e-shram card 5 government services 2025: ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ e-Shram ಕಾರ್ಮಿಕ ಕಾರ್ಡ್ ಅನ್ನು ನೀಡಲಾಗುತ್ತಿದೆ. ಇದರಲ್ಲಿ ನೀವು ಸರ್ಕಾರದ ಹಲವು ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಕಾರ್ಮಿಕರು e-Shram ಕಾರ್ಮಿಕ ಕಾರ್ಡ್ಮಾಡಿಸಿಕೊಳ್ಳುವುದರ ಮೂಲಕ ಅನೇಕ ಸರ್ಕ್ರಿ ಸಔಲಭ್ಯಗಳನ್ನು ಪಡೆದುಕೊಳ್ಳಬಹುದು. ಹಾಗಾದರೆ ನಾವೀಗ ಈ e-Shram ಕಾರ್ಮಿಕ ಕಾರ್ಡ್ ಏನು..? ಇದರಿಂದ ಏನು ಲಾಭ..? ಈ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳೋಣ
e-Shram ಕಾರ್ಮಿಕ ಕಾರ್ಡ್ ಎಂದರೆ ಏನು ?
e-Shram ಕಾರ್ಮಿಕ ಕಾರ್ಡ್ ಎಂದರೆ ಭಾರತ ಸರ್ಕಾರದ ಶ್ರಮ ಸಚಿವಾಲಯದಿಂದ ಆರ್ಥಿಕಗೊಳಿಸಿದ ಗುರುತಿನ ಕಾರ್ಡ್ ಆಗಿದೆ. ಇದು ಅಸಂಘಟಿತ ವಲಯದ ಕಾರ್ಮಿಕರಾದ, ಕಾರ್ಖಾನೆ ಕೆಲಸಗಾರರು, ಗಿಗ್ ವರ್ಕರ್‌ಗಳು ಮತ್ತು ಮಹಿಳಾ ಕಾರ್ಮಿಕರಿಗೆ ಜಾರಿಗೆ ತರಲಾಗಿದೆ.. ಈ ಕಾರ್ಡ್ ನಿಂದ ನೀವು 12 ಅಂಕದ ಯುನಿವರ್ಸಲ್ ಅಕೌಂಟ್ ನಂಬರ್ (UAN) ಪಡೆದುಕೊಳ್ಳುತ್ತೀರಿ ಮತ್ತು ಇದರಿಂದ ಎಲ್ಲಾ ಸರ್ಕಾರಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.
e-Shram ಕಾರ್ಮಿಕ ಕಾರ್ಡ್ ನ ಸೌಲಭ್ಯಗಳು
* ಆರೋಗ್ಯ ವಿಮೆ
ಕಾರ್ಮಿಕರು ಈ e-Shram ಕಾರ್ಮಿಕ ಕಾರ್ಡ್ ಬಳಸಿಕೊಂಡು ಅಯುಷ್ಮಾನ್ ಯೋಜನೆಯ ಅಡಿಯಲ್ಲಿ 5 ಲಕ್ಷದ ತನಕ ಉಚಿತ ಚಿಕಿಸ್ಥೆಯನ್ನು ಪಡೆದುಕೊಳ್ಳಬಹುದು. ಇದರ ಜೊತೆಗೆ ಮಹಿಳೆಯರಿಗೆ ಮಾತ್ರತ್ವ ಸೌಲಭ್ಯವು ಸೇರುತ್ತದೆ. ಇದು ಕುಟುಂಬದ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.
* ಸುರಕ್ಷಾ ಭೀಮ ಯೋಜನೆ (PMSBY)
ಪ್ರಧಾನ್ ಮತ್ರಿ ಸುರಕ್ಷಾ ಭೀಮ ಯೋಜನೆಯ ಅಡಿಯಲ್ಲಿ ಕಾರ್ಮಿಕರು ಅಪಘಾತದಲ್ಲಿ ಮರಣ ಹೊಂದಿದರೆ 2 ಲಕ್ಷ ಅಪಘಾತ ವಿಮೆಯನ್ನು ಕುಟುಂಬಕ್ಕೆ ನೀಡಲಾಗುತ್ತದೆ. ಮತ್ತು ಅಪಘಾತದಲ್ಲಿ ಅಂಗವೈಫಲ್ಯ ಆದರೆ 2 ಲಕ್ಷ ಸಹಾಯಧನವನ್ನು ಪಡೆದುಕೊಳ್ಳಬಹುದು.
* ವೃದಾಪ್ಯ ವೇತನ (PM-SYM)
60 ವರ್ಷ ದಾಟಿದ ಎಲ್ಲ ಕಾರ್ಮಿಕರಿಗೆ ಪ್ರಧಾನ್ ಮಂತ್ರಿ ಶ್ರಮ ಯೋಗಿ ಮಂದನ್ ಯೋಜನೆಯ ಅಡಿಯಲ್ಲಿ ತಿಂಗಳಿಗೆ 3000 ರೂ. ಪಿಂಚಣಿಯನ್ನು ನೀಡಲಾಗುತ್ತದೆ. ಇದು ವೃದ್ಧ ಕಾರ್ಮಿಕರ ಜೀವನವನ್ನು ಸುಗಮಗೊಳಿಸುತ್ತದೆ.
* ಉದ್ಯೋಗ ಅವಕಾಶಗಳು (NCS Portal)
e-Shram ಕಾರ್ಡ್ ಮೂಲಕ ನ್ಯಾಷನಲ್ ಕ್ಯಾರಿಯರ್ ಸರ್ವೀಸ್ ಪೋರ್ಟಲ್ ಗೆ ಭೇಟಿ ನೀಡಿ ಉದ್ಯೋಗವನ್ನು ಹುಡುಕಬಹುದಾಗಿದೆ. ಇದು ಆನ್ಲೈನ್ ಜಾಬ್ ಸರ್ಚ್ ಮತ್ತು ತರಬೇತಿ ಕೋರ್ಸ್ ಗಳನ್ನು ನೀಡುತ್ತದೆ, ವಿಶೇಷವಾಗಿ ಮೈಗ್ರೇಟ್ ಕಾರ್ಮಿಕರಿಗೆ. ಇದರಿಂದ ನಿಮ್ಮ ಕೆಲಸದ ಶ್ರೇಣಿ ವಿಸ್ತರಿಸುತ್ತದೆ, ಹೊಸ ಅವಕಾಶಗಳು ಹುಟ್ಟಿಕೊಳ್ಳುತ್ತದೆ.
* ಸಾಮಾಜಿಕ ಸುರಕ್ಷಾ ಯೋಜನೆಗಳು
e-Shram ಕಾರ್ಡ್ ಮೂಲಕ, ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಮನೆಯ ಸಹಾಯ, ಮಕ್ಕಳ ಶಿಕ್ಷಣ ಸಹಾಯ ಹಾಗೆ ರಾಜ್ಯ ಸರ್ಕಾರೀ ಯೋಜನೆಗಳನ್ನು ಪಡೆದುಕೊಳ್ಳಬಹುದಾಗಿದೆ.
ಈ ಎಲ್ಲ ಸೌಲಭ್ಯಗಳು ಕಾರ್ಮಿಕರ ಭವಿಷ್ಯವನ್ನು ಉತ್ತಮವಾಗಿರಿಸುತ್ತದೆ. ಈ ಯೋಜನೆಗೆ ಸಂಬಂಧಪಟ್ಟ ಯಾವುದೇ ಪ್ರಶ್ನೆಗಳಿದ್ದರೆ https://eshram.gov.in/ ಗೆ ಭೇಟಿ ನೀಡಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

