Supreme Court Property Registration Rules: ಆಸ್ತಿ ನೋಂದಣಿ ವಿಷಯವಾಗಿ ಸುಪ್ರೀಂ ಕೋರ್ಟ್ ಈಗಾಗಲೇ ಹಲವು ನಿಯಮಗಳನ್ನು ಜಾರಿಗೆ ತಂದಿದೆ. ಸದ್ಯ ಈಗ ಆಸ್ತಿ ನೋಂದಣಿ ವಿಷಯವಾಗಿ ಸುಪ್ರೀಂ ಕೋರ್ಟ್ ಇನ್ನೊಂದು ಆದೇಶ ಹೊರಡಿಸಿದೆ. ಹೊಸ ಆದೇಶ ಆದೇಶ ಮತ್ತು ತೀರ್ಪಿನ ಪ್ರಕಾರ, ಇನ್ನುಮುಂದೆ ಕೇವಲ ಆಸ್ತಿ ನೋಂದಣಿ ಆದಮಾತ್ರಕ್ಕೆ ಆಸ್ತಿ ಮಾಲೀಕತ್ವ ವರ್ಗಾವಣೆ ಆಗಲ್ಲ. ಸುಪ್ರೀಂ ಕೋರ್ಟ್ ಈ ಆದೇಶ ಲಕ್ಷಾಂತರ ಆಸ್ತಿ ಮಾಲೀಕರ ಚಿಂತೆಗೆ ಕಾರಣವಾಗಿದ್ದು ಸುಪ್ರೀಂ ಕೋರ್ಟ್ ಅದಕ್ಕೆ ಸ್ಪಷ್ಟನೆ ಕೂಡ ಕೊಟ್ಟಿದೆ.
ಆಸ್ತಿ ಮಾಲೀಕತ್ವಕ್ಕೆ ಈ ಕೆಲವು ದಾಖಲೆ ಕಡ್ಡಾಯ
ಆಸ್ತಿ ಹಕ್ಕು ಪಡೆದುಕೊಳ್ಳಬೇಕಾದರೆ ಕೆಲವು ಅಗತ್ಯ ದಾಖಲೆ ಇಟ್ಟುಕೊಳ್ಳುವುದು ಕಡ್ಡಾಯವಾಗಿದೆ.
* ಟೈಟಲ್ ಡೀಡ್
ನೀವೇ ಆಸ್ತಿ ಮೂಲ ಮಾಲೀಕರು ಎಂದು ಸಾಭೀತುಪಡಿಸಲು ಇರುವ ದಾಖಲೆಯಲ್ಲಿ ಟೈಟಲ್ ಡೀಡ್ ಪ್ರಮುಖವಾದ ಪಾತ್ರ ವಹಿಸುತ್ತದೆ.
* ಪನೇಶನ್
ಪನೇಶನ್ ಮೂಲಕ ಆಸ್ತಿಯನ್ನು ಸಂಪೂರ್ಣ ನಿಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
* ಪೂರ್ಣ ಪೇಮೆಂಟ್ ಮಾಡುವುದು ಕಡ್ಡಾಯ
ಹಣದ ಲೆನ್ಸ್ ಅಥವಾ ಅಪೂರ್ಣ ಪಾವತಿ ಇದ್ದಲ್ಲಿ ಆಸ್ತಿ ಮಾಲೀಕತ್ವ ಪಡೆದುಕೊಳ್ಳಲು ಸಾಧ್ಯವಿಲ್ಲ.
* ಮ್ಯುಟೇಷನ್
ರೆವೆನ್ಯೂ ರೆಕಾರ್ಡ್‌ನಲ್ಲಿ ನಿಮ್ಮ ಹೆಸರಿನಲ್ಲಿಆಸ್ತಿ ಬರಬೇಕಾದರೆ ನೀವು ಮ್ಯುಟೇಷನ್ ರೆಕಾರ್ಡ್ಸ್ ಸರಿಯಾಗಿರುವುದು ಕಡ್ಡಾಯ.
ಸುಪ್ರೀಂ ಕೋರ್ಟ್ ತೀರ್ಪಿಗೆ ಕಾರಣಗಳು
ಈ ತೀರ್ಪು ತಮಿಳುನಾಡಿನಲ್ಲಿ ನಡೆದ ಒಂದು ಕೇಸ್‌ನಿಂದ ಹೊರಬಂದಿದೆ. ಕೆ. ಗೋಪಿ ಅವರು ಆಸ್ತಿ ನೋಂದಣಿ ಮಾಡಲು ಹೋದಾಗ, ಸಬ್-ರಿಜಿಸ್ಟ್ರಾರ್ ತಿರಸ್ಕರಿಸಿದರು. ಕಾರಣ? ಟೈಟಲ್ ಸಾಬೀತು ಸಾಕಾಗಿರಲಿಲ್ಲ. ಹೈಕೋರ್ಟ್ ಒಪ್ಪಿತು, ಆದರೆ ಸುಪ್ರೀಂ ಕೋರ್ಟ್ ಈಗ ರೂಲ್ 55A(i) ಅನ್ನು ಅಸಾಂವಿಧಾನಿಕ ಎಂದು ಘೋಷಿಸಿದೆ. ಇದು ರಿಜಿಸ್ಟ್ರೇಷನ್ ಆಕ್ಟ್ 1908ರ ವಿರುದ್ಧವಾಗಿದೆ ಎಂದು ಕೋರ್ಟ್ ಹೇಳಿದೆ.
ನೋಂದಣಿ ಒಂದು ಹಂತ ಮಾತ್ರ. ಅದು ಹಕ್ಕು ನೀಡುವುದಿಲ್ಲ. ಹಕ್ಕುಗಳು ಟೈಟಲ್, ಪಾಸೆಷನ್ ಮತ್ತು ಕಾನೂನು ಅನುಮೋದನೆಯಿಂದ ಬರುತ್ತವೆ. ಇದು ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ದೊಡ್ಡ ಬದಲಾವಣೆ ತರಲಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮ
ಸುಪ್ರೀಂ ಕೋರ್ಟ್ ಈ ತೀರ್ಪು ಲಕ್ಷಾಂತರ ಆಸ್ತಿ ಗಡಿ ವ್ಯಾಪಾರಗಳನ್ನು ಪರಿಶೀಲಿಸುವಂತೆ ಮಾಡುತ್ತದೆ.ಭಾರತದಲ್ಲಿ ಆಸ್ತಿ ಕಾನೂನುಗಳ ಪರಿಶೀಲನೆಗೆ ಇದು ಕಾರಣವಾಗಬಹುದು. ಅಷ್ಟೇ ಮಾತ್ರವಲ್ಲದೆ ಆಸ್ತಿ ಮೂಲ ಮಾಲೀಕರಿಗೆ ಈ ನಿಯಮಗಳು ಸಾಕಷ್ಟು ಸಹಾಯಕವಾಗಲಿದೆ. ಈ ತೀರ್ಪು ಕಾನೂನು ಜ್ಞಾನವನ್ನು ಹೆಚ್ಚಿಸುತ್ತದೆ. ನೀವು ಆಸ್ತಿ ಖರೀದಿಸುವಾಗ, ನೋಂದಣಿ ಮಾತ್ರ ಅಲ್ಲ, ಸಂಪೂರ್ಣ ಪ್ರಕ್ರಿಯೆಯನ್ನು ಪರಿಗಣಿಸಿ. ಇದು ನಿಮ್ಮ ಹಕ್ಕುಗಳನ್ನು ರಕ್ಷಿಸುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

