. ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ ಗ್ರಾಂ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಕ್ಕೆ ಭೇಟಿ ನೀಡಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

