EMI Rules Of RBI 2025: EMI ಇದು ದೊಡ್ಡ ಮಟ್ಟದ ಹಣದ ವಸ್ತುಗಳನ್ನು ಸುಲಭವಾಗಿ ಪಾವತಿ ಮಾಡುವ ಒಂದು ಆಕರ್ಷಕ ಆಯ್ಕೆಯಾಗಿದೆ. ನೀವು EMI ಮೂಲಕ ಮನೆ, ಕಾರ್, ಅಥವಾ ವಯಕ್ತಿಕ ಸಾಲ ಪಡೆದುಕೊಂಡಿದ್ದರೆ ಅದನ್ನು ಸ್ಥಿರ ಮಾಸಿಕ ಕಂತುಗಳಾಗಿ ವಿಭಜಿಸುತ್ತದೆ. ಇದೀಗ ನೀವು ಪ್ರತಿ ತಿಂಗಳು EMI ಕಟ್ಟುವ ಒತ್ತಡದಲ್ಲಿದ್ದರೆ..? EMI ಪಾವತಿ ಮಾಡದಿದ್ದರೆ ದಂಡ ಪಾವತಿ ಮಾಡಬೇಕು ಅನ್ನುವ ಚಿಂತೆಯಲ್ಲಿದ್ದರೆ..? EMI ಕಟ್ಟದಿದ್ದರೆ ಕ್ರೆಡಿಟ್ ಸ್ಕೋರ್ ಕೆಡುತ್ತದೆ ಅನ್ನುವ ಭಯ ನಿಮ್ಮಲ್ಲಿದ್ದರೆ ಚಿಂತೆ ಬಿಟ್ಟು ಈ RBI ನ ನಿಯಮಗಳ ಬಗ್ಗೆ ತಿಳಿದುಕೊಳ್ಳಿ.
ತಪ್ಪಿದ EMI ನ ಆರ್ಥಿಕ ಪರಿಣಾಮ
ಮೊದಲು EMI ತಪ್ಪಿದರೆ ಸಿಬಿಲ್ ಸ್ಕೋರ್ ನ 50-100 ಅಂಕಕ್ಕೆ ದಕ್ಕೆ ಬರುತಿತ್ತು. ಹಾಗೆ ಅದು ಭವಿಷ್ಯದ ಸಾಲಕ್ಕೆ ತೊಡಕನ್ನು ಉಂಟುಮಾಡುತಿತ್ತು. ಆದರೆ ಈಗ RBI ನಿಯಮದ ಪ್ರಕಾರ, ಇನ್ನುಮುಂದೆ ತಪ್ಪಿದ EMI ಗೆ ದಂಡ ಇರುವುದಿಲ್ಲ. ಮೊದಲು 50000 EMI ತಪ್ಪಿದ್ದರೆ 750 ರೂ. ದಂಡವನ್ನು ಪಾವತಿ ಮಾಡಬೇಕಾಗಿತ್ತು.ಆದರೆ ಈಗ ಅದು ಶೂನ್ಯ ಆಗಿದೆ. ಅಂದರೆ ಯಾವುದೇ ದಂಡ ಪಾವತಿ ಮಾಡಬೇಕಾಗಿಲ್ಲ. ಆದರೆ ಸತತ 3 ರಿಂದ 6 ತಿಂಗಳು EMI ತಪ್ಪಿದ್ದರೆ ನಿಮ್ಮ ಸಾಲ NPA ಆಗುತ್ತದೆ. ಸಾಲ ನೀಡಿದವರು ಅಥವಾ ಬ್ಯಾಂಕಿನವರು ನಿಮ್ಮನ್ನು ಸಂಪರ್ಕ ಮಾಡಬಹುದು, ಆದರೆ ಕಿರುಕುಳ ನೀಡಿವಂತಿಲ್ಲ.
RBI ನಿಯಮದ ವಿವರಣೆ
RBI ದಂಡದ ನಿಷೇದ ಕಿರುಕುಳದಿಂದ ರಕ್ಷಣೆ, ಮತ್ತು ಡೇಟಾದ ಸುರಕ್ಷತೆಯನ್ನು ಮಾಡುತ್ತದೆ. ಹೌದು, RBI ನ 2023 /24 /25 ರಲ್ಲಿ ಹೊರಡಿಸಿದ ಆದೇಶದ ಪ್ರಕಾರ, 2023 ರಿಂದಲೇ ಫೇರ್ ಲೆಂಡಿಂಗ್ ಪ್ರ್ಯಾಕ್ಟಿಸಸ್ ಗಾಗಿ ನಿಯಮಗಳನ್ನು ಜಾರಿಗೊಳಿಸಿದೆ, 2025 ರಲ್ಲಿ ದಂಡ ಬಡ್ಡಿಯನ್ನು ಸಂಪೂರ್ಣವಾಗಿ ನಿಷೇಧ ಮಾಡಿದೆ. ಜೂನ್ 15 ರಿಂದ ಎಲ್ಲಾ ಸಾಲಗಳಲ್ಲಿ (ವೈಯಕ್ತಿಕ, ಮನೆ, ಆಟೋ ರಿಕ್ಷಾ, ಶಿಕ್ಷಣ) ಪೆನಲ್ ಇಂಟ್ರೆಸ್ಟ್ ಇರುವುದಿಲ್ಲ. ದಂಡವಾಗಿ ಫಿ ಚಾರ್ಜ್ ಮಾಡಬಹುದು, ಆದರೆ ಅದನ್ನು ಸಾಲದ ಮೇಲಿನ ಬಡ್ಡಿಗೆ ಸೇರಿಸುವುದಿಲ್ಲ. ಸಾಲ ವಸೂಲಿಗಾರರು ಬ್ಯಾಂಕಿಂಗ್ ಕೆಲಸದ ಸಮಯದಲ್ಲಿ ಮಾತ್ರ ಕರೆ ಮಾಡಬಹುದು, ವಾರಕ್ಕೆ 4 ದಿನ ಮಾತ್ರ. ಕಿರುಕುಳ ಮಾಡಿದರೆ RBI Ombudsman ಗೆ ದೂರು ನೀಡಬಹುದಾಗಿದೆ. ಹಾಗೆ ನಿಮ್ಮ ಆಧಾರ್ ಮತ್ತು ಪಾನ್ ಅನ್ನು ದುರ್ಬಳಕೆ ಮಾಡಿಕೊಳ್ಳುದಿಲ್ಲ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

