Bigg Boss Kannada Season 12 Gilli And Ashwini Gowda: ಬಿಗ್ ಬಾಸ್ ಮನೆಯಲ್ಲಿ ಜಗಳ ಸರ್ವೇ ಸಾಮಾನ್ಯವಾಗಿದೆ. ಆದರೆ ಈ ವಾರ ಜಗಳ ಅನ್ನುವುದು ಮಿತಿ ಮೀರಿದೆ. ಹೌದು, ಬಿಗ್ ಬಾಸ್ ಕನ್ನಡ ಸೀಸನ್ 12 ರ ಆರಂಭದಿಂದಲೂ ಗಿಲ್ಲಿ ಹಾಗೂ ಅಶ್ವಿನಿ ಗೌಡ ನಡುವೆ ಜಗಳ ನಡೆಯುತ್ತಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಇದೀಗ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಅಶ್ವಿನಿ ಗೌಡ ಜೊತೆ ಜಗಳ ಆಡಿದ ಗಿಲ್ಲಿ, ಇದೀಗ ಅಶ್ವಿನಿ ಗೌಡ ಅವರ ಜೊತೆ ಕ್ಷಮೆ ಕೇಳಿದ್ದಾರೆ. ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.
ಕ್ಯಾಪ್ಟನ್ಸಿ ಟಾಸ್ಕ್ ನ ಜಗಳ
ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಮತ್ತು ಗಿಲ್ಲಿ ನಡುವೆ ದೊಡ್ಡ ಮಾತಿನ ಪ್ರವಾಹವೇ ನೆಡೆದುಹೋಗಿದೆ. ಹೌದು, ಅಭಿಷೇಕ್ ಮತ್ತು ಅಶ್ವಿನಿ ಗೌಡ ಇಬ್ಬರು ಸರಿಯಾಗಿ ಕುಳಿತು, ಮಾಸಶಿಕವಾಗಿ 12 ನಿಮಿಷಗಳನ್ನು ಎಣಿಕೆ ಮಾಡಿ ಬೆಲ್ ಬಾರಿಸಬೇಕಿತ್ತು. ಯಾರು ನಿಖರವಾಗಿ ಸಮಯವನ್ನು ಎಣಿಕೆ ಮಾಡುತ್ತಾರೆ ಅವರೇ ಕ್ಯಾಪ್ಟನ್ ಆಗುತ್ತಾರೆ. ಆದರೆ ಗಿಲ್ಲಿ ನಟ ಅಸ್ವಿನಿ ಗೌಡ ಅವರಿಗೆ ತೊಂದರೆ ಮಾಡಲು ಕೆಟ್ಟ ಮಾತುಗಳನ್ನು ಹೇಳುತ್ತಾರೆ. ಈ ಘಟನೆ ಅಶ್ವಿನಿ ಅವರ ಮನಸ್ಸಿಗೆ ಆಳವಾದ ನೋವು ಉಂಟುಮಾಡುತ್ತದೆ. ಟಾಸ್ಕ್ ಮುಗಿದ ನಂತರ ಅಶ್ವಿನಿ ಗೌಡ ಅವರು ರೂಮ್ ಒಳಗೆ ಹೋಗಿ ಒಬ್ಬರೇ ಅಳುತ್ತ ಮಲಗುತ್ತಾರೆ. ನಂತರ ಜಾನ್ವಿ ಅವರು ಈ ವಿಷಯವನ್ನು ಗಮನಿಸಿ, ಗಿಲ್ಲಿ ಬಳಿ ಹೋಗಿ ” ಇದನ್ನು ಆಟದಂತೆ ತೆಗೆದುಕೋ, ಹೀಗೆಲ್ಲ ನಟನಾಡುವುದು ಸರಿಯಲ್ಲ” ಎಂದು ಹೇಳುತ್ತಾರೆ. ಈ ಮಾತುಗಳು ಗಿಲ್ಲಿಯ ಮನಸ್ಸನ್ನು ಬದಲಾಯಿಸುತ್ತದೆ.
ಅಶ್ವಿನಿ ಗೌಡಗೆ ಗಿಲ್ಲಿ ಕ್ಷಮೆ ಕೇಳಿದ ಕ್ಷಣ
ಜಾನ್ವಿ ಅವರು ಹೇಳಿದ ಮಾತಿನಂತೆ, ಈಗ ಗಿಲ್ಲಿ ನಟ ಅಶ್ವಿನಿ ಅವರ ಬಳಿಗೆ ಹೋಗಿ ಕ್ಷಮೆ ಕೇಳುತ್ತಾರೆ. ” ಟಾಸ್ಕ್ ನಲ್ಲಿ ನಾನು ಹೇಳಿದ ಮಾತುಗಳಿಂದ ನಿನ್ನ ಮನಸ್ಸಿಗೆ ನೋವು ತಂದಿದ್ದರೆ, ದಯವಿಟ್ಟು ಕ್ಷಮಿಸು ” ಎಂದಿದ್ದಾರೆ. ಈ ಸಮಯದಲ್ಲಿ ರಘು ವಿಜಯ್ ಆಶ್ಚರ್ಯ ಗೊಂಡಿದ್ದಾರೆ. ಏಕೆಂದರೆ ಹಿಂದೆ ಗಿಲ್ಲಿ ರಘು ಜೊತೆ ಅಶ್ವಿನಿಗೆ ಕ್ಷಮೆ ಕೇಳಬೇಡ ಎಂದು ಸಲಹೆ ನೀಡಿದ್ದರು. ಬಿಗ್ಗ್ ಬಾಸ್ ಮನೆಯಲ್ಲಿ ಜಗಳ ಸಾಮಾನ್ಯವಾಗಿದೆ. ಆದರೆ ಈ ಬಾರಿ ಗಿಲ್ಲಿಯ ಕ್ಷಮೆ ಒಂದು ಚರ್ಚೆಗೆ ಕಾರಣವಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

