PM-KUSUM Scheme Karnataka 2025: ನೀವು ರೈತರಾಗಿದ್ದು ನೀರು ಸರಬರಾಜುಗೆ ಡೀಸಲ್ ಪಂಪ್ ಅಥವಾ ವಿದ್ಯುತ್ ಬಿಲ್ಗಳು ಹೆಚ್ಚಾಗಿ ಬರುತ್ತಿದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ. ಇದೀಗ ಕೇಂದ್ರ ಸರಕಾರ ರೈತರಿಗಾಗಿ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಕೇಂದ್ರ ಸರ್ಕಾರದ PM-KUSUM ಯೋಜನೆಯ ಮೂಲಕ ಸೌರ ಶಕ್ತಿ ಆಧಾರಿತ ಪಂಪ್ ಸೆಟ್ ಗಳನ್ನು ಸ್ಥಾಪಿಸಿ, ವಿದ್ಯುತ್ ಬಿಲ್ ಕಡಿಮೆ ಮಾಡಿ ಮತ್ತು ಆದಾಯ ಹೆಚ್ಚಿಸಿಕೊಳ್ಳಿ. ಇದು ರೈತರ ಕೃಷಿ ಜೀವನಕ್ಕೆ ಬಹಳ ಸಹಕಾರಿಯಾಗಲಿದೆ. ಹಾಗಾದರೆ ಕೇಂದ್ರ ಸರ್ಕಾರದ PM-KUSUM ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಬೇಕಾಗಿರುವ ದಾಖಲೆಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ತಿಳಿಯೋಣ.
PM-KUSUM ಯೋಜನೆ
PM-KUSUM (Prime Minister Kisan Urja Suraksha Ev Utthan Mahabhiyaan) ಯೋಜನೆಯನ್ನು 2019 ರಲ್ಲಿ ಜಾರಿಗೆ ತರಲಾಗಿದೆ. ಕೃಷಿ ಕ್ಷೇತ್ರದಲ್ಲಿ ಸೌರ ಶಕ್ತಿಯನ್ನು ಉತ್ತೇಜಿಸುವ ಗುರಿ ಹೊಂದಿದ್ದು, ಈ ಯೋಜನೆಯ ಮೂಲಕ ದೇಶಾದ್ಯಂತ 34,800 ಮೆಗಾವ್ಯಾಟ್ ಸೌರ ಶಕ್ತಿ ಸಾಮರ್ಥ್ಯ ಸೇರಿಸುವ ಗುರಿ ಇದೆ. ಇದರಲ್ಲಿ ಕೇಂದ್ರ ಸರ್ಕಾರ 34,422 ಕೋಟಿ ಖರ್ಚು ಮಾಡುತ್ತಿದೆ. ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು ಪಂಪ್ ಗಳು ಸ್ಥಾಪನೆಯಾಗಿದೆ.
ಈ ಯೋಜನೆಯ 3 ಮುಖ್ಯ ಘಟಕಗಳು
1 ) ಘಟಕ A – ಕೃಷಿ ಜಮೀನಿನಲ್ಲಿ 10,000 ರೂ. ವ್ಯಾಟ್ ಗಿಂತ ಕಡಿಮೆ ಸೌರ ಕ್ಷೇತ್ರಗಳ ಸ್ಥಾಪನೆ. ಇದರಿಂದ ರೈತರು ವಿದ್ಯುತ್ ಬಿಲ್ ಗಳಿಂದ ಉಳಿತಾಯ ಮಾಡಿ ಡಿಸ್ಕಾಂ ಗಳಿಗೆ ವಿದ್ಯುತ್ ಮಾರಾಟ ಮಾಡಬಹುದು.
2 ) ಆಫ್ – ಗ್ರಿಡ್ ಪ್ರದೇಶಗಳಲ್ಲಿ 17.5 ಲಕ್ಷ Stand Alone ಸೌರ ಪಂಪ್ ಗಳ ಸ್ಥಾಪನೆ.
3 ) 35 ಲಕ್ಷ ಗ್ರಿಡ್ – ಕನೆಕ್ಟೆಡ್ ಪಂಪ್ಗಳ ಸೌರೀಕರಣ, ಇದರಲ್ಲಿ ರೈತರು ವಿದ್ಯುತ್ ಮಾರಾಟ ಮಾಡಬಹುದು.
ಕರ್ನಾಟಕದಲ್ಲಿ PM-KUSUM
ಕರ್ನಾಟಕದಲ್ಲಿ PM-KUSUM ಯೋಜನೆಯಡಿ 40,000 ಸೋಲಾರ್ ಪಂಪ್ ಸೆಟ್ ಗಳನ್ನು ಸ್ಥಾಪಿಸುವ ಗುರಿ ಹೊಂದಿದೆ. ರೈತರು ಡೀಸಲ್ ಪಂಪ್ ಗಳನ್ನು ಸೌರ ಶಕ್ತಿಯಿಂದ ಬದಲಾಯಿಸುವ ಮೂಲಕ ವಾರ್ಷಿಕ 50,000 ಕ್ಕೂ ಹೆಚ್ಚು ಉಳಿತಾಯ ಮಾಡಬಹುದಾಗಿದೆ.
ಕೇಂದ್ರ ಸರ್ಕಾರದ PM-KUSUM ಯೋಜನೆಯ ಸಬ್ಸಿಡಿ
ಕೇಂದ್ರ ಸರ್ಕಾರ 30% + ರಾಜ್ಯ ಸರ್ಕಾರ 50% = ಒಟ್ಟು 80% ಸಬ್ಸಿಡಿ ಸಿಗುತ್ತದೆ. ಆದರೆ ರೈತರು ಕೇವಲ 20% ಖರ್ಚು ಮಾಡಬೇಕಾಗುತ್ತದೆ. (ಉದಾ: 3 ಹಪ್ ಪಂಪ್ ಗೆ 1.5 ಲಕ್ಷದಲ್ಲಿ 30,000 ಮಾತ್ರ ರೈತರು ಪಾವತಿ ಮಾಡಬೇಕು. ಯೋಜನೆಯಿಂದ ವಿದ್ಯುತ್ ಬಿಲ್ ಶೂನ್ಯಗೊಳ್ಳುತ್ತದೆ.
ಕೇಂದ್ರ ಸರ್ಕಾರದ PM-KUSUM ಯೋಜನೆಯ ಅರ್ಹತೆ
* ಕರ್ನಾಟಕದ ರೈತರಾಗಿರಬೇಕು
* ಡೀಸಲ್ ಪಂಪ್ ಬಳಸುವವರು (ಪಂಪ್ ಸಾಮರ್ಥ್ಯ, 3 ರಿಂದ 7.5 hp )
* ಒಟ್ಟು ಜಮೀನು 1 ಎಕರೆಯಿಂದ ಹೆಚ್ಚು ಇರಬೇಕು.
ಬೇಕಾಗಿರುವ ಅಗತ್ಯ ದಾಖಲೆಗಳು
* ಆಧಾರ್ ಕಾರ್ಡ್
* RTC
* ಬ್ಯಾಂಕ್ ಖಾತೆ ವಿವರ
* ಭಾವಚಿತ್ರ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
ಮೊದಲು http://www.pmkusum.mnre.gov.in/ ಅಥವಾ http://www.souramitra.com/ ಗೆ ಭೇಟಿ ನೀಡಿ, ‘Citizen Assessment’ ಮೇಲೆ ಕ್ಲಿಕ್ ಮಾಡಿ, ಹೆಸರು, ಮೊಬೈಲ್, ಆಧಾರ್ ನಂಬರ್ ಕೊಟ್ಟು OTP ನಮೂದಿಸಬೇಕು. ನಂತರ ಜಮೀನು ವಿವರಗಳು, ಪಂಪ್ ಸಾಮರ್ಥ್ಯ ಆಯ್ಕೆಮಾಡಿ, KREDL ಅನುಮೋದಿತ ವೆಂಡರ್ ಆರಿಸಿ ಅರ್ಜಿ ಸಲ್ಲಿಸಿ. ಪರಿಶೀಲನೆಗೆ 15 ರಿಂದ 30 ದಿನಗಳು ತೆಗೆದುಕೊಳ್ಳುತ್ತದೆ. ಸಬ್ಸಿಡಿ ಮಂಜೂರಾದ ನಂತರ, 10% ಡೆಪಾಸಿಟ್ ಮಾಡಿ, 90 ದಿನಗಳಲ್ಲಿ ಸ್ಥಾಪನೆ ಪೂರ್ಣಗೊಳಿಸಿ. ಹೆಚ್ಚಿನ ಮಾಹಿತಿಗಾಗಿ KREDL ಹೆಲ್ಪ್ ಲೈನ್ 080-22202100 ಅಥವಾ 8095132100 ಗೆ ಕರೆ ಮಾಡಿ. ರಾಜ್ಯದಲ್ಲಿ ಈಗಾಗಲೇ 1,000 ಕ್ಕೂ ಹೆಚ್ಚು MW ಸೌರ ಶಕ್ತಿ ಸಾಮರ್ಥ್ಯ ಸೇರಿದ್ದು, 1.7 ಲಕ್ಷ ರೈತರು ಪ್ರಯೋಜನ ಪಡೆದಿದ್ದಾರೆ. ಈ ಯೋಜನೆ ಕೇವಲ ವಿದ್ಯುತ್ ಬಿಲ್ ಉಳಿತಾಯವಲ್ಲ, ಭವಿಷ್ಯದ ಕೃಷಿಗೆ ಹೊಸ ಆಯಾಮ. ಇಂದೇ ಅರ್ಜಿ ಸಲ್ಲಿಸಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

