UPS Vs NPS: ಪಿಂಚಣಿ ಯೋಜನೆಗಳು ಭವಿಷ್ಯದಲ್ಲಿ ಆದಾಯವನ್ನು ಒದಗಿಸುವ ಉದ್ದೇಶ ಹೊಂದಿವೆ. ಪಿಂಚಣಿ ಯೋಜನೆಯ ಮೂಲಕ ನೀವು ನಿಯಮಿತವಾಗಿ ಹಣವನ್ನು ಠೇವಣಿ ಮಾಡುವುದರಿಂದ ನಿವೃತ್ತಿಯ ನಂತರ ದೊಡ್ಡ ಮೊತ್ತದ ಪಿಂಚಣಿಯನ್ನು ಪಡೆಯಬಹುದಾಗಿದೆ. ಪಿಂಚಣಿ ಯೋಜನೆಯಲ್ಲಿ ಹಲವಾರು ಯೋಜನೆಗಳಿವೆ, ಆದರೆ, ಯಾವುದು ನಿಮಗೆ ಉತ್ತಮ..? ಈ ಲೇಖನದಲ್ಲಿ ಎರಡರ ನಡುವಿನ ವ್ಯತ್ಯಾಸಗಳನ್ನು ನಾವೀಗ ತಿಳಿದುಕೊಳ್ಳೋಣ.
1 ) OPS ( OLD Pension Schem )
ಹಳೆಯ ಪಿಂಚಣಿ ಯೋಜನೆ (OPS) ಅಡಿಯಲ್ಲಿ, ನಿವೃತ್ತರು ತಮ್ಮ ಕೊನೆಯ ಮೂಲ ವೇತನದ 50% ಗೆ ಸಮಾನವಾದ ಮಾಸಿಕ ಪಿಂಚಣಿಯನ್ನು ಪಡೆಯುತ್ತಾರೆ, ಇದನ್ನು ಸಂಪೂರ್ಣವಾಗಿ ಸರ್ಕಾರದಿಂದ ನೀಡಲಾಗುತ್ತದೆ ಮತ್ತು ತುಟ್ಟಿ ಭತ್ಯೆ (DA) ಹೆಚ್ಚಳದ ಮೂಲಕ ಹಣದುಬ್ಬರಕ್ಕೆ ಸರಿಹೊಂದಿಸಲಾಗುತ್ತದೆ. ಈ ಯೋಜನೆಯು ಕುಟುಂಬ ಪಿಂಚಣಿಯನ್ನು ಸಹ ಒದಗಿಸುತ್ತದೆ ಮತ್ತು ನೌಕರರು ತಮ್ಮ ಪಿಂಚಣಿ ನಿಧಿಗೆ ಕೊಡುಗೆ ನೀಡುವ ಅಗತ್ಯವಿಲ್ಲ. ಈ ಯೋಜನೆಯನ್ನು ಈಗ ರದ್ದುಮಾಡಲಾಗಿದೆ.
NPS (National Pension Scheme)
ಹಳೆಯ ಪಿಂಚಣಿ ಯೋಜನೆಯನ್ನು 2004 ರಲ್ಲಿ ರದ್ದು ಮಾಡಿ, ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಅನ್ನು ಜಾರಿಗೆ ತರಲಾಗಿದೆ. ಇದು 2004 ರಲ್ಲಿ ಆರಂಭವಾದ ಮಾರುಕಟ್ಟೆ ಆಧಾರಿತ ಪಿಂಚಣಿ ಯೋಜನೆಯಾಗಿದೆ. ಈ ಯೋಜನೆಯಲ್ಲಿ, ಸರ್ಕಾರೀ ನೌಕರರು ತಮ್ಮ ವೇತನದ 10 % ಕೊಡುಗೆಯನ್ನು ನೀಡುತ್ತಾರೆ, ಮತ್ತು ಸರ್ಕಾರವೂ ಸಮಾನವಾದ ಕೊಡುಗೆಯನ್ನು ನೀಡುತ್ತದೆ. ಈ ಹಣವನ್ನು ಷೇರುಗಳು, ಸರ್ಕಾರಿ ಬಾಂಡ್‌ಗಳಳ್ಳಿ ಹೂಡಿಕೆ ಮಾಡಲಾಗುವುತ್ತದೆ. NPS ನಲ್ಲಿ ನೌಕರರು ತಮ್ಮ ಹೂಡಿಕೆಯ ಆಯ್ಕೆಗಳನ್ನು ಆಯ್ದುಕೊಳ್ಳಬಹುದು. ಉದಾಹರಣೆಗೆ, ಇಕ್ವಿಟಿ, ಡೆಟ್, ಅಥವಾ ಮಿಶ್ರಿತ ಫಂಡ್‌ಗಳು. ಆದರೆ, ಈ ಯೋಜನೆಯ ಲಾಭವು ಮಾರುಕಟ್ಟೆಯ ಏರಿಳಿತಗಳಿಗೆ ಒಳಪಟ್ಟಿರುತ್ತದೆ, ಇದರಿಂದ ಅಪಾಯದ ಸಾಧ್ಯತೆ ಹೆಚ್ಚು.
NPS ಮತ್ತು OPS ನಲ್ಲಿ ಯಾವುದು ಬೆಸ್ಟ್
* OPS ನಲ್ಲಿ ಜೀವನ ಪೂರ್ತಿ ಖಚಿತ ಪಿಂಚಣಿ ಸಿಗುತ್ತದೆ. ಮಾರುಕಟ್ಟೆಯಲ್ಲಿ ಯಾವುದೇ ಬದಲಾವಣೆ ಆದರೂ ಸಹ ಪಿಂಚಣಿ ಮೇಲೆ ಪರಿಣಾಮ ಬಿರುದಿಲ್ಲ.ಆದರೆ NPS ನಲ್ಲಿ ಮಾರುಕಟ್ಟೆ ಆಧಾರದ ಮೇಲೆ ಲಾಭ ಸಿಗುತ್ತದೆ.
* OPS ನಲ್ಲಿ ಕೆಲಸ ಮಾಡುವ ನೌಕರರು ಹಣ ಹಾಕುವ ಅಗತ್ಯ ಇಲ್ಲ, ಪಿಂಚಣಿಯ ಸಂಪೂರ್ಣ ಹಣವನ್ನು ಸರ್ಕಾರ ನೀಡುತ್ತದೆ. ಆದರೆ NPS ನಲ್ಲಿ ನೌಕರ ಮತ್ತು ಸರಕಾರ ಸಮಾನವಾದ ಹಣವನ್ನು ಹಾಕಬೇಕು.
* OPS ನಲ್ಲಿ DA ಜೊತೆಗೆ ಪಿಂಚಣಿ ಕೂಡ ಹೆಚ್ಚಾಗುತ್ತದೆ.
* OPS ನಲ್ಲಿ ಟ್ಯಾಕ್ಸ್ ಬೆನಿಫಿಟ್ ಇರುವುದಿಲ್ಲ. NPS ನಲ್ಲಿ 80CCD (1B) 50,000 ಹೆಚ್ಚುವರಿ ಬೆನಿಫಿಟ್ ಸಿಗುತ್ತದೆ.
* OPS ಸರ್ಕಾರೀ ನೌಕರರಿಗೆ ಸೂಕ್ತವಾಗಿದೆ ಹಾಗೆ NPS ಖಾಸಗಿ ಉದ್ಯೋಗಿಗಳು ಮತ್ತು ಸ್ವಯಂ ಉದ್ಯೋಗಿಗಳಿಗೆ ಸೂಕ್ತವಾಗಿ
Disclaimer: This information is provided for awareness purposes only. For personalised legal advice, consult a qualified professional and refer to official government notifications.

