Tata Sierra And Hyundai Creta Comparison: ಎಲ್ಲರಿಗೂ ಕೂಡ ಜೀವನದಲ್ಲಿ ಒಮ್ಮೆಯಾದರೂ ಕಾರ್ ಖರೀದಿ ಮಾಡಬೇಕು ಅನ್ನುವ ಆಸೆ ಇದ್ದೆ ಇರುತ್ತದೆ. ಇದೀಗ ನೀವು SUV ಖರೀದಿ ಮಾಡುವ ಯೋಜನೆಯಲ್ಲಿದ್ದರೆ, ನಾವು ನಿಮಗೆ ಭಾರತದಲ್ಲಿ ಇರುವ ಎರಡು ಜನಪ್ರಿಯ ಆಯ್ಕೆಯ ಕಾರ್ ಬಗ್ಗೆ ಮಾಹಿತಿ ನೀಡುತ್ತೇವೆ. ಇತ್ತೀಚಿಗೆ ಟಾಟಾ Sierra ಕಾರ್ ಮಾರುಕಟ್ಟೆಗೆ ಬಿಡುಗಡೆ ಆಗಿದ್ದು ಈ ಕಾರ್ ಕ್ರೆಟಾ ಕಾರಿಗೆ ನೇರವಾಗಿ ಪೈಪೋಟಿ ನೀಡುತ್ತಿದೆ. ಗ್ರಾಹಕರು ಈ ಎರಡು ಕಾರಿನಲ್ಲಿ ಯಾವ ಖರೀದಿ ಮಾಡಬೇಕು ಅನ್ನುವ ಗೊಂದಲಕ್ಕೆ ಒಳಗಾಗಿದ್ದಾರೆ . ಹಾಗಾದರೆ ಟಾಟಾ ಸಿಯೆರಾ ಮತ್ತು ಹುಂಡೈ ಕ್ರೆಟಾ ಕಾರ್ ನ ಪಿಚರ್ಸ್ ಗಳ ಬಗ್ಗೆ ಮಾಹಿತಿಯನ್ನ ತಿಳಿದುಕೊಳ್ಳುವುದು ಅತೀ ಅಗತ್ಯವಾಗಿದೆ. ಇವೆರಡರಲ್ಲಿ ನಿಮಗೆ ಯಾವುದು ಉತ್ತಮ ಅನಿಸುತ್ತದೆ ಅದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಟಾಟಾ ಸಿಯೆರಾ ಮತ್ತು ಹುಂಡೈ ಕ್ರೆಟಾ ಬೆಲೆ
* ಟಾಟಾ ಸಿಯೆರಾದ ಆರಂಭಿಕ ಬೆಲೆ 11.49 ಲಕ್ಷ ಆಗಿದೆ ಮತ್ತು ಇದರ ಟಾಪ್ ವೆರಿಯಂಟ್ ಬೆಲೆ 25.39 ಲಕ್ಷ ಆಗಿದೆ. ಟಾಟಾ ಸಿಯೆರಾ 7 ಪ್ರಮುಖ ವೆರಿಯಂಟ್ (Smart Plus, Pure, Adventure, Accomplished, etc) ಗಳಲ್ಲಿ ಲಭ್ಯವಿದೆ. ಟಾಟಾ ಸಿಯೆರಾ ಪೆಟ್ರೋಲ್ ಮತ್ತು ಡಿಸೇಲ್ ಆಯ್ಕೆಯೊಂದಿಗೆ ಬರುತ್ತದೆ. ಮಧ್ಯಮ ವರ್ಗದವರ ಬಜೆಟ್ ಗೆ ಉತ್ತಮವಾಗಿದೆ. ಡಿಸೆಂಬರ್ 16 ರಿಂದ ಬುಕಿಂಗ್ ಆರಂಭವಾಗಲಿದ್ದು ಜನವರಿ 2026 ರಲ್ಲಿ ಡೆಲಿವರಿ ಮಾಡಲಾಗುತ್ತದೆ.
* ಇನ್ನು ಹುಂಡೈ ಕ್ರೆಟಾ ಆರಂಭಿಕ ಬೆಲೆ 10.73 ಲಕ್ಷ, ಮತ್ತು ಇದರ ಟಾಪ್ ವೆರಿಯಂಟ್ ಬೆಲೆ 20.20 ಲಕ್ಷ ಆಗಿದೆ. ಹುಂಡೈ ಕ್ರೆಟಾ 7 ಪ್ರಮುಖ ವೆರಿಯಂಟ್ (E, EX, SX, S(O) etc) ಗಳಲ್ಲಿ ಲಭ್ಯವಿದೆ. ಕಡಿಮೆ ಬಜೆಟ್ ನಲ್ಲಿ SUV ಹುಡುಕುತ್ತಿರುವವರಿಗೆ ಹುಂಡೈ ಕ್ರೆಟಾ ಉತ್ತಮ ಆಯ್ಕೆ ಆಗಿದೆ.
ಟಾಟಾ ಸಿಯೆರಾ ಮತ್ತು ಹುಂಡೈ ಕ್ರೆಟಾ ಡಿಸೈನ್
ಟಾಟಾ ಸಿಯೆರಾ ಉದ್ದ 4,340 mm, ಅಗಲ 1,841 mm, ಎತ್ತರ 1,715 mm, ವೀಲ್ ಬೇಸ್ 2,730 mm. ಗ್ರೌಂಡ್ ಕ್ಲಿಯರೆನ್ಸ್ 205 mm ಮತ್ತು ಬೂಟ್ ಸ್ಪೇಸ್ 622 ಲೀಟರ್ ಅನ್ನು ಪಡೆದುಕೊಂಡಿದೆ. ಟಾಟಾ ಸಿಯೆರಾ ಕುಟುಂಬ ಪ್ರಯಾಣಕ್ಕೆ ಉತ್ತಮ ಆಯ್ಕೆ ಆಗಿದೆ. LED DRL ಗಳು, 19 ಇಂಚ್ ಅಲಾಯ್ ವೀಲ್‌ಗಳು ಮತ್ತು ಫ್ಲಶ್ ಡೋರ್ ಹ್ಯಾಂಡಲ್ ಗಳನ್ನೂ ಅಳವಡಿಸಲಾಗಿದೆ. ಹಿಮಾಲಯನ್ ಗೋಲ್ಡ್ ಕಲರ್ ಜೊತೆಗೆ ಇನ್ನು 5 ಕಲರ್ ಗಳಲ್ಲಿ ಲಭ್ಯವಿದೆ.
* ಇನ್ನು ಹುಂಡೈ ಕ್ರೆಟಾ ಉದ್ದ 4,330 mm, ಅಗಲ 1,790 mm, ಎತ್ತರ 1,635 mm, ವೀಲ್‌ಬೇಸ್ 2,610 mm. ಗ್ರೌಂಡ್ ಕ್ಲಿಯರೆನ್ಸ್ 190 mm, ಬೂಟ್ 433 ಲೀಟರ್ ಅನ್ನು ಪಡೆದುಕೊಂಡಿದೆ. ಸಿಟಿ ಡ್ರೈವಿಂಗ್ ಗೆ ಉತ್ತಮವಾದ ಆಯ್ಕೆ ಆಗಿದೆ.
ಟಾಟಾ ಸಿಯೆರಾ ಮತ್ತು ಹುಂಡೈ ಕ್ರೆಟಾ ಇಂಜಿನ್ ಸಾಮರ್ಥ್ಯ
* ಟಾಟಾ ಸಿಯೆರ ಮೂರು ಇಂಜಿನ್ { 1.5 L NA ಪೆಟ್ರೋಲ್ (106 PS, 145 Nm, 6MT/7DCA), 1.5 L ಟರ್ಬೊ ಪೆಟ್ರೋಲ್ (160 PS, 260 Nm, 6AT), 1.5 L ಡೀಸೆಲ್ (118 PS, 280 Nm, 6MT/AT) } ಆಯ್ಕೆಯೊಂದಿಗೆ ಬರುತ್ತದೆ.
* ಇನ್ನು ಹುಂಡೈ ಕ್ರೆಟಾ ಕೂಡ ಮೂರು ಇಂಜಿನ್ { 1.5 L NA ಪೆಟ್ರೋಲ್ (115 PS, 144 Nm, 6MT/IVT), 1.5 L ಟರ್ಬೊ ಪೆಟ್ರೋಲ್ (160 PS, 253 Nm, 7DCT), 1.5 L ಡೀಸೆಲ್ (116 PS, 250 Nm, 6MT/AT) } ಆಯ್ಕೆಯೊಂದಿಗೆ ಬರುತ್ತದೆ.
ಟಾಟಾ ಸಿಯೆರಾ ಮತ್ತು ಹುಂಡೈ ಕ್ರೆಟಾ ಒಳಾಂಗಣ ನೋಟ
* ಟಾಟಾ ಸಿಯೆರಾದಲ್ಲಿ Triple-screen layout, panoramic sunroof, dual-zone AC, 12 JBL speakers, 5G connectivity, ambient lighting ಗಳನ್ನ ಅಳವಡಿಸಲಾಗಿದೆ. ಲಾಂಗ್ ವೀಲ್ ಬೇಸ್ ಕಾರಣದಿಂದ ರಿಯರ್ ಸ್ಪೇಸ್ ಹೆಚ್ಚಾಗಿದ್ದು ಕುಟುಂಬ ಪ್ರಯಾಣಕ್ಕೆ ಉತ್ತಮವಾಗಿದೆ. ಟಾಟಾ Sierra ದಲ್ಲಿ ಲೆವೆಲ್ 2 ADAS, 6 ಏರ್ ಬ್ಯಾಗ್ ಗಳು, 360° ಕ್ಯಾಮರಾ ಅನ್ನು ಸಹ ಅಳವಡಿಸಲಾಗಿದೆ.
* ಇನ್ನು ಹುಂಡೈ ಕ್ರೆಟಾ ದಲ್ಲಿ 10.25-inch screens, wireless charger, ventilated seats, reclining rear seats, powered co-driver seat ಅನ್ನು ಅಳವಡಿಸಲಾಗಿದೆ. ಹುಂಡೈ ಕ್ರೆಟದಲ್ಲಿ ಕೂಡ ಲೆವೆಲ್ 2 ADAS, 6 ಏರ್ ಬ್ಯಾಗ್ ಗಳನ್ನ ಅಳವಡಿಸಲಾಗಿದೆ.
ಟಾಟಾ ಸಿಯೆರಾ ಮತ್ತು ಹುಂಡೈ ಕ್ರೆಟಾ ಮೈಲೇಜ್
* ಟಾಟಾ ಸಿಯೆರಾ ಪೆಟ್ರೋಲ್ ಮಾದರಿಯಲ್ಲಿ 15 ರಿಂದ 18 kmpl ಮತ್ತು ಡಿಸೇಲ್ ಮಾದರಿಯಲ್ಲಿ 20 ರಿಂದ 23 kmpl ಮೈಲೇಜ್ ನೀಡುತ್ತದೆ. ಆದರೆ ಟಾಟಾ ಸಿಯೆರಾದ ಮೆಂಟೈನೆನ್ಸ್ ಕಡಿಮೆ ಇದೆ. ಡಿಸೈನ್ ಕಾರಣದಿಂದ ರಿಸೆಲ್ ವ್ಯಾಲ್ಯೂ ಉತ್ತಮವಾಗಿರಬಹುದು.
* ಇನ್ನು ಹುಂಡೈ ಕ್ರೆಟಾ ಪೆಟ್ರೋಲ್ ಮಾದರಿ 17 ರಿಂದ 21 kmpl ಮತ್ತು ಡಿಸೇಲ್ ಮಾದರಿಯಲ್ಲಿ 20 ರಿಂದ 23 kmpl ಮೈಲೇಜ್ ನೀಡುತ್ತದೆ. ವ್ಯಾಪಕವಾದ ಸರ್ವಿಸ್ ನೆಟ್ವರ್ಕ್ ಅನ್ನು ಪಡೆದುಕೊಂಡಿದೆ ಮತ್ತು ರಿಸೆಲ್ ವ್ಯಾಲ್ಯೂ ಉತ್ತಮವಾಗಿದೆ. 2025 ರಲ್ಲಿ 1.94 ಲಕ್ಷ ಯೂನಿಟ್ ಗಳು ಮಾರಾಟವಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

