Complete Home Loan Documents List: ಮಧ್ಯಮ ವರ್ಗದ ಜನರಿಗೆ ಮನೆಯನ್ನು ಕಟ್ಟುವುದು ಅಥವಾ ಖರೀದಿಸುವುದು ದೊಡ್ಡ ಕನಸಾಗಿರುತ್ತದೆ. ಈ ಕನಸನ್ನು ಈಡೇರಿಸಿಕೊಳ್ಳುವ ಸಲುವಾಗಿ ಗೃಹ ಸಾಲವನ್ನು ಪಡೆದುಕೊಳ್ಳುತ್ತಾರೆ. ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಗೃಹ ಸಾಲದ ಬಡ್ಡಿದರದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬೇಕು. ಯಾವ ಬ್ಯಾಂಕ್ ಕಡಿಮೆ ಬಡ್ಡಿಗೆ ಗೃಹ ಸಾಲವನ್ನು ನೀಡುತ್ತಿದೆ ಎಂದು ತಿಳಿದುಕೊಂಡು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವುದು ಉತ್ತಮ. ಇನ್ನು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಲು ಕೆಲವು ದಾಖಲೆ ಗಳು ಅಗತ್ಯವಾಗಿದೆ. ಯಾವುದಾದರೂ ಒಂದು ದಾಖಲೆ ಇಲ್ಲದಿದ್ದರೂ ಸಹ ನಿಮ್ಮ ಗೃಹ ಸಾಲದ ಅರ್ಜಿ ತಿರಸ್ಕಾರವಾಗುತ್ತದೆ. ಇದೀಗ ನಾವು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕು ಅನ್ನುವ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನ ತಿಳಿದುಕೊಳ್ಳೋಣ.
1 ) ವಯಕ್ತಿಕ ದಾಖಲೆ ಮತ್ತು KYC ದಾಖಲೆಗಳು ಎಲ್ಲರಿಗೂ ಕಡ್ಡಾಯವಾಗಿದೆ
* ಆಧಾರ್ ಕಾರ್ಡ್
* ಪಾನ್ ಕಾರ್ಡ್
* 6 ಪಾಸ್ ಪೋರ್ಟ್ ಸೈಜ್ ಫೋಟೋ
* ವೋಟರ್ ಐಡಿ / ಡ್ರೈವಿಂಗ್ ಲೈಸನ್ಸ್ / ಪಾಸ್ ಪೋರ್ಟ್ (ಯಾವುದಾದರು ಒಂದು)
* ಇತ್ತೀಚಿನ 3 ತಿಂಗಳ ವಿದ್ಯುತ್ ಬಿಲ್ / ನೀರಿನ ಬಿಲ್ / ಗ್ಯಾಸ್ ಬಿಲ್ (ಯಾವುದಾದರು ಒಂದು)
* ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಕಡ್ಡಾಯವಾಗಿದೆ
2 ) ಸಂಬಳ ಪಡೆಯುವವರು ನೀಡಬೇಕಾದ ದಾಖಲೆ
* ಕಳೆದ 3 ತಿಂಗಳಿನ ಸಂಬಳದ ಸ್ಲಿಪ್
* ಫಾರ್ಮ್ – 16
* ಇತ್ತೀಚಿನ 2 ವರ್ಷಗಳ ITR
* ಕಳೆದ 6 ತಿಂಗಳಿನ ಸಂಬಳ ಖಾತೆಯ ಬ್ಯಾಂಕ್ ಸ್ಟೇಟ್ಮೆಂಟ್
* Appointment Letter and Experience Certificate
* ಕಂಪನಿ ಐಡಿ ಕಾರ್ಡ್
3 ) ಸ್ವಂತ ಉದ್ಯೋಗಿ / ವ್ಯಾಪಾರಿಗಳು ನೀಡಬೇಕಾದ ದಾಖಲೆ
* ಕಳೆದ 3 ವರ್ಷಗಳ ITR + Computation of ಇನ್ಕಮ್
* Balance Sheet or Profit and Loss Account
* ಕಳೆದ 26 ತಿಂಗಳ ಕರೆಂಟ್ ಅಕೌಂಟ್ ಸ್ಟೇಟ್ಮೆಂಟ್
* GST ರಿಟರ್ನ್ ಫೈಲ್ಡ್
* GST ಸರ್ಟಿಫಿಕೇಟ್ ಮತ್ತು GST ರಿಜಿಸ್ಟ್ರೇಷನ್
* ಶಾಪ್ & Eshtablishment ಲೈಸೆನ್ಸ್
* ಪ್ರೊಫೆಷನಲ್ ಟ್ಯಾಕ್ಸ್ ಬಿಲ್
4 ) ಆಸ್ತಿಗೆ ಅಥವಾ ಭೂಮಿಗೆ ಸಮಂಧಿಸಿದ ದಾಖಲೆಗಳು
* ಮಾರಾಟ ಒಪ್ಪಂದ
* ಖಾತಾ ಸರ್ಟಿಫಿಕೇಟ್ & ಖಾತಾ ಎಸ್ಟ್ರಾಕ್ಟ್
* EC ಸರ್ಟಿಫಿಕೇಟ್
* ಟೈಟಲ್ ಡೀಡ್ / ಮದರ್ ಡೆಡ್ ಸರಣಿ
* ಕಟ್ಟಡ ಅನುಮತಿ
* OC ಸರ್ಟಿಫಿಕೇಟ್
* ಪ್ರಾಪರ್ಟಿ ಟ್ಯಾಕ್ಸ್ ಬಿಲ್
* ಲ್ಯಾಂಡ್ ಯೂಸ್ ಸರ್ಟಿಫಿಕೇಟ್
* NOC ಸರ್ಟಿಫಿಕೇಟ್
5 ) ಹೆಚ್ಚುವರಿ ಮತ್ತು ಬ್ಯಾಂಕುಗಳ ಹೊಸ ನಿಯಮದ ದಾಖಲೆಗಳು
* ಕ್ರೆಡಿಟ್ ರಿಪೋರ್ಟ್
* ಲೋನ್ ಅಪ್ಲಿಕೇಶನ್ ಫಾರ್ಮ್
* ಪ್ರೊಸೆಸಿಂಗ್ ಫಿ ಚೆಕ್
* ಸಹ ಅರ್ಜಿದಾರರ ದಾಖಲೆಗಳು (ಹೆಂಡತಿ, ತಂದೆ, ತಾಯಿ, ಮಕ್ಕಳು)
* ಮ್ಯಾರೇಜ್ ಸರ್ಟಿಫಿಕೇಟ್ (ವಿವಾಹಿತರಿಗೆ)
ಬ್ಯಾಂಕ್ ಗೆ ಅರ್ಜಿ ಸಲ್ಲಿಸುವ ಮೊದಲು ಈ ಟಿಪ್ಸ್ ಬಳಸಿ
* ಎಲ್ಲ ಜೆರಾಕ್ಸ್ ಗಳಿಗೆ Self Attested + Verified with Original ಬರೆದು ಸಹಿ ಮಾಡಿ
* ಆಧಾರ್ ಮೊಬೈಲ್ ಲಿಂಕ್ ಕಡ್ಡಾಯವಾಗಿದೆ.
* ಪಾನ್ ಆಧಾರ್ ಲಿಂಕ್ ಕಡ್ಡಾಯ
* CIBIL ಸ್ಕೋರ್ 750 + ಇದ್ದರೆ 8.35% ವರೆಗೆ ಬಡ್ಡಿ ಸಿಗುತ್ತದೆ
* ಎಲ್ಲ ದಾಖಲೆಗಳ PDF ಮತ್ತು ಹಾರ್ಡ್ ಕಾಪಿ ಇಟ್ಟುಕೊಳ್ಳಿ
Disclaimer: This information is provided for awareness purposes only. For personalised legal advice, consult a qualified professional and refer to official government notifications.

