Indian Gold Price History: ದಿನದಿಂದ ದಿನಕ್ಕೆ ಚಿನ್ನದ ಬೆಲೆ ಗಗನಕ್ಕೆ ಏರುತ್ತಿದೆ ಅಂದರೆ ತಪ್ಪಾಗಲ್ಲ, ಹೌದು, ಸದ್ಯ ಚಿನ್ನದ ಬೆಲೆ ಒಂದು ಗ್ರಾಂ ಗೆ 11,000 ರೂ ಗಡಿ ದಾಟಿದೆ. ಚಿನ್ನದ ಬೆಲೆ ಏರಿಕೆಯತ್ತ ಮುಖಮಾಡಿರುವುದು ಗ್ರಾಹಕರ ಬೇಸರಕ್ಕೆ ಕಾರಣವಾಗಿದೆ. ಈಗಿನ ಕಾಲಕ್ಕೆ ಹೋಲಿಕೆ ಮಾಡಿದರೆ 19 ನೇ ಶತಮಾನದಲ್ಲಿ ಚಿನ್ನದ ಬೆಲೆ ಬಹಳ ಅಗ್ಗವಾಗಿತ್ತು. ಮೊದಲು ಚಿನ್ನದ ಬೆಲೆ ಏಕೆ ಅಷ್ಟೊಂದು ಕಡಿಮೆಯಾಗಿದ್ದು..? ಈಗ ಚಿನ್ನ ಬೆಲೆ ಇಷ್ಟೊಂದು ಏರಿಕೆ ಆಗಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನಾವೀಗ ತಿಳಿಯೋಣ.
19 ನೇ ಶತಮಾನದಲ್ಲಿ ಚಿನ್ನದ ಬೆಲೆ
1800 ರಿಂದ 1835 ರ ವರ್ಷದಲ್ಲಿ
* 1 ತೊಲೆ ಅಂದರೆ 11.66 ಗ್ರಾಂ ಚಿನ್ನದ ಬೆಲೆ 8 ರಿಂದ 10 ರೂಪಾಯಿ (ಇಂದಿನ ಮೌಲ್ಯ 4000 ದಿಂದ 6000) ಆಗಿರುತ್ತಿತ್ತು.
* ಒಂದು ಸಾವರನ್ ಅಂದರೆ 7.98 ಗ್ರಾಂ ಚಿನ್ನದ ಬೆಲೆ 9.50 ರಿಂದ 10.00 ರೂಪಾಯಿ ಆಗಿರುತ್ತಿತ್ತು.
ಆಗಿನ ಕಾಲದಲ್ಲಿ ಒಬ್ಬ ಸಾಮಾನ್ಯ ಕಾರ್ಮಿಕನ ತಿಂಗಳ ಸಂಬಳ 3 ರಿಂದ 5 ರೂಪಾಯಿ ಆಗಿರುತ್ತಿತ್ತು. 2 ಅಥವಾ 3 ತಿಂಗಳ ಸಂಬಳದಲ್ಲಿ 1 ತೊಲೆ ಚಿನ್ನವನ್ನು ಖರೀದಿ ಮಾಡಬಹುದಿತ್ತು.
1835 ರಿಂದ 1870 ರ ವರ್ಷದಲ್ಲಿ
*1 ತೊಲೆ ಚಿನ್ನದ ಬೆಲೆ 10 ರಿಂದ 11.50 ರೂಪಾಯಿ (11 Rs – ಇಂದಿನ ಮೌಲ್ಯ 6000 ದಿಂದ 8000 ) ಆಗಿರುತ್ತಿತ್ತು.
ಮದ್ರಾಸ್, ಬಾಂಬೆ, ಕಲ್ಕತ್ತ ಮಾರುಕಟ್ಟೆಯಲ್ಲಿ ಒಂದೇ ರೀತಿಯ ಬೆಲೆ ಇರುತಿತ್ತು. ಹಾಗೆ ಈ ಕಾಲದಲ್ಲಿ ಭಾರತದಿಂದ ಚಿನ್ನದ ರಫ್ತು ಕಡಿಮೆ ಇರುತಿತ್ತು. ಈ ಕಾರಣದಿಂದ ದೇಶದೊಳಗೆ ಚಿನ್ನ ಸುಲಭವಾಗಿ ಸಿಗುತಿತ್ತು.
1871 ರಿಂದ 1893 ರ ವರ್ಷದಲ್ಲಿ
ಈ ಅವಧಿ ಚಿನ್ನದ ಬೆಲೆ ಏರಿಕೆಗೆ ಮುಖ್ಯ ಕಾರಣ. ಯುರೋಪ್ ನಲ್ಲಿ ಬೆಳ್ಳಿಯ ಮೌಲ್ಯ ಕುಸಿಯಿತು. 1871 ರಲ್ಲಿ 1 ಫೌಂಡ್ ನ ಬೆಲೆ 10 ರೂಪಾಯಿ ಇತ್ತು, ಇದು 1893 ರಲ್ಲಿ 15 ರಿಂದ 16 ರೂಪಾಯಿಗೆ ತಲುಪಿತು. ಇದರಿಂದ ಚಿನ್ನದ ಬೆಲೆ 18 ರಿಂದ 20 ಕ್ಕೆ (ಇಂದಿನ ಬೆಲೆ ಪ್ರಕಾರ 12,000 ರಿಂದ 18,000 ಸಾವಿರ ) ಏರಿಕೆ ಆಯಿತು. 1893 ರಲ್ಲಿ ಒಂದು ಸವರಾನ್ ಬೆಲೆ ಸುಮಾರು 20 ರಿಂದ 21 ಕ್ಕೆ ತಲುಪಿತು.
1898 ರಿಂದ 1900 ರ ವರ್ಷದಲ್ಲಿ
1898 ರಲ್ಲಿ ಪೌಲರ್ ಸಮಿತಿಯ ಶಿಫಾರಸ್ಸಿನಂತೆ ಭಾರತ ಗೋಲ್ಡ್ ಎಕ್ಸ್ಚೇಂಜ್ ಸ್ಟ್ಯಾಂಡರ್ಡ್ ಅನ್ನು ಅಳವಡಿಸಿಕೊಂಡಿತು. ಒಂದು ಸವರಿನ್ ಗೆ 21 ರೂಪಾಯಿ ನಿಗದಿ ಪಡಿಸಲಾಯಿತು. ಆ ಸಮಯದಲ್ಲಿ 1 ತೊಲೆಗೆ 23 ರಿಂದ 24 ರೂಪಾಯಿ ಆಗುತ್ತದೆ.
ಚಿನ್ನ ಬೆಲೆ ಇಷ್ಟೊಂದು ವ್ಯತ್ಯಾಸ ಆಗಲು ಕಾರಣ ಏನು..?
* ರೂಪಾಯಿ ಬೆಳ್ಳಿಗೆ ಬದ್ದವಾಗಿರುತಿತ್ತು, ಚಿನ್ನಕ್ಕಲ್ಲ
* ಜಾಗತಿಕ ಚಿನ್ನದ ಉತ್ಪದಾನೆ ಕಡಿಮೆ ಇರುತಿತ್ತು
* ಭಾರತದಲ್ಲಿ ಚಿನ್ನದ ಆಭರಣಗಳಿಗೆ ಬೇಡಿಕೆ ಇದ್ದರು, ದೇಶಿಯ ಮಾರುಕಟ್ಟೆಗೆ ಸೀಮಿತವಾಗಿರುತಿತ್ತು.
* 1971 ರಲ್ಲಿ ಗೋಲ್ಡ್ ಸ್ಟ್ಯಾಂಡರ್ ತೊರೆದ ನಂತರ ಚಿನ್ನದ ಬೆಲೆ ಗಣನೀಯವಾಗಿ ಏರಿಕೆ ಕಾಣಲು ಆರಂಭಿಸಿತು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

