Kichcha Sudeep And Ashwini Gowda: ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಇದೀಗ ಗೌರವದ ಮೇಲೆ ಚರ್ಚೆ ಆರಂಭವಾಗಿದೆ. ಹೌದು, ಕ್ಯಾಪ್ಟನ್ ರಘು ಮತ್ತು ಅಶ್ವಿನಿ ಅವರ ನಡುವೆ ನೆಡೆದ ಘರ್ಷಣೆ ಇದೀಗ ಈ ಚರ್ಚೆಗೆ ಕಾರಣವಾಗಿದೆ. ಸದ್ಯ ವೀಕೆಂಡ್ ಎಪಿಸೋಡ್ ನಲ್ಲಿ ಹೋಸ್ಟ್ ಕಿಚ್ಚ ಸುದೀಪ್ ಅವರು ಅಶ್ವಿನಿ ಗೌಡ ಅವರಿಗೆ ಗೌರವದ ಬಗ್ಗೆ ಉಪದೇಶವನ್ನು ನೀಡಿದ್ದಾರೆ. ಈ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.
ಘಟನೆಯ ಹಿನ್ನೆಲೆ
ಕ್ಯಾಪ್ಟನ್ ರಘು ಮತ್ತು ಅಶ್ವಿನಿ ಗೌಡ ಅವರ ನಡುವೆ ಘರ್ಷಣೆ ಉಂಟಾಗಿತ್ತು. ಮನೆ ಕೆಲಸದಿಂದ ಶುರುವಾದ ಚರ್ಚೆ ದೊಡ್ಡ ಮಟ್ಟದ ಘರ್ಷಣೆಗೆ ಕಾರಣವಾಗಿದೆ. ಈ ಜಗಳದಿಂದ ಅಶ್ವಿನಿ ಅವರು ವುಮೆನ್ ಕಾರ್ಡ್ ಬಳಸಿಕೊಂಡು ಮನೆಯಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿಲ್ಲ ಎಂದು ಆರೋಪವನ್ನು ಮಾಡಿದ್ದಾರೆ. ಮತ್ತು ಅಶ್ವಿನಿ ಅವರು ಆಕ್ರೋಶದಿಂದ ಉಪವಾಸವನ್ನ ಆರಂಭಿಸಿದ್ದಾರೆ. ” ಸ್ವತಃ ಅಶ್ವಿನಿ ಅವರೇ ಏಕವಚನದಲ್ಲಿ ಮಾತನಾಡಿ, ಇನ್ನೊಬ್ಬರು ಗೌರವ ಕೊಡದೆ ಇರುವುದನ್ನು ಎತ್ತಿ ತೋರಿಸುತ್ತಿದ್ದಾರೆ. ” ಈ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು ಅನ್ನುವ ಬಗ್ಗೆ ನೋಡೋಣ.
ಅಶ್ವಿನಿ ಗೌಡಗೆ ಉಪದೇಶ ಮಾಡಿದ ಹೋಸ್ಟ್ ಕಿಚ್ಚ
ವೀಕೆಂಡ್ಈ ಎಪಿಸೋಡ್ ನಲ್ಲಿ ಘಟನೆ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ ಅವರು, ” ಗೌರವ ನಿರೀಕ್ಷೆ ಮಾಡುವ ನೀವು ಪ್ರತಿಯೊಬ್ಬರಿಗೂ ಗೌರವ ಕೊಡೋದು ಕಲಿಯಿರಿ. ಎಂದು ಹೇಳಿದ್ದಾರೆ. ಈ ಮಾತನ್ನು ಸರಳವಾಗಿ ಹೇಳಿದ್ದರು, ಮನಸ್ಸಿನ ಆಳಕ್ಕೆ ತಲುಪುತ್ತದೆ.
ಘಟನೆಯ ಪರಿಣಾಮ
ಈ ವಿಷಯ ಈಗ ಮಹಿಳಾ ಸಬಲೀಕರಣದ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಹೌದು, ಇದು ಮಹಿಳೆಯರ ಹಕ್ಕು ಮತ್ತು ವರ್ತನೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿವಾದಕ್ಕೆ ಕಾರಣವಾಗಿದೆ. ಬಿಗ್ ಬಾಸ್ ತಂಡವು ಇಂತಹ ವಿವಾದಗಳನ್ನು ನಿರ್ವಹಿಸುವಲ್ಲಿ ಜಾಸ್ತಿ ಎಚ್ಚರಿಕೆ ವಹಿಸಬೇಕು ಅನ್ನುವುದು ಹಲವರ ಅಭಿಪ್ರಾಯವಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

