Bank Loan Rejection Reasons: ಶಿಕ್ಷಣಕ್ಕಾಗಿ, ಮನೆ ಕಟ್ಟಲು, ಕಾರ್ ತೆಗೆದುಕೊಳ್ಳಲು ಅಥವಾ ಇತ್ಯಾದಿ ಕೆಲಸಗಳಿಗೆ ಸಾಲ ಪಡೆದುಕೊಳ್ಳುತ್ತಾರೆ. ಈಗಿನ ಕಾಲದಲ್ಲಿ ಪ್ರತಿಯೊಂದು ಬ್ಯಾಂಕುಗಳು ಜನರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ಕೊಡುತ್ತಿದೆ. ಕೆಲವೊಮ್ಮೆ ಬ್ಯಾಂಕಿನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ ಸಾಲದ ಅರ್ಜಿ ತಿರಸ್ಕಾರ ಆಗುತ್ತದೆ. ಬ್ಯಾಂಕುಗಳು ಕೆಲವು ತಪ್ಪುಗಳ ಕಾರಣ ಸಾಲ ಅರ್ಜಿ ತಿರಸ್ಕಾರ ಮಾಡುತ್ತದೆ. ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಯಾವ ಕಾರಣಕ್ಕೆ ಸಾಲದ ಅರ್ಜಿ ರಿಜೆಕ್ಟ್ ಆಗುತ್ತದೆ ಎಂದು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ. ತಪ್ಪುಗಳನ್ನು ಸರಿಪಡಿಸಿಕೊಂಡು ಸಾಲಕ್ಕೆ ಅರ್ಜಿ ಸಲ್ಲಿಸಿದರೆ 100% ಸಾಲ ಸಿಗುತ್ತದೆ. ಬ್ಯಾಂಕ್ ಸಾಲ ರಿಜೆಕ್ಟ್ ಆಗಲು ಮುಖ್ಯ ಕಾರಣ ಏನು ಅನ್ನುವ ಬಗ್ಗೆ ಮಾಹಿತಿಯನ್ನ ತಿಳಿದುಕೊಳ್ಳೋಣ.
ಬ್ಯಾಂಕ್ ಸಾಲ ರಿಜೆಕ್ಟ್ ಆಗಲು ಮುಖ್ಯ ಕಾರಣ
1. ಕಡಿಮೆ CIBIL ಸ್ಕೋರ್
ಭಾರತದಲ್ಲಿ 90% ಬ್ಯಾಂಕ್ ಗಳು CIBIL ಸ್ಕೋರ್ ಆಧಾರದ ಮೇಲೆ ಸಾಲವನ್ನು ನೀಡುತ್ತವೆ. 750+ ಸ್ಕೋರ್ ಇದ್ದರೆ ಅತ್ಯುತ್ತಮ, 700 ಕ್ಕಿಂತ ಕಡಿಮೆ ಇದ್ದರೆ ಸಾಲ ರಿಜೆಕ್ಟ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
2. ಈಗಾಗಲೇ ಹೆಚ್ಚು ಸಾಲ ಇರುವುದು
ನಿಮ್ಮ ಮಾಸಿಕ ಆದಾಯದ 40% ರಿಂದ 50% ಕ್ಕಿಂತ ಹೆಚ್ಚು EMI ಗೆ ಹೋಗುತ್ತಿದ್ದರೆ ಹೊಸ ಸಾಲಕ್ಕೆ ಅವಕಾಶ ಸಿಗುದಿಲ್ಲ.
3. ಆದಾಯದ ದಾಖಲೆ ಸರಿಯಾಗಿ ಇಲ್ಲದೆ ಇರುವುದು
ಸಂಬಳದ ಸ್ಲಿಪ್, ITR, Form-16 ಇತ್ಯಾದಿ ದಾಖಲೆಗಳು ಸರಿಯಾಗಿ ಸಲ್ಲಿಸದಿದ್ದರೆ ಅಥವಾ ಆದಾಯ ಸ್ಥಿರವಲ್ಲದಿದ್ದರೆ ರಿಜೆಕ್ಟ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
4. ಉದ್ಯೋಗ ಅಥವಾ ವ್ಯಾಪಾರದ ಸ್ಥಿರತೆ ಕಡಿಮೆ
ಕೇವಲ 1 ರಿಂದ 2 ವರ್ಷದ ಅನುಭವ ಇದ್ದರೆ ಅಥವಾ ಕೆಲಸ ಬದಲಾವಣೆ ಹೆಚ್ಚಾಗಿದ್ದರೆ ಬ್ಯಾಂಕ್ ಅಪಾಯವನ್ನು ತೆಗೆದುಕೊಳ್ಳಲು ಹಿಂಜರಿಯುತ್ತದೆ. ಈ ಕಾರಣಕ್ಕಾಗಿ ಸಾಲ ಸಿಗುವುದು ಕಷ್ಟ.
5. ಆಸ್ತಿಯ ಮೌಲ್ಯ ಕಡಿಮೆ ಅಥವಾ ಕಾನೂನು ಸಮಸ್ಯೆ
ಗೃಹ ಸಾಲದಲ್ಲಿ ಮನೆಯ ಕಾನೂನು ದಾಖಲೆಗಳು (ಖಾತಾ, EC ಸರ್ಟಿಫಿಕೇಟ್) ಸರಿಯಿಲ್ಲದಿದ್ದರೆ ಅಥವಾ ಮೌಲ್ಯ ಕಡಿಮೆ ಬಂದರೆ ಸಾಲ ತಿರಸ್ಕಾರವಾಗುತ್ತದೆ.
6. ವಯಸ್ಸಿನ ಮಿತಿ ಮೀರಿದಾಗ
ಗೃಹ ಸಾಲಕ್ಕೆ ಸಾಮಾನ್ಯವಾಗಿ 21 ರಿಂದ 60 / 65 ವರ್ಷ, ವೈಯಕ್ತಿಕ ಸಾಲಕ್ಕೆ 21 ರಿಂದ 58 ವರ್ಷ. ಸಾಲ ಮುಗಿಯುವ ವೇಳೆಗೆ 70 ವರ್ಷ ದಾಟಿದ್ದರೆ ಸಾಲದ ಅರ್ಜಿ ರಿಜೆಕ್ಟ್ ಆಗುತ್ತದೆ.
7. ಕಪ್ಪುಪಟ್ಟಿಗೆ ಸೇರಿದ್ದಲ್ಲಿ
ಹಿಂದೆ ಕ್ರೆಡಿಟ್ ಕಾರ್ಡ್ ಅಥವಾ ಸಾಲದ EMI ತಪ್ಪಿದ್ದರೆ. CIBIL ನಲ್ಲಿ “Written-off” ಅಥವಾ “Settled” ಎಂದು ತೋರಿಸಿದರೆ 7 ರಿಂದ 10 ವರ್ಷಗಳವರೆಗೆ ಸಾಲ ಸಿಗುವುದು ಕಷ್ಟ.
8. ಅರ್ಜಿ ಸಲ್ಲಿಸುವಾಗ ತಪ್ಪು ಮಾಹಿತಿ ನೀಡಿದ್ದಲ್ಲಿ
ತಪ್ಪು ಆದಾಯ, ತಪ್ಪು ಉದ್ಯೋಗ ವಿವರ ನೀಡಿದರೆ ಬ್ಯಾಂಕ್ ಪತ್ತೆಮಾಡಿ ತಕ್ಷಣ ಸಾಲದ ಅರ್ಜಿ ರಿಜೆಕ್ಟ್ ಮಾಡುತ್ತದೆ ಮತ್ತು ಈ ಕಾರಣಗಳಿಂದ ಭವಿಷ್ಯದಲ್ಲಿ ಕೂಡ ಸಾಲ ಪಡೆದುಕೊಳ್ಳಲು ಕಷ್ಟವಾಗಬಹುದು.
9. ಬ್ಯಾಂಕ್ ನ ಆಂತರಿಕ ನೀತಿ ಅಥವಾ ಸೆಕ್ಟರ್ ರಿಸ್ಕ್
ಕೆಲವು ಬ್ಯಾಂಕ್ಗಳು ರಿಯಲ್ ಎಸ್ಟೇಟ್, ಸ್ಟಾರ್ಟ ಅಪ್, ಚಿಟ್ ಫಂಡ್ ವ್ಯಾಪಾರಿಗಳಿಗೆ ಸಾಲ ನೀಡಲು ಹಿಂಜರಿಯುತ್ತವೆ.
10. ಒಂದೇ ಸಮಯದಲ್ಲಿ ಅನೇಕ ಬ್ಯಾಂಕ್ ಗಳಿಗೆ ಅರ್ಜಿ ಸಲ್ಲಿಸಿದ್ದಲ್ಲಿ
ಒಂದೇ ತಿಂಗಳಲ್ಲಿ 4 ರಿಂದ 5 ಬ್ಯಾಂಕ್ ಗಳಿಗೆ ಅರ್ಜಿ ಸಲ್ಲಿಸಿದರೆ CIBIL ನಲ್ಲಿ “Multiple Loan Enquiries” ತೋರಿಸುವುದರಿಂದ ಸ್ಕೋರ್ ಕಡಿಮೆಯಾಗುತ್ತದೆ. ಇದರಿಂದ ಸಾಲ ಸಿಗುವುದು ಕಷ್ಟ.
ಈ ಕಾರಣಗಳನ್ನು ಮೊದಲೇ ತಿಳಿದುಕೊಂಡು, ತಪ್ಪುಗಳನ್ನು ಸರಿಪಡಿಸಿ ಸಾಲಕ್ಕೆ ಅರ್ಜಿ ಸಲ್ಲಿಸಿದರೆ, 100% ಒಪ್ಪಿಗೆಯಾಗುವ ಸಾಧ್ಯತೆ ಹೆಚ್ಚು. CIBIL ಸ್ಕೋರ್ ಸುಧಾರಿಸಿ, EMI ಹೊರೆ ಕಡಿಮೆ ಮಾಡಿ, ಸಂಪೂರ್ಣ ದಾಖಲೆಗಳೊಂದಿಗೆ ಒಂದೇ ಬ್ಯಾಂಕ್ ಗೆ ಅರ್ಜಿ ಸಲ್ಲಿಸಿ ಸಾಲ ಪಡೆದುಕೊಳ್ಳಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

