About Mahantesh Bilagi: IAS ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಭೀಕರ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದಾಗ ಜೇವರ್ಗಿ ತಾಲೂಕು, ಗೌನಹಳ್ಳಿ ಕ್ರಾಸ್ ಬಳಿ ಇನ್ನೋವಾ ಕ್ರಿಸ್ಟಾ ಕಾರು ರಸ್ತೆಯ ಮಧ್ಯದ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದಿದೆ. ಈ ದುರಂತದಲ್ಲಿ ಹಿರಿಯ IAS ಅಧಿಕಾರಿ ಮಹಾಂತೇಶ್ ಬಿಳಗಿ (51), ಅವರ ಸಹೋದರ ಶಂಕರ್ ಬಿಳಗಿ (48) ಮತ್ತು ಸಂಬಂಧಿ ಈರಣ್ಣ ಶಿರಸಂಗಿ (55) ಸಾವನ್ನಪ್ಪಿದ್ದಾರೆ. ಬಡತನದಿಂದ ಉನ್ನತ ಸ್ಥಾನಕ್ಕೆ ಏರಿದ ಮಹಾಂತೇಶ್ ಬೀಳಗಿ ಅವರ ಸಾಧನೆಯ ಬಗ್ಗೆ ನಾವೀಗ ತಿಳಿದುಕೊಳೋಣ.
ಮಹಾಂತೇಶ್ ಬೀಳಗಿ ಹಿನ್ನೆಲೆ
1980 ರ ದಶಕದಲ್ಲಿ ರಾಮದುರ್ಗ ತಾಲೂಕು, ಬೆಳಗಾವಿ ಯಲ್ಲಿ ಮಹಾಂತೇಶ್ ಬಿಳಗಿ ಜನಿಸುತ್ತಾರೆ. ಬಡ ಕುಟುಂಬದಲ್ಲಿ ಬೆಳೆದ ಮಹಾಂತೇಶ್ ಬಿಳಗಿ ಅವರು ತಂದೆ ಬಸಪ್ಪ ಬಿಳಗಿ ಅವರನ್ನು ಬಹುಬೇಗ ಕಳೆದುಕೊಳ್ಳುತ್ತಾರೆ. ತಾಯಿ ಲಕ್ಷ್ಮೀಬಾಯಿ ಒಂಟಿಯಾಗಿ 5 ಮಕ್ಕಳನ್ನು ಸಾಕುತ್ತಾರೆ. ರೊಟ್ಟಿ ಮಾರಿ, ಕೆಲಸ ಮಾಡಿ ಕುಟುಂಬವನ್ನು ಸಾಕಿದ ತಾಯಿಯ ಹೋರಾಟ, ಒಂದು ಹೊತ್ತಿನ ಉಟ್ಟಕ್ಕೂ ಪರದಾಡುತ್ತಿದ್ದ ಆ ದಿನಗಳಲ್ಲಿ ಅವರು ಸರ್ಕಾರೀ ಶಾಲೆಯಲ್ಲಿ ಶಿಕ್ಷಣವನ್ನು ಪಡೆಯುತ್ತಾರೆ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಪದವಿ ಪಡೆದ ನಂತರ, ಸಿವಿಲ್ ಸರ್ವೀಸಸ್ ಪರೀಕ್ಷೆಯತ್ತ ಮುಖಮಾಡುತ್ತಾರೆ. 2012 ರ ಕರ್ನಾಟಕ ಕೇಡರ್ ಬ್ಯಾಚ್ ನಲ್ಲಿ IAS ಆಗಿ ಆಯ್ಕೆಯಾಗಿ, ರಾಜ್ಯಕ್ಕೆ ಸೇರಿದ ಅವರು, ಜನಸ್ನೇಹಿ ಅಧಿಕಾರಿಯಾಗಿ ಹೆಸರುವಾಸಿಯಾಗುತ್ತಾರೆ.
ಮಹಾಂತೇಶ್ ಬೀಳಗಿ ಅವರ IAS ಪಯಣ
IAS ಆಗಿ ಆರಂಭಿಕ ದಿನಗಳಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ಮಾಡಿದ ಮಹಾಂತೇಶ್ ಬಿಳಗಿ, ಜನರ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ನಂತರ ಧಾರವಾಡ, ಬಳ್ಳಾರಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ, ರೈತರಿಗೆ, ಶಿಕ್ಷಣಕ್ಕೆ ಮೀಸಲಾದ ಯೋಜನೆಗಳಲ್ಲಿ ಕಾರ್ಯಕರ್ತರಂತೆ ಕೆಲಸ ಮಾಡುತ್ತಾರೆ. ಅವರ ಸರಳತೆ ಮತ್ತು ದಕ್ಷತೆಯಿಂದ ಜನರು ಅವರನ್ನು ಜನಪರ ಅಧಿಕಾರಿ ಎಂದೇ ಕರೆಯುತ್ತಿದ್ದರು.
ಮಹಾಂತೇಶ್ ಬೀಳಗಿ ನಲ್ಲಿ ಬೆಸ್ಕಾಂ ಪಯಣ
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುವಾಗ, ವಿದ್ಯುತ್ ಸಮಸ್ಯೆಗಳನ್ನು ಕಡಿಮೆ ಮಾಡಿ, ಗ್ರಾಮೀಣ ಪ್ರದೇಶಗಳಿಗೆ ಸುಗಮ ಸರಬರಾಜು ನೀಡುತ್ತಿದ್ದರು. ಇದೀಗ ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮದ (KSMCL) ವ್ಯವಸ್ಥಾಪಕ ನಿರ್ದೇಶಕರಾಗಿ, ಖನಿಜ ಸಂಪನ್ಮೂಲಗಳ ಅಭಿವೃದ್ಧಿಗೆ ನಾಯಕತ್ವ ನೀಡುತ್ತಿದ್ದರು. ಅವರ ಕೆಲಸದಿಂದ ರಾಜ್ಯದ ಆರ್ಥಿಕತೆಗೆ ಕೊಡುಗೆ ಅಪಾರವಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

