Toll Pass: 3000 ರೂ ಕೊಟ್ಟರೆ ಒಂದು ವರ್ಷ ಟೋಲ್ ಕಟ್ಟುವ ಅಗತ್ಯ ಇಲ್ಲ, ಹೊಸ ಟೋಲ್ ನೀತಿ ಜಾರಿ

1 Year Toll Pass: ಪ್ರತಿನಿತ್ಯ ಟೋಲ್ ಶುಲ್ಕ (Toll Tax) ಕಟ್ಟಿ ಹೈರಾಣಾದವರಿಗೆ ಈ ಸುದ್ದಿ ಕೇಳಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಹೇಳಬಹುದು. ಹೌದು, ಕೇಂದ್ರ ಸರ್ಕಾರ ಈಗ ದೇಶದಲ್ಲಿ ಪ್ರತಿನಿತ್ಯ ಟೋಲ್ ಶುಲ್ಕ ಪಾವತಿ ಮಾಡುವ ವಾಹನಗಳ ಮಾಲೀಕರು ಮತ್ತು ಚಾಲಕರಿಗಾಗಿ ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಮತ್ತು ಈ ಯೋಜನೆಯಲ್ಲಿ ಒಮ್ಮೆ ಟೋಲ್ ಶುಲ್ಕ ಪಾವತಿ ಮಾಡಿದರೆ ಮುಂದಿನ 1 ವರ್ಷಗಳ ಕಾಲ ಟೋಲ್ ಶುಲ್ಕ ಪಾವತಿ ಮಾಡುವ ಅಗತ್ಯ ಇರುವುದಿಲ್ಲ. ಹೌದು, ಕೇಂದ್ರ ಸಾರಿಗೆ ಇಲಾಖೆ ಈಗ ಟೋಲ್ ಪಾಸ್ ಯೋಜನೆಯನ್ನು ಜಾರಿಗೆ ತರುವುದರ ಮೂಲಕ ದೇಶದ ಎಲ್ಲಾ ವಾಹನಗಳ ಮಾಲೀಕರಿಗೆ ಬಂಪರ್ ಗುಡ್ ನ್ಯೂಸ್ ನೀಡಿದೆ. ಹಾಗಾದರೆ ವರ್ಷದ ಟೋಲ್ ಪಾಸ್ ಎಷ್ಟು ಮತ್ತು ಒಮ್ಮೆ ಪಾಸ್ ಮಾಡಿಸಿದರೆ ದಿನಗಳ ಟೋಲ್ ಶುಲ್ಕ ಪಾವತಿ ಮಾಡುವ ಅಗತ್ಯ ಇಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ದೇಶದಲ್ಲಿ ಜಾರಿಗೆ ಬರಲಿದೆ ಹೊಸ ಟೋಲ್ ನೀತಿ
ಹೌದು, ಒಮ್ಮೆ 3000 ರೂಪಾಯಿ ಕಟ್ಟಿ ಟೋಲ್ ಪಾಸ್ (Toll Pass) ಮಾಡಿಸಿಕೊಂಡರೆ ಒಂದು ವರ್ಷದ ತನಕ ಟೋಲ್ ಶುಲ್ಕ ಪಾವತಿ ಮಾಡುವ ಅಗತ್ಯ ಇರುವುದಿಲ್ಲ. ಮುಂದಿನ 15 ದಿನಗಳ ದೇಶದಲ್ಲಿ ಹೊಸ ಟೋಲ್ ನೀತಿ ಜಾರಿಗೆ ಬರಲಿದೆ. ಹೊಸ ಟೋಲ್ ನೀತಿ ಜಾರಿಗೆ ಬಂದನಂತರ ಟೋಲ್ ಗೇಟ್ ಗಳಲ್ಲಿ ವಾಹನಗಳ ಸರತಿ ಸಾಲು ಕಡಿಮೆ ಆಗಲಿದೆ ಎಂದು ಹೇಳಬಹುದು. GNSS ಟೋಲ್ ಸಿಸ್ಟಮ್ ಜಾರಿಗೆ ಬಂದರೆ ಸ್ಯಾಟಲೈಟ್ ಮೂಲಕ ವಾಹನಗಳ ಟೋಲ್ ಶುಲ್ಕ ಪಾವತಿ ಮಾಡಿಸಲಾಗುತ್ತದೆ ಮತ್ತು GNSS ನಿಯಮದ ಪ್ರಕಾರ, ವಾಹನಗಳ ಮಾಲೀಕರು ಇನ್ನುಮುಂದೆ ಟೋಲ್ ಗೇಟ್ ಗಳಲ್ಲಿ ಸಾಲುಗಟ್ಟಿ ನಿಲ್ಲುವ ಅವಶ್ಯಕತೆ ಕೂಡ ಇರುವುದಿಲ್ಲ.

3000 ರೂಪಾಯಿ ಕಟ್ಟಿ ಪಾಸ್ ಮಾಡಿಸಿಕೊಳ್ಳಿ
ಜಾರಿಗೆ ಬರುತ್ತಿರುವ ಹೊಸ ಟೋಲ್ ನೀತಿಯ ಪ್ರಕಾರ, ವಾಹನಗಳ ಮಾಲೀಕರಿಗೆ ವಾರ್ಷಿಕ ಪಾಸ್ ನೀಡಲು ಈಗ ಕೇಂದ್ರ ಸರ್ಕಾರ ಮುಂದಾಗಿದೆ ಮತ್ತು ಯಾವ ವಾಹನಗಳ ಮಾಲೀಕರು ವಾರ್ಷಿಕವಾಗಿ 3000 ರೂಪಾಯಿ ಟೋಲ್ ಪಾಸ್ ಮಾಡಿಸಿಕೊಳ್ಳುತ್ತಾನೋ ಆತ ಒಂದು ವರ್ಷದ ತನಕ ಟೋಲ್ ತೆರಿಗೆಯಿಂದ ವಿನಾಯಿತಿ ಪಡೆದುಕೊಳ್ಳಲಿದ್ದಾನೆ. ಇನ್ನು ಟೋಲ್ ಪಾಸ್ ಸಹಾಯದಿಂದ ನೀವು ಒಂದು ವರ್ಷದ ತನಕ ಯಾವುದೇ ಟೋಲ್ ಶುಲ್ಕ ಪಾವತಿ ಮಾಡದೆ, ಟೋಲ್ ಗೇಟ್ ನಲ್ಲಿ ಸರತಿ ಸಾಲಿನಲ್ಲಿ ನಿಲ್ಲದೆ ಪ್ರಯಾಣ ಮಾಡಬಹುದು.

ಹೊಸ ಯೋಜನೆಯ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ
ಟೋಲ್ ಹೊಸ ಟೋಲ್ ನೀತಿ ಬಗ್ಗೆ ಕೇಂದ್ರ ಸಾರಿಗೆ ಇಲಾಖೆ ಇನ್ನೂ ಕೂಡ ಅಧಿಕೃತ ಆದೇಶ ಹೊರಡಿಸಿಲ್ಲ. ಎಲ್ಲಾ ವಾಹನಗಳಿಗೂ 3000 ರೂಪಾಯಿಯ ಪಾಸ್ ಸಿಗುತ್ತಾ ಅಥವಾ ದೊಡ್ಡ ವಾಹನಗಳ ಪಾಸ್ ಶುಲ್ಕ ಹೆಚ್ಚಾಗಿರುತ್ತಾ…? ಅನ್ನುವುದರ ಬಗ್ಗೆ ಕೇಂದ್ರ ಸರ್ಕಾರ ಇನ್ನೂ ಕೂಡ ಸ್ಪಷ್ಟ ಮಾಹಿತಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಸ್ಯಾಟಲೈಟ್ ಆಧಾರಿತ ಟೋಲ್ ಸಿಸ್ಟಮ್ ದೇಶದಲ್ಲಿ ಜಾರಿಗೆ ಬರಲಿದ್ದು ವಾಹನಗಳು ಎಷ್ಟು ದೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣ ಮಾಡುತ್ತೋ ಅಷ್ಟು ಟೋಲ್ ಶುಲ್ಕವನ್ನು ಬ್ಯಾಂಕ್ ಖಾತೆಯಿಂದ ಕಡಿತ ಮಾಡಲಾಗುತ್ತದೆ. ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ, ಈಗಾಗಲೇ ಕೆಲವು ರಾಷ್ಟ್ರೀಯ ಹೆದ್ದಾರಿಯಲ್ಲಿ GNSS ಆಧಾರಿತ ಟೋಲ್ ಸಿಸ್ಟಮ್ ಜಾರಿಯಲ್ಲಿ ಇದ್ದು ಮೇ 1 ನೇ ತಾರೀಕಿನಿಂದ ದೇಶಾದ್ಯಂತ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.

15 ವರ್ಷದ ಪಾಸ್ ಕೂಡ ಸಿಗಲಿದೆ
ಹೊಸ ಕಾರ್ ಖರೀದಿ ಮಾಡುವವರು ಕಾರ್ ಖರೀದಿ ಮಾಡುವ ಸಮಯದಲ್ಲಿ ಒಮ್ಮೆ 15 ವರ್ಷದ ಟೋಲ್ ಪಾಸ್ ಮಾಡಿಸಿಕೊಂಡರೆ ಅವರು 15 ವರ್ಷಗಳ ಕಾಲ ಯಾವುದೇ ರೀತಿಯ ಟೋಲ್ ಶುಲ್ಕ ಪಾವತಿ ಮಾಡುವ ಅಗತ್ಯ ಇರುವುದಿಲ್ಲ. ಕಾರಿನ ಜೀವಿತಾವಧಿಯ ತನಕ ಈ ಪಾಸ್ ಮೂಲಕ ಎಲ್ಲಾ ಟೋಲ್ ಗೇಟ್ ನಲ್ಲಿ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು. ಟೋಲ್ ಗೇಟ್ ನಲ್ಲಿ ವಾಹನಗಳ ಸರತಿ ಸಾಲು ತಡೆಗಟ್ಟುವ ಉದ್ದೇಶದಿಂದ ದೇಶದಲ್ಲಿ ಹಲವು ಟೋಲ್ ನೀತಿಯನ್ನು ಜಾರಿಗೆ ತರಲು ಈಗ ಕೇಂದ್ರ ಸಾರಿಗೆ ಇಲಾಖೆ ಮುಂದಾಗಿದೆ.

Leave a Comment