Nothing phone 3a Lite Launch In India: ನಥಿಂಗ್ ಕಂಪನಿ ನವೆಂಬರ್ 27 2025 ರಂದು ಅತ್ಯಂತ ಕಡಿಮೆ ಬೆಲೆಯ Nothing Phone 3a ಸ್ಮಾರ್ಟ್ ಫೋನ್ ಭಾರತದಲ್ಲಿ ಬಿಡುಗಡೆ ಮಾಡಿದೆ. ಹೌದು, ನಥಿಂಗ್ ಕಂಪನಿ Nothing Phone 3a ಭಾರತದಲ್ಲಿ ಲಾಂಚ್ ಮಾಡಿದೆ. ಬಜೆಟ್ ಬೆಲೆಯಲ್ಲಿ ದೈನಂದಿನ ಬಳಕೆಗೆ ಉತ್ತಮ ಫೋನ್ ಹುಡುಕುತ್ತಿರುವವರಿಗೆ ಇದು ಉತ್ತಮ ಆಯ್ಕೆ ಆಗಿದೆ. ನಾವೀಗ Nothing Phone 3a Lite ನ ಬೆಲೆ ಹಾಗು ವೈಶಿಷ್ಟ್ಯಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ತಿಳಿದುಕೊಳ್ಳೋಣ.
Phone 3a Lite ಪಿಚರ್ಸ್
Nothing Phone 3a lite ಸ್ಮಾರ್ಟ್ ಫೋನ್ 6.77 ಇಂಚ್ ಫ್ಲೆಕ್ಸಿಬಲ್ AMOLED ಡಿಸ್ ಪ್ಲೇ ಹೊಂದಿದೆ. 20 Hz ರಿಫ್ರೆಶ್ ರೇಟ್, 3,000 ನಿಟ್ಸ್ ಪೀಕ್ ಬ್ರಿಟೆನೆಸ್ಸ್ ಮತ್ತು HDR10+ ಬೆಂಬಲವನ್ನು ಹೊಂದಿದೆ. ಇದು 1080 x 2392 ಪಿಕ್ಸೆಲ್ ರೆಸೊಲ್ಯೂಶನ್ ಮತ್ತು 387 PPI ಡೆನ್ಸಿಟಿ ನೀಡುತ್ತದೆ. ಪ್ಯಾಂಡಾ ಗ್ಲಾಸ್ ನಿಂದ ಮುಂಭಾಗ ಮತ್ತು ಹಿಂಭಾಗ ರಕ್ಷಣೆಯಾಗಿದ್ದು IP54 ರೇಟಿಂಗ್ ನೊಂದಿಗೆ ಧೂಳು ಮತ್ತು ನೀರಿನಿಂದ ರಕ್ಷಣೆ ನೀಡುತ್ತದೆ. ಫೋನ್ 199 ಗ್ರಾಂ ತೂಕವಿದ್ದು, 164 x 78 x 8.3 ಮಿ.ಮೀ. ಆಯಾಮಗಳನ್ನು ಹೊಂದಿದ್ದು, ಒಂದು ಸ್ಪೀಕರ್ ಮತ್ತು ಇನ್ – ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸೆನ್ಸಾರ್ ಇದೆ.
ಕಾರ್ಯಕ್ಷಮತೆ ಹಾಗು ಸಾಫ್ಟ್ವೇರ್
ಮೀಡಿಯಾಟೆಕ್ ಡೈಮೆನ್ಸಿಟಿ 7300 ಪ್ರೋ (4nm) ಆಕ್ಟಾ-ಕೋರ್ ಪ್ರಾಸೆಸರ್‌ನೊಂದಿಗೆ 8 GB LPDDR4X ರ್ಯಾಮ್ ಮತ್ತು 128 ಅಥವಾ 256 GB UFS 2.2 ಸ್ಟೋರೇಜ್ ಇದೆ. ಮೈಕ್ರೋ SD ಕಾರ್ಡ್ ಮೂಲಕ 2TB ವರೆಗೆ ವಿಸ್ತರಿಸಬಹುದು. NFC, Wi-Fi 6, ಬ್ಲೂಟೂತ್ 5.3 ಮತ್ತು 16 5G ಬ್ಯಾಂಡ್ ಗಳ ಬೆಂಬಲವಿದೆ. ಆದರೆ ಸ್ಟಿರಿಯೊ ಸ್ಪೀಕರ್ ಇಲ್ಲ ಮತ್ತು ಸಿಂಗಲ್ ಬಾಟಮ್ ಸ್ಪೀಕರ್ ಕೆಲವರಿಗೆ ಇಷ್ಟವಾಗದೇ ಇರಬಹುದು.
ಕ್ಯಾಮರಾ ಹಾಗು ಬ್ಯಾಟರಿ ಸಾಮರ್ಥ್ಯ
50MP ಮುಖ್ಯ ಕ್ಯಾಮೆರಾ ಮತ್ತು ಸ್ಯಾಂಸಂಗ್ GN9 ಸೆನ್ಸರ್, 8 MP ಉಲ್ಟ್ರಾ ವೈಡ್ ಮತ್ತು 2MP ಮ್ಯಾಕ್ರೋ ಇದ್ದು, ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮರಾ ಅಳವಡಿಸಲಾಗಿದೆ. 4K@30fps ವೀಡಿಯೊ ರೆಕಾರ್ಡಿಂಗ್ ಬೆಂಬಲಿಸುತ್ತದೆ. ಇನ್ನು 5,000 mah ಬ್ಯಾಟರಿ 33W ವೈರ್ಡ್ ಚಾರ್ಜಿಂಗ್ (50% 20 ನಿಮಿಷಗಳಲ್ಲಿ) ಮತ್ತು 5W ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. USB-C ಕೇಬಲ್ ಮತ್ತು ವಿಶಿಷ್ಟ ಸಿಮ್ ಎಜೆಕ್ಟರ್ ಪಿನ್ ಫೋನ್ ಜೊತೆ ಬರುತ್ತದೆ ಆದರೆ ಚಾರ್ಜರ್ ಸೇರಿರುವುದಿಲ್ಲ.
Nothing Phone 3a Lite ಬೆಲೆ
Nothing Phone 3a Lite ಸ್ಮಾರ್ಟ್ ಫೋನ್, ಬ್ಲಾಕ್, ವೈಟ್, ಮತ್ತು ಬ್ಲೂ ಬಣ್ಣದಲ್ಲಿ ಲಭ್ಯವಿದೆ. ಇನ್ನು 8 GB RAM + 128 GB ಗೆ 20,999 ರೂಪಾಯಿ ಮತ್ತು 8 GB RAM + 256 GB ಗೆ 22,999 ರೂಪಾಯಿ ನಿಗದಿ ಮಾಡಲಾಗಿದೆ. ಡಿಸೆಂಬರ್ 5 ರಿಂದ ಫ್ಲಿಪ್ ಕಾರ್ಟ್, ಫ್ಲಿಪ್ ಕಾರ್ಟ್ ಮಿನಿಟ್ಸ್, ವಿಜಯ್ ಸೇಲ್ಸ್, ಕ್ರೋಮಾ ಮತ್ತು ಇತರ ರಿಟೇಲ್ ಸ್ಟೋರ್ ಗಳಲ್ಲಿ ಮಾರಾಟ ಪ್ರಾರಂಭವಾಗುತ್ತದೆ. ನವೆಂಬರ್ 29 ರಂದು ನವದೆಹಲಿಯ ಬ್ಲೂ ಟೊಕೈ ಕಾಪಿ ರೋಸ್ಟರ್ ನಲ್ಲಿ ಲಿಮಿಟೆಡ್ ಡ್ರಾಪ್ ಇರುವುದರಿಂದ ಮೊದಲ 20 ಖರೀದಿದಾರರಿಗೆ ಫ್ರೀ ಇಯರ್ ಬಡ್ ನೀಡಲಾಗುತ್ತದೆ. ಹಾಗೆ ಲಾಂಚ್ ಆಫರ್ ನಲ್ಲಿ 1,000 ರೂ. ಬ್ಯಾಂಕ್ ಡಿಸ್ಕೌಂಟ್ ನೀಡಲಾಗುತ್ತದೆ. ಅಂದರೆ 8 GB RAM + 128 GB ಗೆ 19,999 ರೂಪಾಯಿ ಮತ್ತು 8 GB RAM + 256 GB ಗೆ 21,999 ರೂಪಾಯಿಗೆ ನೀಡಲಾಗುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

