Post Office FD 1 Lakh Return One Year: ಸುರಕ್ಷಿತ ಹೂಡಿಕೆಗೆ ಒಂದು ಉತ್ತಮ ಆಯ್ಕೆ ಎಂದು ಹೇಳಿದರೆ ಅದು ಪೋಸ್ಟ್ ಆಫೀಸ್ ಆಗಿದೆ. ಅಂಚೆ ಕಚೇರಿಯಲ್ಲಿ ನಾವು ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚಿನ ಸುರಕ್ಷತೆ ಸಿಗುತ್ತೆ ಅನ್ನುವ ಕಾರಣಕ್ಕೆ ಜನರು ಹೆಚ್ಚಿನ ಹಣವನ್ನು ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವುದನ್ನು ನಾವು ಗಮನಿಸಬಹುದು. ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಲು ಇರುವ ಆಯ್ಕೆಯಲ್ಲಿ FD ಯೋಜನೆ ಒಂದು ಪ್ರಮುಖವಾದ ಯೋಜನೆಯಾಗಿದೆ. ಪೋಸ್ಟ್ ಆಫೀಸ್ FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದ ಹಣಕ್ಕೆ ನಿರ್ಧಿಷ್ಟ ಆದಾಯ ಪಡೆದುಕೊಳ್ಳಬಹುದು. ಈ ಲೇಖನದಲ್ಲಿ ಪೋಸ್ಟ್ ಆಫೀಸ್ ನಲ್ಲಿ 1 ಲಕ್ಷ ರೂ FD ಇಟ್ಟರೆ ಎಷ್ಟು ರಿಟರ್ನ್ ಸಿಗಲಿದೆ ಅನ್ನುವುದರ ಬಗ್ಗೆ ಮಾಹಿತಿ ತಿಳಿಯೋಣ.
ಪೋಸ್ಟ್ ಆಫೀಸ್ FD ಬಡ್ಡಿ ದರಗಳು
* ಒಂದು ವರ್ಷಕ್ಕೆ 6.90%
* ಎರಡು ವರ್ಷಕ್ಕೆ 7%
* ಮೂರೂ ವರ್ಷಕ್ಕೆ 7.10%
* ಐದು ವರ್ಷಕ್ಕೆ 7.5%
ಪೋಸ್ಟ್ ಆಫೀಸ್ ನಲ್ಲಿ 1 ಲಕ್ಷ ರೂ FD ಇಟ್ಟರೆ ಎಷ್ಟು ರಿಟರ್ನ್
* ಪೋಸ್ಟ್ ಆಫೀಸ್ ನಲ್ಲಿ 1 ಲಕ್ಷ ರೂಪಾಯಿಯನ್ನು ಒಂದು ವರ್ಷಕ್ಕೆ FD ಇಟ್ಟರೆ 6.9% ರೇಟ್ ನಲ್ಲಿ ಬಡ್ಡಿ ಪಡೆದುಕೊಳ್ಳಬಹುದು. ಅಂದರೆ ವಾರ್ಷಿಕವಾಗಿ ಸುಮಾರು 6900 ರೂಪಾಯಿಯನ್ನು ಬಡ್ಡಿ ರೂಪದಲ್ಲಿ ಪಡೆದುಕೊಳ್ಳಬಹುದು.
* ಪೋಸ್ಟ್ ಆಫೀಸ್ ನಲ್ಲಿ ಎರಡು ವರ್ಷಕ್ಕೆ 1 ಲಕ್ಷ ರೂ FD ಇಟ್ಟರೆ 7% ಬಡ್ಡಿಯಲ್ಲಿ ವಾರ್ಷಿಕವಾಗಿ ಸುಮಾರು 7000 ರೂಪಾಯಿ ಲಾಭ ಪಡೆದುಕೊಳ್ಳಬಹುದು.
* ಪೋಸ್ಟ್ ಆಫೀಸ್ ಮೂರೂ ವರ್ಷಕ್ಕೆ 1 ಲಕ್ಷ ರೂ FD ಇಟ್ಟರೆ ವಾರ್ಷಿಕವಾಗಿ 7.10% ಬಡ್ಡಿದರದಲ್ಲಿ ಸುಮಾರು 7100 ರೂಪಾಯಿಯನ್ನು ವಾರ್ಷಿಕ ಬಡ್ಡಿಯಾಗಿ ಪಡೆದುಕೊಳ್ಳಬಹುದು.
* ಪೋಸ್ಟ್ ಆಫೀಸ್ ನಲ್ಲಿ ಐದು ವರ್ಷಕ್ಕೆ 1 ಲಕ್ಷ ರೂ FD ಇಟ್ಟರೆ 7.5% ಬಡ್ಡಿದರದಲ್ಲಿ ವಾರ್ಷಿಕವಾಗಿ 7500 ರೂಪಾಯಿಯನ್ನು ಬಡ್ಡಿಯಾಗಿ ಪಡೆದುಕೊಳ್ಳಬಹುದು.
ಪೋಸ್ಟ್ ಆಫೀಸ್ FD ಯೋಜನೆಗೆ ತೆರಿಗೆ ನಿಯಮಗಳು
ಪೋಸ್ಟ್ ಆಫೀಸ್ FD ಯೋಜನೆ ತೆರಿಗೆ ನಿಯಮಕ್ಕೆ ಒಳಪಡುತ್ತದೆ. 5,000ಕ್ಕಿಂತ ಹೆಚ್ಚು ಬಡ್ಡಿಗೆ 10% TDS ಕಡಿತ. ಆದರೆ ನೀವು PAN ಕಾರ್ಡ್ ನೀಡಿದರೆ, ಕಡಿತ ತಪ್ಪಿಸಬಹುದು ಮತ್ತು ಟ್ಯಾಕ್ಸ್ ರಿಟರ್ನ್‌ನಲ್ಲಿ ಕ್ಲೇಮ್ ಮಾಡಬಹುದು. ಸೀನಿಯರ್ ಸಿಟಿಜನ್‌ಗಳು 50,000 ರೂಪಾಯಿ ವರೆಗೆ ಡಿಡಕ್ಷನ್ ಪಡೆಯಬಹುದು. ಪೋಸ್ಟ್ ಆಫೀಸ್ ಮಾತ್ರವಲ್ಲದೆ ಬ್ಯಾಂಕಿನಲ್ಲಿ FD ಇಟ್ಟರು ಕೂಡ ತೆರಿಗೆ ನಿಯಮ ಪಾಲನೆ ಮಾಡಬೇಕು.
FD ಯೋಜನೆಯ ಸಾಲ ಪಡೆದುಕೊಳ್ಳಬಹುದು
ಪೋಸ್ಟ್ ಆಫೀಸ್ FD ಯೋಜನೆಯಲ್ಲಿ ಹೂಡಿಕೆ ಮಾಡಿದ ಆರು ತಿಂಗಳ ನಂತರ ಹೂಡಿಕೆಯ ಹಣದ ಮೇಲೆ ಸಾಲ ಪಡೆದುಕೊಳ್ಳಬಹುದು. ಪೋಸ್ಟ್ ಆಫೀಸ್ FD ಯೋಜನೆಯಲ್ಲಿ ಕನಿಷ್ಠ 1000 ರೂ ಹೂಡಿಕೆ ಮಾಡಬಹುದು ಮತ್ತು ಗರಿಷ್ಟ ಹೂಡಿಕೆಗೆ ಯಾವುದೇ ರೀತಿಯ ಮಿತಿ ಇರುವುದಿಲ್ಲ.
FD ಖಾತೆ ತೆರೆಯಲು ಬೇಕಾಗಿರುವ ದಾಖಲೆಗಳು
* ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಖಾತೆ
* ಆಧಾರ್ ಕಾರ್ಡ್
* ಪಾನ್ ಕಾರ್ಡ್
* ಖಾತೆದಾರರ ಭಾವಚಿತ್ರ
* KYC ಕೊಡಬೇಕು
Disclaimer: This information is provided for awareness purposes only. For personalised legal advice, consult a qualified professional and refer to official government notifications.

