Ancestral Property Rights Details: ಭಾರತದಲ್ಲಿ ಆಗಾಗ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಗಲಾಟೆಗಳು, ಮನಸ್ತಾಪಗಳು ಆಗುವುದು ಸಾಮಾನ್ಯವಾಗಿದೆ. ಆಸ್ತಿ ವಿಚಾರಕ್ಕಾಗಿ ಸ್ವಂತ ಅಣ್ಣ ತಮ್ಮಂದಿರೆ ದೂರವಾಗುತ್ತಿದ್ದಾರೆ. ಆಸ್ತಿ ವಿಚಾರವಾಗಿ ಆಗುವ ಸಮಸ್ಯೆ ತಡೆಗಟ್ಟಲು ಭಾರತೀಯ ಕಾನೂನು ಆಗಾಗ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿರುತ್ತದೆ. ಕೆಲವು ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವುದೇ ಪಾಲು ಸಿಗಲ್ಲ. ಹಾಗಾದರೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಸಿಗದೇ ಇರುವುದಕ್ಕೆ ಕಾರಣ ಏನು ಅನ್ನುವ ಬಗ್ಗೆ ಮಾಹಿತಿಯನ್ನ ತಿಳಿದುಕೊಳ್ಳೋಣ.
ಪಿತ್ರಾರ್ಜಿತ ಆಸ್ತಿ ಎಂದರೆ
ಪಿತ್ರಾರ್ಜಿತ ಆಸ್ತಿ ಅಂದರೆ, ಅಜ್ಜನ ಹಿಂದಿನ 4 ತಲೆಮಾರಿನಿಂದ ಬಂದಂತ ಅವಿಭಜಿತ ಆಸ್ತಿ ಆಗಿರುತ್ತದೆ. 2005 ರ ತಿದ್ದುಪಡಿ ಮತ್ತು 2020 ರ ಸುಪ್ರೀಮ್ ಕೋರ್ಟ್ Vineeta sharma ಅವರ ತೀರ್ಪಿನ ಪ್ರಕಾರ, ಹೆಣ್ಣು ಮಕ್ಕಳು ಕೂಡ ಜನ್ಮ ಸಿದ್ದ ಹಕ್ಕನ್ನು ಪಡೆಯುತ್ತಾರೆ, ಹಾಗೆ ತಂದೆ ಜೀವಂತವಾಗಿದ್ದರೂ ಅಥವಾ ಜೀವಂತವಾಗಿಲ್ಲದಿದ್ದರೂ ಕೂಡ ಮೊಮ್ಮಕ್ಕಳು ಪಿತ್ರಾರ್ಜಿತ ಆಸ್ತಿಗೆ ಜನ್ಮಸಿದ್ದ ಹಕ್ಕನ್ನು ಹೊಂದಿರುತ್ತಾರೆ.
ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಸಿಗದೇ ಇರಲು 12 ಕಾರಣಗಳು..?
* 2005 ಕ್ಕಿಂತ ಮೊದಲೇ ಆಸ್ತಿ ವಿಭಾಗ ಆಗಿದ್ದರೆ
2005 ಕ್ಕಿಂತ ಮೊದಲು ಪಿತ್ರಾರ್ಜಿತ ಆಸ್ತಿ ವಿಭಾಗ ಆಗಿದ್ದರೆ ಅದರಲ್ಲಿ ಹೆಣ್ಣು ಮಕ್ಕಳಿಗೆ ಯಾವುದೇ ಹಕ್ಕು ಇರುವುದಿಲ್ಲ. ಹೌದು, 2005 ರ ತಿದ್ದುಪಡಿ ಮತ್ತು 2020 ರ ಸುಪ್ರೀಮ್ ಕೋರ್ಟ್ Vineeta sharma ಅವರ ತೀರ್ಪಿನ ಪ್ರಕಾರ, ಹೆಣ್ಣು ಮಕ್ಕಳು ಪಿತ್ರಾರ್ಜಿತ ಆಸ್ತಿಯಲ್ಲಿ ಜನ್ಮ ಸಿದ್ದ ಹಕ್ಕನ್ನು ಪಡೆಯುತ್ತಾರೆ. ಆದರೆ 2005 ರ ತಿದ್ದುಪಡಿಗಿಂತ ಮೊದಲು ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇರಲಿಲ್ಲ.
* ತಂದೆ ಗಳಿಸಿದ ಆಸ್ತಿಯಲ್ಲಿ (ಸ್ವಯಾರ್ಜಿತ ಆಸ್ತಿ)
ತಂದೆ ಅಥವಾ ಅಜ್ಜ ತಮ್ಮ ಉದ್ಯೋಗ, ವ್ಯಾಪಾರ, ಖರೀದಿ, ಗಿಫ್ಟ್ ನಿಂದ ಮಾಡಿದ ಆಸ್ತಿ ಪಿತ್ರಾರ್ಜಿತ ಆಸ್ತಿ ಆಗುವುದಿಲ್ಲ ಮತ್ತು ಅದು ಸ್ವಯಾರ್ಜಿತ ಆಸ್ತಿಯಾಗುತ್ತದೆ. ಇದರಲ್ಲಿ ಮಕ್ಕಳಿಗೆ ಯಾವುದೇ ಹಕ್ಕು ಇರುವುದಿಲ್ಲ. ತಂದೆ ಅಥವಾ ಅಜ್ಜ ಆ ಆಸ್ತಿಯನ್ನು ಯಾರಿಗೆ ಬೇಕಾದರೂ ನೀಡಬಹುದು.
* ವಿಲ್ ಬರೆದಿಟ್ಟಿದ್ದರೆ
ತಂದೆ ಜೀವಂತ ಇರುವಾಗಲೇ ಮಗಳನ್ನು ಬಿಟ್ಟು ರಿಜಿಸ್ಟರ್ಡ್ ವಿಲ್ ಬರೆದಿಟ್ಟಿದ್ದರೆ, ಕಾನೂನಿನ ಪ್ರಕಾರ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಯಾವುದೇ ಹಕ್ಕು ಇರುವುದಿಲ್ಲ.
* ಬಿಡುಗಡೆ ಪತ್ರ
ಮಗಳು ಒತ್ತಡ ಅಥವಾ ಪೀತಿಯಿಂದ ತನ್ನ ಪಾಲನ್ನು ತಾನಾಗಿಯೇ ಬೇರೆಯವರಿಗೆ ರಿಜಿಸ್ಟರ್ಡ್ ಡೀಡ್ ಮಾಡಿದ್ದರೆ..? ಅವಳು ಮತ್ತೆ ಅದರಲ್ಲಿ ಹಕ್ಕು ಕೇಳಲು ಸಾಧ್ಯವಿಲ್ಲ.
* ಕುಟುಂಬ ಒಪ್ಪಂದದ ಮೂಲಕ ಹಕ್ಕು ಬಿಟ್ಟು ಕೊಟ್ಟಿರುವುದು
ಕುಟುಂಬದ ಒಳಗೆ ಮೌಖಿಕ ಅಥವಾ ಬರೆದ ಒಪ್ಪಂದದಲ್ಲಿ ಮಗಳು “ನನಗೆ ಬೇಡ, ನೀವೇ ತೆಗೋಳಿ” ಎಂದು ಸಹಿ ಹಾಕಿದ್ದರೆ ಮುಂದೆ ಅವಳಿಗೆ ಅದರಲ್ಲಿ ಹಕ್ಕು ಇರುವುದಿಲ್ಲ.
* ದತ್ತು ತೆಗೆದುಕೊಂಡಿದ್ದರೆ
ಮಗಳನ್ನು ಇನ್ನೊಂದು ಕುಟುಂಬಕ್ಕೆ ದತ್ತು ಕೊಟ್ಟಿದ್ದರೆ, ಆಕೆ ಜನನ ಕುಟುಂಬದಲ್ಲಿ ಹಕ್ಕನ್ನು ಕಳೆದುಕೊಳ್ಳುತ್ತಾಳೆ. (ಹಿಂದೂ ದತ್ತು ಮತ್ತು ಪಾಲನೆ ಕಾಯ್ದೆ 1956)
* ಮಗಳು ವಿದೇಶಿ ಪೌರತ್ವ ಪಡೆದಿದ್ದರೆ
ಮಗಳು ಅಮೆರಿಕಾ / ಕೆನಡಾ ಪೌರತ್ವ ಪಡೆದು ಭಾರತೀಯ ಪೌರತ್ವ ಬಿಟ್ಟರೆ, ಕೆಲವು ಸಂದರ್ಭಗಳಲ್ಲಿ ಕೃಷಿ ಭೂಮಿಯಲ್ಲಿ ಹಕ್ಕು ಪಡೆದುಕೊಳ್ಳಲು ಸಾಧ್ಯವಿಲ್ಲ. (ಕರ್ನಾಟಕ ಭೂ ಸುಧಾರಣೆ ಕಾಯ್ದೆ ಸೆಕ್ಷನ್ 79A, 79B)
* ಆಸ್ತಿ ಸರ್ಕಾರದ ವಶ ಅಥವಾ ಮಾರಾಟವಾಗಿರುವುದು
ತಂದೆ ಸಾಲ ಮಾಡಿ ಬ್ಯಾಂಕ್ ಗೆ ಆಸ್ತಿ ಜಪ್ತಿಯಾಗಿದ್ದರೆ ಅಥವಾ ಜೀವಂತಿಕೆಯಲ್ಲೇ ಮಾರಾಟ ಮಾಡಿದ್ದರೆ ಮಕ್ಕಳಿಗೆ ಆಸ್ತಿಯಲ್ಲಿ ಯಾವುದೇ ಪಾಲು ಸಿಗುವುದಿಲ್ಲ.
* ದಾಖಲೆಗಳ ಕೊರತೆ
RTC, ಮ್ಯುಟೇಷನ್, ಖಾತಾ, ವಂಶಾವಳಿ, ಪೂರ್ವಜರ ದಾಖಲೆಗಳು ಇಲ್ಲದಿದ್ದರೆ, ನ್ಯಾಯಾಲಯದಲ್ಲಿ “ಇದು ಪಿತ್ರಾರ್ಜಿತ ಆಸ್ತಿಯೇ ಅಲ್ಲ” ಎಂದು ವಾದ ಮಾಡಿ ಹಕ್ಕು ಸಿಗದೇ ಇರುವಂತೆ ಮಾಡಬಹುದು.
* ಮಗಳು ಕ್ರಿಶ್ಚಿಯನ್ /ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿದ್ದರೆ
ಹಿಂದೂ ಕುಟುಂಬದ ಮಗಳು ಕ್ರಿಶ್ಚಿಯನ್ ಆದರೆ, ಹಿಂದೂ ಉತ್ತರಾಧಿಕಾರಿ ಕಾಯ್ದೆ ಅನ್ವಯಿಸುವುದಿಲ್ಲ. ಕ್ರಿಶ್ಚಿಯನ್ ಕಾನೂನು ಪ್ರಕಾರ ಆಸ್ತಿ ಹಂಚಿಕೆ ಆಗುತ್ತದೆ.
* ಸಮಯ ಮಿತಿ ಮೀರಿದ್ದರೆ
ಹಕ್ಕು ಕೇಳಲು 12 ವರ್ಷಗಳ ಗಡುವು ಇದೆ (Limitation Act 1963, ಆರ್ಟಿಕಲ್ 65). ತಂದೆ 2000 ರಲ್ಲಿ ಸತ್ತಿದ್ದು 2025 ರಲ್ಲಿ ಕೇಸ್ ಹಾಕಿದರೆ ಕೇಸ್ ಡಿಸ್ಮಿಸ್ ಆಗುತ್ತದೆ.
* ಗಂಡನ ಮನೆಯಿಂದ ಆಸ್ತಿ ಪಡೆದಿದ್ದರೆ
ಕೆಲವು ಕುಟುಂಬದಲ್ಲಿ, ಹೆಣ್ಣು ಮಗಳಿಗೆ ಅವಳ ಗಂಡನ ಮನೆಯಲ್ಲಿ ಸಾಕಷ್ಟು ಆಸ್ತಿ ಇದೆ ಎಂದು ಪಾಲು ನೀಡಲು ಹಿಂದೆ ಸರಿಯುತ್ತಾರೆ, ಆದರೆ ಇದು ಕಾನೂನಿನ ಪ್ರಕಾರ ತಪ್ಪು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

