Moto G57 Full Specification: ಇದೀಗ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಖರೀದಿಸಬೇಕು ಅಂದುಕೊಂಡವರಿಗೆ Moto ಕಂಪನಿ ಉತ್ತಮವಾದ ಆಯ್ಕೆ ಆಗಿದೆ. ಹೌದು, ಇದೀಗ ಮೋಟೊರೋಲ ಕಂಪನಿ ತನ್ನ ಹೊಸ Moto G57 ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ. ಈ ಫೋನ್ ಭಾರತದಲ್ಲಿ ನವೆಂಬರ್ 2025 ಅಥವಾ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತದೆ. ನಾವೀಗ ಮೋಟೋ ಕಂಪನಿ ಬಿಡುಗಡೆ ಮಾಡುತ್ತಿರುವ ಈ ಸ್ಮಾರ್ಟ್ ಫೋನ್ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನ ತಿಳಿದುಕೊಳ್ಳೋಣ.
Moto G57 Smart phone
Moto G57 ಸ್ಮಾರ್ಟ್ ಫೋನ್ MIL-STD-810H ಮಿಲಿಟರಿ ಗ್ರೇಡ್ ಸರ್ಟಿಫಿಕೇಟ್ ಪಡೆದುಕೊಂಡಿದೆ. ಅಂದರೆ ನೀರು ಮತ್ತು ದೂಳಿನಿಂದ ರಕ್ಷಣೆಯನ್ನು ನೀಡುತ್ತದೆ. IP64 ರೇಟಿಂಗ್ ಕೂಡ ಇದೆ. ಹಿಂಭಾಗದಲ್ಲಿ ವೀಗನ್ ಲೆದರ್ ಫಿನಿಶ್ ಇರುತ್ತದೆ. Regatta Blue, Corsair, Fluidity ಕಲರ್ ನಲ್ಲಿ ಲಭ್ಯವಿದೆ.
Moto G57 ಡಿಸ್ಪ್ಲೇ ಹಾಗೆ ಸ್ಟೋರೇಜ್
Moto G57 ಸ್ಮಾರ್ಟ್ ಫೋನ್ 6.72 ಇಂಚಿನ FHD+ IPS LCD ಸ್ಕ್ರೀನ್, 120Hz ರಿಫ್ರೆಶ್ ರೇಟ್, 1050 ನಿಟ್ಸ್ ಬ್ರೈಟ್ ನೆಸ್. ಹೊರಗಡೆ ಎಷ್ಟೇ ಬಿಸಿಲಿದ್ದರೂ ಸ್ಪಷ್ಟವಾಗಿ ಕಾಣುತ್ತದೆ. ಹಾಗೆ ಗೊರಿಲ್ಲಾ ಗ್ಲಾಸ್ 7i ಪ್ರೊಟೆಕ್ಷನ್ ಇದೆ. 8GB RAM + 128/256GB ಸ್ಟೋರೇಜ್, ಮೆಮೊರಿ ಕಾರ್ಡ್ ನಿಂದ 1TB ವರೆಗೆ ಹೆಚ್ಚಿಸಬಹುದು. Qualcomm Snapdragon 6s Gen 4 ಚಿಪ್‌ಸೆಟ್ ಅನ್ನು ಅಳವಡಿಸಲಾಗಿದೆ.
ಕ್ಯಾಮರಾ ಹಾಗೆ ಬ್ಯಾಟರಿ
Moto G57 ಸ್ಮಾರ್ಟ್ ಫೋನ್ ನ ಖರೀದಿಸಲು ಮುಖ್ಯ ಕ್ಯಾಮರಾ 50MP Sony LYT-600, ಅಲ್ಟ್ರ ವೈಡ್ 8 MP ಹಾಗೆ ಮುಂಭಾಗದಲ್ಲಿ 8 MP ಕ್ಯಾಮರಾವನ್ನು ಅಳವಡಿಸಲಾಗಿದೆ. 7000mAh ಬ್ಯಾಟರಿ, 30W ಫಾಸ್ಟ್ ಚಾರ್ಜಿಂಗ್. ಸಾಮಾನ್ಯ ಬಳಕೆಯಲ್ಲಿ 1.5–2 ದಿನಗಳವರೆಗೆ ಇರುತ್ತದೆ.
ಮೋಟೋ AI ಫೀಚರ್ ಹಾಗೆ ಸಾಫ್ಟ್ವೇರ್
Moto G57 ಸ್ಮಾರ್ಟ್ ಫೋನ್ ನಲ್ಲಿ ಮೋಟೋ AI ಫೀಚರ್ ಲಭ್ಯವಿದೆ. ರಾತ್ರಿ ಫೋಟೋ ಸಾಮಾನ್ಯ ವಾಗಿರುತ್ತದೆ, ಆದರೆ ದಿನದ ಬೆಳಕಿನಲ್ಲಿ ತುಂಬಾ ಒಳ್ಳೆಯ ಫೋಟೋಗಳು ಬರುತ್ತವೆ. 4K ವೀಡಿಯೋ ರೆಕಾರ್ಡಿಂಗ್ ಸಪೋರ್ಟ್ ಇರುತ್ತದೆ. ಇದು Android 16 ಸ್ಟಾಕ್ ನಲ್ಲಿ ಬರುತ್ತದೆ. ಕೇವಲ 1 OS ಅಪ್ ಗ್ರೇಡ್ (Android 17) ಮತ್ತು 3 ವರ್ಷ ಸೆಕ್ಯುರಿಟಿ ಅಪ್ ಡೇಟ್ ಸಿಗುತ್ತದೆ.
Moto G57 ಸ್ಮಾರ್ಟ್ ಫೋನ್ ಬೆಲೆ
Moto G57 ಸ್ಮಾರ್ಟ್ ಫೋನ್ ನ ಬೆಲೆ ಭಾರತದಲ್ಲಿ 20 ರಿಂದ 22 ಸಾವಿರಕ್ಕೆ ಲಭ್ಯವಿದೆ (8GB + 128GB). ಪವರ್ ವೆರಿಯಂಟ್ 14,999 ಕ್ಕೆ ಲಭ್ಯವಿದೆ. ನಿಮ್ಮ ಬಜೆಟ್ ನಲ್ಲಿ 5G ಫೋನ್ ಹುಡುಕುತಿದ್ದರೆ Moto G57 ಸ್ಮಾರ್ಟ್ ಫೋನ್ ಉತ್ತಮ ಆಯ್ಕೆ ಆಗಿದೆ. Samsung A35, Realme GT 7 ಜೊತೆ ನೇರವಾಗಿ ಸ್ಪರ್ಧಿಸುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

