TRAI 1600 Series Spam Call Identification: ಇದೀಗ TRAI (ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ) ಆರ್ಥಿಕ ಸಂಸ್ಥೆಗಳ ಕರೆಯನ್ನು ಸುಲಭವಾಗಿ ಗುರುತಿಸಲು ಹೊಸ ಬದಲಾವಣೆಯನ್ನು ಜಾರಿಗೆ ತಂದಿದೆ. ಫ್ರಾಡ್ ಕರೆಗಳಿಂದ ಜನರನ್ನು ರಕ್ಷಣೆ ನೀಡುವುದು ಇದರ ಮೂಲ ಉದ್ದೇಶ ಆಗಿದೆ. ಈ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳೋಣ.
TRAI (ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ)
ಇದು ಭಾರತದಲ್ಲಿ ದೂರಸಂಪರ್ಕ ಉದ್ಯಮವನ್ನು ನಿಯಂತ್ರಿಸುವ ಶಾಸನಬದ್ಧ ಸಂಸ್ಥೆ ಆಗಿದೆ, TRAI ಅನ್ನು 1997 ರಲ್ಲಿ ಗ್ರಾಹಕರು ಮತ್ತು ಸೇವಾ ಪೂರೈಕೆದಾರರ ಹಿತಾಸಕ್ತಿಗಳನ್ನು ರಕ್ಷಿಸಲು, ಸುಂಕಗಳು ಮತ್ತು ಸೇವೆಯ ಗುಣಮಟ್ಟದಂತಹ ವಿಷಯಗಳ ಕುರಿತು ನೀತಿಗಳು ಮತ್ತು ನಿಯಮಗಳ ಮೂಲಕ ದೂರಸಂಪರ್ಕ ಕ್ಷೇತ್ರದ ಕ್ರಮಬದ್ಧ ಬೆಳವಣಿಗೆಯನ್ನು ತರಲು ಜಾರಿಗೆ ತರಲಾಗಿದೆ.
TRAI ನ ಹೊಸ ನಿಯಮ
ಇದೀಗ TRAI ಬ್ಯಾಂಕಿಂಗ್, ಇನ್ಸೂರೆನ್ಸ್ ಕಂಪನಿ, NBFC , ಮ್ಯೂಚುಯಲ್ ಫಂಡ್, ಸ್ಟಾಕ್ ಮಾರ್ಕೆಟ್, ಹೀಗೆ ಇನ್ನಿತರ ಹಣಕಾಸು ಸಂಸ್ಥೆಗಳಿಗೆ ಒಂದು ಸ್ಪಷ್ಟ ಆದೇಶವನ್ನು ಹೊರಡಿಸಿದೆ. ಇನ್ನುಮುಂದೆ ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ಕರೆ ಮಾಡಲು “1600” ರ ಸರಣಿ ನಂಬರ್ ಗಳನ್ನೂ ಬಳಸಬೇಕು ಎಂದು ಹೊಸ ನಿಯಮವನ್ನು ಜಾರಿಗೆ ತಂದಿದೆ. ಇದರ ಮೂಲಕ ಮೊಬೈಲ್ ನಂಬರ್ ನಿಂದ ಬರುವ 99% ಕರೆಗಳು ಫ್ರಾಡ್ ಆಗಿರುತ್ತದೆ ಎಂದು ಸುಲಭವಾಗಿ ಗುರುತಿಸಬಹುದಾಗಿದೆ. ಈ ನಿಯಮವನ್ನು ನವೆಂಬರ್ 19 , 2025 ರಂದು ಜಾರಿಗೆ ತರಲಾಗಿದೆ. ಫ್ರಾಡ್ ಕರೆಗಳನ್ನು ತಡೆಗಟ್ಟುದು ಇದರ ಮೂಲ ಉದ್ದೇಶ ಆಗಿದೆ.
“1600” ಸರಣಿ ನಂಬರ್ ನ ಕಾರ್ಯ..?
ಇದೀಗ “1600” ಸರಣಿಯನ್ನು DoT (ಡಿಪಾರ್ಟ್ಮೆಂಟ್ ಆಫ್ ಟೆಲಿಕಮ್ಯುನಿಕೇಷನ್ಸ್) BFSI (ಬ್ಯಾಂಕಿಂಗ್, ಫೈನಾನ್ಸಿಯಲ್ ಸರ್ವಿಸ್, ಇನ್ಸೂರೆನ್ಸ್) ಸೆಕ್ಟರ್ ಗೆ ಮೀಸಲು ಇಟ್ಟಿದೆ. ಮೊದಲು +91 987123XXXX ನಂಬರ್ ನಿಂದ ಕರೆ ಬರುತಿತ್ತು, ಇನ್ನುಮುಂದೆ 1600-45-XXXX ನಂಬರ್ ನಿಂದ ಕರೆ ಬರುತ್ತದೆ.
ಈ ಸರಣಿಯನ್ನು ಯಾವ ಕಂಪನಿ, ಯಾವಾಗ ಅಳವಡಿಸಿಕೊಳ್ಳುತ್ತದೆ..?
* ವಾಣಿಜ್ಯ ಬ್ಯಾಂಕ್ (ಸರ್ಕಾರೀ, ಖಾಸಗಿ, ವಿದೇಶಿ) ಗಳು ಜನವರಿ 1, 2026 ರಿಂದ ಆರಂಭಿಸುತ್ತದೆ.
*ದೊಡ್ಡ NBFC (ಬ್ಯಾಂಕೇತರ ಹಣಕಾಸು ಸಂಸ್ಥೆ) ಗಳು ಫೆಬ್ರುವರಿ 1, 2026 ರಿಂದ ಆರಂಭಿಸುತ್ತದೆ.
* ಪೇಮೆಂಟ್ ಬ್ಯಾಂಕ್ ಗಳು ಮತ್ತು ಸಣ್ಣ ಫೈನಾನ್ಸ್ ಬ್ಯಾಂಕುಗಳು ಫೆಬ್ರುವರಿ 1, 2026 ರಿಂದ ಆರಂಭಿಸುತ್ತದೆ.
* ಮ್ಯೂಚುಯಲ್ ಫಂಡ್ ಮತ್ತು ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಗಳು ಫೆಬ್ರುವರಿ 15, 2026 ರಿಂದ ಆರಂಭಿಸುತ್ತದೆ.
* ಸ್ಟಾಕ್ ಬ್ರೋಕರ್ ಗಳು ಮಾರ್ಚ್ 15, 2026 ರಿಂದ ಆರಂಭಿಸುತ್ತದೆ.
* ಇನ್ಸೂರೆನ್ಸ್ ಕಂಪನಿಗಳಿಗೆ ಶೀಘ್ರದಲ್ಲೇ ದಿನಾಂಕವನ್ನು ಸೂಚಿಸಲಾಗುತ್ತದೆ.
* SEBI ನೋಂದಾಯಿತ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಅಳವಡಿಸಬಹುದು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

