2.15 Crore Aadhaar Card Deactivate: ಭಾರತದಲ್ಲಿ ಚಿಕ್ಕ ಮಗುವಿನಿಂದ ಹಿಡಿದು ವಯಸ್ಸಾದವರಿಗೂ ಕೂಡ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ಕೇವಲ ಗುರುತಿನ ಚೀಟಿ ಅಲ್ಲ, ಆಧಾರ್ ದೇಶದ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಪ್ರತಿಯೊಂದು ಹಂತದಲ್ಲಿ ಅಗತ್ಯವಾಗಿ ಬೇಕಾಗುವ ಒಂದು ದಾಖಲೆ ಆಗಿದೆ. ಇದೀಗ UIDAI 2.15 ಕೋಟಿಗೂ ಹೆಚ್ಚು ಆಧಾರ್ ಸಂಖ್ಯೆಗಳನ್ನು ಶಾಶ್ವತವಾಗಿ ಡಿಲೀಟ್ ಮಾಡಿದೆ. ಇದಕ್ಕೆ ಕಾರಣ ಏನು..? ನಿಮ್ಮ ಆಧಾರ್ ಕಾರ್ಡ್ ಡಿಆಕ್ಟಿವೇಟ್ ಆಗಿದೆಯೇ..? ಇಲ್ಲವೇ..? ತಿಳಿಯುವುದು ಹೇಗೆ..? ಅನ್ನುವ ಬಗ್ಗೆ ನಾವೀಗ ಮಾಹಿತಿಯನ್ನ ತಿಳಿದುಕೊಳ್ಳೋಣ.
ಆಧಾರ್ ಸಂಖ್ಯೆಗಳು ಡಿಲೀಟ್ ಆಗಲು ಕಾರಣ ಏನು..?
ಇದುವರೆಗೆ UIDAI 2.15 ಕೋಟಿಗೂ ಹೆಚ್ಚು ಆಧಾರ್ ಸಂಖ್ಯೆಗಳನ್ನು ಶಾಶ್ವತವಾಗಿ ಡಿಲೀಟ್ ಮಾಡಿದೆ. ಹೌದು, ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ (Rigistar General Of India) ಮತ್ತು ರಾಜ್ಯ ಸಿವಿಲ್ ರಿಜಿಸ್ಟ್ರೇಷನ್ ವ್ಯವಸ್ಥೆಯಿಂದ ಬಂದ 2.15 ಕೋಟಿ ಮರಣ ದಾಖಲೆಯಿಂದ UIDAI 2.15 ಕೋಟಿಗೂ ಹೆಚ್ಚು ಆಧಾರ್ ಸಂಖ್ಯೆಗಳನ್ನು ಡಿಆಕ್ಟಿವೇಟ್ ಮಾಡಿದೆ. ಈ ವ್ಯಕ್ತಿಗಳು ಮರಣ ಹೊಂದಿದರು ಕೂಡ ಇವರ ಆಧಾರ್ ಕಾರ್ಡ್ ಗಳು ಸಕ್ರಿಯವಾಗಿದ್ದವು. ಮರಣಿಸಿದವರ ಆಧಾರ್ ಕಾರ್ಡ್ ಗಳನ್ನೂ ಇಟ್ಟುಕೊಂಡು ಬ್ಯಾಂಕ್ ಖಾತೆಯಲ್ಲಿ ಗುಪ್ತ ವಹಿವಾಟು ಮಾಡುವುದು, ಸರ್ಕಾರೀ ಯೋಜನೆಗಳ ಲಾಭ ಪಡೆದುಕೊಳ್ಳುವುದು ಸರ್ಕಾರದ ಗಮನಕ್ಕೆ ಬಂದಿದ್ದು ಈ ಕಾರಣದಿಂದ UIDAI 2.15 ಕೋಟಿಗೂ ಹೆಚ್ಚು ಆಧಾರ್ ಸಂಖ್ಯೆಗಳನ್ನು ಶಾಶ್ವತವಾಗಿ ಡಿಲೀಟ್ ಮಾಡಿದೆ.
ನಕಲಿ ಆಧಾರ್ ಕಾರ್ಡ್ ಅನ್ನು ಹೇಗೆ ಗುರುತಿಸಲಾಯಿತು..?
* ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ (RGI-CRS)
* ರಾಜ್ಯ ಸರ್ಕಾರಗಳ ಸಿವಿಲ್ ರಿಜಿಸ್ಟ್ರೇಷನ್ ದಾಖಲೆಗಳು
* ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್ (PDS)
* ನ್ಯಾಷನಲ್ ಸೋಷಿಯಲ್ ಅಸಿಸ್ಟೆನ್ಸ್ ಪ್ರೋಗ್ರಾಂ (NSAP)
* ಆಸ್ಪತ್ರೆಗಳು, ಪೊಲೀಸ್ ಠಾಣೆಗಳು, ಗ್ರಾಮ ಪಂಚಾಯಿತಿಗಳ ಮರಣ ದಾಖಲೆಗಳ ಸಹಾಯದಿಂದ ನಕಲಿ ಆಧಾರ್ ಕಾರ್ಡ್ ಅನ್ನು ಪತ್ತೆಹಚ್ಚಿ ಡಿಆಕ್ಟಿವೇಟ್ ಮಾಡಲಾಗಿದೆ.
ಇದುವರೆಗೆ ಎಷ್ಟು ಆಧಾರ್ ಸಂಖ್ಯೆಗಳು ಡಿಆಕ್ಟಿವೇಟ್ ಆಗಿವೆ (ರಾಜ್ಯವಾರು ಪ್ರಕಾರ)
* ಉತ್ತರ ಪ್ರದೇಶ: 42 ಲಕ್ಷ
* ಬಿಹಾರ: 28 ಲಕ್ಷ
* ಮಹಾರಾಷ್ಟ್ರ: 19 ಲಕ್ಷ
* ಪಶ್ಚಿಮ ಬಂಗಾಳ: 17 ಲಕ್ಷ
* ಮಧ್ಯಪ್ರದೇಶ: 15 ಲಕ್ಷ
* ಆಂಧ್ರಪ್ರದೇಶ ಮತ್ತು ತೆಲಂಗಾಣ: 14 ಲಕ್ಷ
* ರಾಜಸ್ಥಾನ: 13 ಲಕ್ಷ
* ಕರ್ನಾಟಕ: 9.8 ಲಕ್ಷ
* ತಮಿಳುನಾಡು: 8.5 ಲಕ್ಷ
* ಒಡಿಶಾ: 7.2 ಲಕ್ಷ
* ಕರ್ನಾಟಕದಲ್ಲಿ ಇದುವರೆಗೆ ಸುಮಾರು 9.8 ಲಕ್ಷ ಆಧಾರ್ ಸಂಖ್ಯೆಗಳು ಡಿಆಕ್ಟಿವೇಟ್ ಆಗಿವೆ.
ಡಿಲೀಟ್ ಆಗಿರುವ ಆಧಾರ್ ಸಂಖ್ಯೆಗಳು
ಇವುಗಳನ್ನು ಮತ್ತೆ ಬೇರೆಯವರಿಗೆ ನೀಡುವುದಿಲ್ಲ. ಆಧಾರ್ ಕಾರ್ಡ್ ಮೇಲೆ “Deactivated” ಅಥವಾ “Cancelled” ಎಂದು ಮಾರ್ಕ್ ಮಾಡಲಾಗಿರುತ್ತದೆ. ಬಯೋಮೆಟ್ರಿಕ್ ಡೇಟಾ ಡೇಟಾ ಬೇಸ್‌ನಿಂದ ಸಂಪೂರ್ಣ ತೆಗೆದುಹಾಕಲಾಗುತ್ತದೆ.
ನಿಮ್ಮ ಆಧಾರ್ ಕಾರ್ಡ್ ಡಿಆಕ್ಟಿವೇಟ್ ಆಗಿದೆಯೇ..? ಇಲ್ಲವೇ..? ಚೆಕ್ ಮಾಡಿ
ಮೊದಲು https://myaadhaar.uidai.gov.in/ ಗೆ ಭೇಟಿ ನೀಡಿ Verify Aadhaar ಗೆ ಹೋಗಿ mAadhaar ಆಪ್ ಡೌನ್ ಲೋಡ್ ಮಾಡಿಕೊಳ್ಳಿ. OTP ಬಂದರೆ ಸೇಫ್ ಟೋಲ್ ಫ್ರೀ 1947 ಗೆ ಕರೆ ಮಾಡಿ. ನಂತರ SMS ಮೂಲಕ UID STATUS ಎಂದು ಟೈಪ್ ಮಾಡಿ ಆಧಾರ್ ನಂಬರ್ ಹಾಕಿ 51969 ಗೆ ಕಳುಹಿಸಿ. ಇನ್ನು ಕುಟುಂಬದಲ್ಲಿ ಯಾರಾದರೂ ಮರಣ ಹೊಂದಿದಾಗ myAadhaar ಪೋರ್ಟಲ್ ಗೆ ಲಾಗಿನ್ ಆಗಿ Report Death ಆಯ್ಕೆ ಮಾಡಿ, ಮರಣ ಪ್ರಮಾಣಪತ್ರ ಅಪ್ಲೋಡ್ ಮಾಡಬೇಕು. ನಂತರ ಅವರ ಹೆಸರಿನ ಆಧಾರ್ ಕಾರ್ಡ್ ಡಿಲೀಟ್ ಆಗುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

