GruhaLakshmi December Installment: ಕರ್ನಾಟಕ ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ರಾಜ್ಯದ ಅರ್ಹ ಮಹಿಳೆಯರು ತಿಂಗಳಿಗೆ 2000 ರೂ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಅನುಷ್ಠಾನ ಮಾಡಿ 23 ತಿಂಗಳು ಕಳೆದಿದೆ. ಆದರೆ ಕೆಲವು ಮಹಿಳೆಯರ ಖಾತೆಗೆ ಇತ್ತೀಚಿಗೆ ಗೃಹಲಕ್ಷ್ಮಿ ಯೋಜನೆಯ 2000 ರೂ ಜಮಾ ಆಗುತ್ತಿಲ್ಲ. ಇದರ ನಡುವೆ ಈಗ ಡಿಸೆಂಬರ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ಬರುತ್ತೆ ಅನ್ನುವ ಪ್ರಶ್ನೆ ಎದುರಾಗಿದೆ. ಹಾಗಾದರೆ ಗೃಹಲಕ್ಷ್ಮಿ ಯೋಜನೆಯ ಡಿಸೆಂಬರ್ ತಿಂಗಳ ಹಣ ಯಾವಾಗ ಬರುತ್ತೆ ಅನ್ನುವುದರ ಬಗ್ಗೆ ಮಾಹಿತಿ ತಿಳಿಯೋಣ.
ಗೃಹಲಕ್ಷ್ಮಿ ಯೋಜನೆಯ ಡಿಸೆಂಬರ್ ತಿಂಗಳ ಹಣ
ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರ ಮಹಿಳೆಯರ ಖಾತೆಗೆ ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಹಣವನ್ನು ಜಮಾ ಮಾಡಿದೆ. ಅದೇ ರೀತಿಯಲ್ಲಿ ಡಿಸೆಂಬರ್ ತಿಂಗಳ ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಇನ್ನೇನು ಕೆಲವೇ ದಿನಗಳಲ್ಲಿ ಮಹಿಳೆಯರ ಖಾತೆಗೆ ಜಮಾ ಆಗಲಿದೆ. ಕೆಲವು ಮಾಹಿತಿಯ ಪ್ರಕಾರ, ಡಿಸೆಂಬರ್ ತಿಂಗಳ 15 ನೇ ತಾರೀಕಿನ ಒಳಗಾಗಿ ಗೃಹ ಲಕ್ಷ್ಮಿ ಯೋಜನೆಯ ಹಣ ಜಾಮಾ ಆಗುತ್ತೆ ಎಂದು ಹೇಳಾಗುತ್ತಿದೆ, ಆದರೆ ಇದು ಅಧಿಕೃತ ದಿನಾಂಕ ಆಗಿರುವುದಿಲ್ಲ. ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಕಾರ, 22ನೇ ಕಂತಿನ ಹಣ ಅಕ್ಟೋಬರ್ ನಲ್ಲಿ ಬಿಡುಗಡೆಯಾಗಿತ್ತು. ಅದೇ ರೀತಿಯಲ್ಲಿ ನವೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಕೂಡ ಹಣ ಜಮಾ ಮಾಡುವ ಕೆಲಸ ಮಾಡಲಾಗಿದೆ. ಕೆಲವು ವರದಿಗಳ ಪ್ರಕಾರ, ಡಿಸೆಂಬರ್ 1 ರಿಂದ 15 ರ ನಡುವೆ ಬ್ಯಾಂಕ್ ಖಾತೆಗಳಿಗೆ ಜಮಾ ಆಗುತ್ತೆ ಎಂದು ಹೇಳಲಾಗುತ್ತಿದೆ.
ಗೃಹಲಕ್ಷ್ಮಿ ಹಣ ಬರದಿರಲು ಕಾರಣ
* ಕರ್ನಾಟಕ ರಾಜ್ಯ ಸರ್ಕಾರದ ಕೆಲವು ತಾಂತ್ರಿಕ ದೋಷಗಳು
* ಮಹಿಳೆಯರ ಬ್ಯಾಂಕ್ ಖಾತೆಯ ವಿವರ ತಪ್ಪಾಗಿರುವುದು
* ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಮಾಡದೆ ಇರುವುದು
* ಬ್ಯಾಂಕ್ ಖಾತೆಗೆ KYC ಅಪ್ಡೇಟ್ ಆಗದೆ ಇರುವುದು
* ಕುಟುಂಬದ BPL ರೇಷನ್ ಕಾರ್ಡ್ ರದ್ದಾಗಿರುವುದು
* ಮಹಿಳೆಯರ ಹೆಸರು ಯೋಜನೆಯಿಂದ ಡಿಲೀಟ್ ಆಗಿರುವುದು
* ತೆರಿಗೆ ಪಾವತಿ ಮಾಡುವ ಮಹಿಳೆಯರು
* ಕರ್ನಾಟಕ ನಿವಾಸಿ ಆಗಿರದ ಮಹಿಳೆಯರು
ಮಹಿಳೆಯರು ಖಾತೆಯಲ್ಲಿ ಯಾವುದೇ ದೋಷಗಳು ಇಲ್ಲದೆ ಇದ್ದರೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಬಾರದೆ ಇದ್ದರೆ ಸೇವಾ ಸಿಂಧು ಪೋರ್ಟಲ್ ಅಥವಾ ಹೆಲ್ಪ್ಲೈನ್ ಗೆ ಸಂಪರ್ಕಿಸಿ ಮಾಹಿತಿ ತಿಳಿದುಕೊಳ್ಳಬಹುದು. ಮಹಿಳೆಯರು DBT ಕರ್ನಾಟಕ ಅಪ್ಲಿಕೇಶನ್ ಮೂಲಕ ಗೃಹಲಕ್ಷ್ಮಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.
ಗೃಹಲಕ್ಷ್ಮಿ ಯೋಜನೆಯ ಪ್ರಮುಖ ಉದ್ದೇಶ
ಗೃಹಲಕ್ಷ್ಮಿ ಯೋಜನೆ ಕರ್ನಾಟಕ ರಾಜ್ಯ ಸರ್ಕಾರ ಪಂಚ ಗ್ಯಾರೆಂಟಿ ಯೋಜನೆಯಲ್ಲಿ ಒಂದು ಯೋಜನೆಯಾಗಿದೆ. ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಕುಟುಂಬದ ಮುಖ್ಯಸ್ಥ ಮಹಿಳೆ ಪ್ರತಿ ತಿಂಗಳು 2000 ರೂ ಪಡೆದುಕೊಳ್ಳುತ್ತಾಳೆ. ಈ ಯೋಜನೆಯ ಮೂಲ ಉದ್ದೇಶವೇ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯವನ್ನು ಉತ್ತೇಜಿಸುವುದು. 2023 ರಲ್ಲಿ ಪ್ರಾರಂಭವಾದ ಈ ಯೋಜನೆಯಡಿ ಲಕ್ಷಾಂತರ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ. ಮಹಿಳೆಯರು ಈ ಹಣವನ್ನು ಸ್ವಂತ ಕೆಲಸಕ್ಕೆ ಬಳಸಿಕೊಂಡು ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು. ಕರ್ನಾಟಕ ರಾಜ್ಯ ಸರ್ಕಾರ ಸುಮಾರು ₹28,608 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೆ ತಂದಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

