Tata Sierra 2025 Specification: 1990 ರ ದಶಕದಿಂದ ಭಾರತೀಯ ರಸ್ತೆಗಳಲ್ಲಿ ಜನಪ್ರಿಯವಾಗಿದ್ದ ಟಾಟಾ ಸಿಯೆರಾ ಇಂದು ಹೊಸ ರೂಪದಲ್ಲಿ ಮರಳಿ ಬರುತ್ತಿದೆ. ಐಕಾನಿಕ SUV ಎಂದೇ ಗುರುತಿಸಿಕೊಂಡ ಈ SUV2025 ರಲ್ಲಿ ಆಧುನಿಕ ಡಿಸೈನ್ ಮತ್ತು ಟೆಕ್ನಾಲಜಿ ಯೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. 11.49 ಲಕ್ಷಕ್ಕೆ ಬಿಡುಗಡೆಯಾದ Tata Sierra ಕಾರಿನ ವಿಶೇಷತೆ ಏನು..? ಮತ್ತು ಕಾರಿನ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
Tata Sierra ಡಿಸೈನ್
ಟಾಟಾ ಸಿಯೆರಾ 2025ರ ಎಕ್ಸ್‌ಟೀರಿಯರ್ ಡಿಸೈನ್ ಹಳೆಯ ಮಾದಿರಿಯ ‘ಆಲ್ಪೈನ್ ವಿಂಡೋ’ ಸ್ಟೈಲ್ ಅನ್ನು ಉಳಿಸಿಕೊಂಡಿದೆ, ಆದರೆ ಕಪ್ಪು B-ಪಿಲರ್ ಮತ್ತು ಪ್ಯಾನರಾಮಿಕ್ ಸನ್‌ರೂಫ್ ನೊಂದಿಗೆ ಅಪ್‌ಡೇಟ್ ಮಾಡಲಾಗಿದೆ. ಮುಂಭಾಗದಲ್ಲಿ ಕನೆಕ್ಟೆಡ್ LED ಲೈಟ್ ಬಾರ್, ಟೆಕ್ಸ್ಚರ್ಡ್ ಗ್ರಿಲ್ ಮತ್ತು ಫ್ಲಶ್ ಡೋರ್ ಹ್ಯಾಂಡಲ್‌ಗಳು ಇದ್ದು, ಸೈಡ್‌ನಲ್ಲಿ 19-ಇಂಚ್ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು ಸ್ಪೋರ್ಟಿ ಲುಕ್ ನೀಡುತ್ತವೆ. ಹಿಂಭಾಗದಲ್ಲಿ ಕನೆಕ್ಟೆಡ್ LED ಟೈಲ್‌ಲೈಟ್‌ಗಳು ಮತ್ತು ‘ಸಿಯೆರಾ’ ಬ್ಯಾಡ್ಜಿಂಗ್ ಇದ್ದು, Bold Black and Vibrant Red ಕಲರ್ ಗಳಲ್ಲಿ ಲಭ್ಯವಾಗುತ್ತದೆ. ಈ SUVನ ಉದ್ದ 4,300 ಮಿ.ಮೀ., ಅಗಲ 1,850 ಮಿ.ಮೀ. ಮತ್ತು ಎತ್ತರ 1,700 ಮಿ.ಮೀ. ಇದ್ದು, ಗ್ರೌಂಡ್ ಕ್ಲಿಯರೆನ್ಸ್ 205 ಮಿ.ಮೀ. ಇದ್ದರಿಂದಎಲ್ಲಾ ರಸ್ತೆಯಲ್ಲೂ ಸುಗಮವಾಗಿ ಚಲಾಯಿಸಬಹುದು.
Tata Sierra ಇಂಟೀರಿಯರ್ ಹಾಗೂ ಕಂಫರ್ಟ್
ಕಾರಿನ ಒಳಗಡೆ ನಿಮಗೆ ಪ್ರೀಮಿಯಂ ಫೀಲ್ ನೀಡುತ್ತದೆ. ಒಳಗಡೆ ಎಂಟ್ರಿ ಮಾಡಿದರೆ ಟ್ರಿಪಲ್-ಸ್ಕ್ರೀನ್ ಸೆಟಪ್, ಡ್ರೈವರ್ ಡಿಸ್‌ಪ್ಲೇ, ಇನ್ಫೋಟೈನ್ಮೆಂಟ್ ಮತ್ತು ಪ್ಯಾಸೆಂಜರ್ ಸ್ಕ್ರೀನ್ ನಿಮ್ಮನ್ನು ಅಚ್ಚರಿಗೊಳಿಸುತ್ತದೆ. ಹಿಂಭಾಗದ ಸೀಟ್‌ಗಳಲ್ಲಿ ಲೆಗ್ ರೂಮ್ ಮತ್ತು ಹೆಡ್ ರೂಮ್ ಚೆನ್ನಾಗಿ ಇದ್ದು ಫ್ಲ್ಯಾಟ್ ಫ್ಲೋರ್ ಮೂಲಕ ಮಧ್ಯದ ಪ್ಯಾಸೆಂಜರ್ ಸೌಕರ್ಯ ಪಡೆಯುತ್ತಾನೆ. JBL ಆಡಿಯೊ ಸಿಸ್ಟಮ್ ಅನ್ನು ಅಳವಡಿಸಲಾಗಿದೆ. ಇದು 5 ಸೀಟರ್ SUV ಆಗಿ, ಫ್ಯಾಮಿಲಿ ಟ್ರಿಪ್‌ಗಳಿಗೆ ಉತ್ತಮವಾಗಿದೆ.
Tata Sierra ಇಂಜಿನ್ ಸಾಮರ್ಥ್ಯ
ಟಾಟಾ ಸಿಯೆರಾ 2025 ರಲ್ಲಿ 3 ಇಂಜಿನ್ ಆಪ್ಷನ್ ಅನ್ನು ಅಳವಡಿಸಲಾಗಿದೆ. 1.5-ಲೀಟರ್ ನ್ಯಾಚುರಲಿ ಅಸ್ಪಿರೇಟೆಡ್ ಪೆಟ್ರೋಲ್ (120 PS), 1.5-ಲೀಟರ್ TGDi ಟರ್ಬೋ ಪೆಟ್ರೋಲ್ (170 PS, 280 Nm) ಮತ್ತು 1.5-ಲೀಟರ್ ಡೀಜಲ್ (115 PS).ಇವುಗಳನ್ನು 6-ಸ್ಪೀಡ್ ಮ್ಯಾನುಯಲ್ ಅಥವಾ ಆಟೋಮ್ಯಾಟಿಕ್‌ನೊಂದಿಗೆ ಆಯ್ಕೆ ಮಾಡಬಹುದು.
Tata Sierra ಫೀಚರ್
ಸುರಕ್ಷತೆಗಾಗಿ 6 ಏರ್ ಬ್ಯಾಗ್ ಗಳು, ABS ವೊಂದಿಗೆ ESC, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ಸ್ಟ್ಯಾಂಡರ್ಡ್ ಅನ್ನು ಅಳವಡಿಸಲಾಗಿದೆ. ಹೈಯರ್ ವ್ಯಾರಿಯಂಟ್‌ಗಳಲ್ಲಿ ಲೆವೆಲ್ 2 ADAS, ಆಟೋಮ್ಯಾಟಿಕ್ ಎರ್ ಬ್ರೇಕಿಂಗ್, ಲೇನ್ ಕೀಪ್ ಅಸಿಸ್ಟ್ ಇರುತ್ತದೆ. ಪ್ಯಾನರಾಮಿಕ್ ಸನ್‌ರೂಫ್, ವೈರ್‌ಲೆಸ್ ಚಾರ್ಜರ್ ಮತ್ತು ಕನೆಕ್ಟೆಡ್ ಕಾರ್ ಟೆಕ್ ಅನ್ನು ಅಳವಡಿಸಲಾಗಿದೆ.
Tata Sierra ಬೆಲೆ
ನವೆಂಬರ್ 25, 2025 ರಂದು ಲಾಂಚ್ ಆಗಿದೆ, ಬೆಲೆ 11.49 ಲಕ್ಷದಿಂದ 22 ಲಕ್ಷದವರೆಗೆ (ಎಕ್ಸ್-ಶೋರೂಮ್) ಇರಬಹುದು. ಡೀಲರ್ ಗಳಲ್ಲಿ ಈಗಾಗಲೇ 11,000 ರೂಪಾಯಿಯಿಂದ ಬುಕಿಂಗ್ ಆರಂಭವಾಗಿದೆ. ಇದಲ್ಲದೆ, ಫೆಬ್ರುವರಿ 2026 ರಲ್ಲಿ ಎಲೆಕ್ಟ್ರಿಕ್ ವರ್ಷನ್ ಬರುತ್ತದೆ. ಹೆಚ್ಚಿನ ವಿವರಗಳಿಗೆ ಟಾಟಾ ವೆಬ್ ಸೈಟ್ ನಲ್ಲಿ ಚೆಕ್ ಮಾಡಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

