New Labour Code 2025 implementation: ಭಾರತ ಸರ್ಕಾರ ಕಾರ್ಮಿಕರಿಗಾಗಿ ಹಲವಾರು ಯೋಜನೆಗಳನ್ನ ಈಗಾಗಲೇ ಜಾರಿಗೆ ತಂದಿದೆ. ಕಾರ್ಮಿಕರ ಭವಿಷ್ಯದ ಭದ್ರತೆಗಾಗಿ ದೇಶದಲ್ಲಿ ಹಲವಾರು ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಇದೀಗ ಕಾರ್ಮಿಕರ ಹಿತದೃಷ್ಟಿಯಿಂದ ದೇಶದಲ್ಲಿ ಹೊಸ ಲೇಬರ್ ಕೋಡ್ ಜಾರಿಗೆ ತರಲಾಗಿದೆ. ಈ ಬಗ್ಗೆ ನಾವೀಗ ಸಂಪೂರ್ಣವಾಗಿ ಮಾಹಿತಿಯನ್ನ ತಿಳಿದುಕೊಳ್ಳೋಣ.
ಕಾರ್ಮಿಕರಿಗಾಗಿ ಹೊಸ ಲೇಬರ್ ಕೋಡ್ ಜಾರಿ
ಭಾರತದಲ್ಲಿ ನವೆಂಬರ್ 21, 2025 ರಿಂದ 4 ಹೊಸ ಲೇಬರ್ ಕೋಡ್ ಜಾರಿಗೆ ತರಲಾಗಿದೆ. ಇವುಗಳು 29 ಹಳೆಯ ಕಾನೂನುಗಳನ್ನು ಸರಳಗೊಳಿಸಿ, ಕೆಲಸಗಾರರಿಗೆ ಹೆಚ್ಚಿನ ರಕ್ಷಣೆ ನೀಡುತ್ತದೆ. ಇದರಿಂದ ತಕ್ಷಣಕ್ಕೆ ಮನೆಗೆ ಬರುವ ಹಣ ಕಡಿಮೆಯಾಗಿ,ಭವಿಷ್ಯವನ್ನು ಭದ್ರಗೊಳಿಸುತ್ತದೆ. ಕಾರ್ಮಿಕ ಕೋಡ್ ನಿಯಮದಲ್ಲಿ 4 ಬದಲಾವಣೆ ಮಾಡಲಾಗಿದೆ ಮತ್ತು ಆ ಬದಲಾವಣೆ ಈ ಕೆಳಗಿನಂತಿದೆ.
* ವೇತನ ಸಂಹಿತೆ (2019)
* ಕೈಗಾರಿಕಾ ಸಂಬಂಧಗಳ ಕೋಡ್ (2020)
* ಸಾಮಾಜಿಕ ಭದ್ರತೆ ಸಂಹಿತೆ (2020)
* ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ (OSHWC, 2025)
ಇವುಗಳು ಹಳೆಯ ಕಾನೂನನ್ನು ಬದಲಾಯಿಸಿ, ಕೆಲಸಗಾರರಿಗೆ ಸಮಾನತೆ, ಸುರಕ್ಷತೆ ಮತ್ತು ಇತರ ಸೌಲಭ್ಯವನ್ನ ನೀಡುತ್ತವೆ.
ಕಾರ್ಮಿಕರ ಸಂಬಳದ ರಚನೆಯಲ್ಲಿ ಬದಲಾವಣೆ
ಹೊಸ ವೇತನ ಸಂಹಿತೆ (2019) ರ ಅಡಿಯಲ್ಲಿ ಬೇಸಿಕ್ ಪೇ + ಡಿಯರ್‌ನೆಸ್ ಅಲೌನ್ಸ್ = ಒಟ್ಟು ಸಂಬಳ, ಇದು CTC (ಕಾಸ್ಟ್ ಟು ಕಂಪನಿ) ಯ 50% ಆಗಿರಬೇಕು. ಉದಾಹರಣೆಗೆ, 50,000 ರೂ. CTC ಇದ್ದರೆ ಬೇಸಿಕ್ ಕನಿಷ್ಠ 25,000 ರೂ. ಆಗಬೇಕು. ಇದರಿಂದ PF ಹೆಚ್ಚಾಗುತ್ತದೆ. ಇದರಿಂದ ತಕ್ಷಣಕ್ಕೆ ಮನೆಗೆ ಬರುವ ಹಣ 5-15% ಕಡಿಮೆ ಆಗುತ್ತದೆ. ಆದರೆ ಇದು ಭವಿಷ್ಯದಲ್ಲಿ ಉತ್ತಮವಾಗಿರುತ್ತದೆ.
ಈ ಬದಲಾವಣೆಯಿಂದ ಕಾರ್ಮಿಕರಿಗೆ ಆಗುವ ಪ್ರಯೋಜನಗಳು
*ಈ ಹೊಸ ಕೋಡ್‌ಗಳು ಕೆಲಸಗಾರರ ಜೀವನವನ್ನು ಸುಧಾರಿಸುತ್ತವೆ.
* ಗ್ರ್ಯಾಚ್ಯುಯಿಟಿ ಹಿಂದೆ 5 ವರ್ಷದ ನಂತರ ಸಿಗುತ್ತಿತ್ತು, ಈಗ ಫಿಕ್ಸ್‌ಡ್ ಟರ್ಮ್ ಉದ್ಯೋಗಕ್ಕೂ 1 ವರ್ಷದ ನಂತರ ಸಿಗುತ್ತದೆ. ಇದರಿಂದ ಕಾರ್ಮಿಕರು ಹೆಚ್ಚಿನ ಲಾಭ ಪಡೆದುಕೊಳ್ಳಬಹುದು.
* ಕೆಲಸದ ಸಮಯದಲ್ಲಿ ಕೂಡ ಬದಲಾವಣೆ ಆಗುವುದನ್ನು ನಾವು ಗಮನಿಸಬಹುದು.
* ವಾರಕ್ಕೆ 47 ಗಂಟೆ ಮಿತಿ ಮತ್ತು ಓವರ್ ಟೈಮ್‌ಗೆ ಡಬಲ್ ಪಾವತಿ.
* ಇನ್ನು 40 ವರ್ಷ ಮೀರಿದ ಕೆಲಸಗಾರರಿಗೆ ಉಚಿತ ವಾರ್ಷಿಕ ಆರೋಗ್ಯ ಪರೀಕ್ಷೆ ಮಾಡಿಸಲಾಗುತ್ತದೆ.
*ಲೈಫ್ ಇನ್ಶೂರನ್ಸ್ 2 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇದು ಕಾರ್ಮಿಕರಿಗೆ ವೇತನದಲ್ಲಿ ಕೆಲವು ಬದಲಾವಣೆ ಆದರೂ ಕೂಡ ನಿವೃತ್ತಿ ಸಮಯದಲ್ಲಿ ಹೆಚ್ಚಿನ ಲಾಭವನ್ನು ನೀಡುತ್ತದೆ.

