PM Vishwakarma Yojana Free Sewing Machine: ಮನೆಯಲ್ಲೇ ಕುಳಿತು ಸ್ವಂತ ಉದ್ಯಮ ಮಾಡಬೇಕು ಅಂದುಕೊಂಡವರಿಗೆ ಇದೊಂದು ಉತ್ತಮ ಅವಕಾಶ ಆಗಿದೆ. ಮಧ್ಯಮ ವರ್ಗದ ಅದೆಷ್ಟೋ ಜನರಿಗೆ ಸ್ವಂತ ಉದ್ಯಮವನ್ನು ಆರಂಭಿಸಬೇಕು ಅನ್ನುವ ಕನಸು ಇರುತ್ತದೆ, ಆದರೆ ಹಣಕಾಸಿನ ಕೊರತೆಯಿಂದ ಅವರ ಕನಸು ಕನಸಾಗಿಯೇ ಉಳಿದಿರುತ್ತದೆ. ಇದೀಗ ನಿಮಗೆ ಕೇಂದ್ರ ಸರ್ಕಾರ ಒಂದೊಳ್ಳೆ ಯೋಜನೆಯನ್ನು ಈಗಾಗಲೇ ಜಾರಿಗೆ ತಂದಿದೆ. ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಮೂಲಕ ನಿಮ್ಮ ಸ್ವಂತ ಉದ್ಯೋಗದ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ. ಈ ಯೋಜನೆ ಲಕ್ಷಾಂತರ ಮಹಿಳೆಯರ ಜೀವನವನ್ನೇ ಬದಲಾಯಿಸುತ್ತಿದೆ.
PM ವಿಶ್ವಕರ್ಮ ಯೋಜನೆಯಡಿಯಲ್ಲಿ ಮಹಿಳೆಯರು ಸರ್ಕಾರದಿಂದ ಉಚಿತವಾಗಿ ಹೊಲಿಗೆ ಯಂತ್ರ ಪಡೆದುಕೊಳ್ಳಬಹುದು. ಹಾಗಾದರೆ ಕೇಂದ್ರ ಸರ್ಕಾರದ PM ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಬೇಕಾಗಿರುವ ದಾಖಲೆಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಸರ್ಕಾರೀ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ Nadunudi ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ
ಸೆಪ್ಟೆಂಬರ್ 17, 2023 ರಂದು ನರೇಂದ್ರ ಮೋದಿ ಅವರು ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ನುರಿತ ಕೆಲಸಗಾರರಿಗೆ ಕೌಶಲ್ಯ ತರಬೇತಿ, ಹಣಕಾಸು ಸಹಾಯ, ಮತ್ತು ಮಾರುಕಟ್ಟೆ ಪ್ರವೇಶವನ್ನು ಒದಗಿಸಲು ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಒಟ್ಟು 18 ವೃತ್ತಿಗಳಿವೆ. ಅವುಗಳಲ್ಲಿ PM ಉಚಿತ ಹೊಲಿಗೆ ಯಂತ್ರ ಯೋಜನೆ ಅತೀ ಜನಪ್ರಿಯ ಯೋಜನೆಯಾಗಿದೆ.
ಉಚಿತ ಹೊಲಿಗೆ ಯಂತ್ರ ಯೋಜನೆ (Free Sewing Machine Scheme)
ಅರ್ಹ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಒದಗಿಸಲು ಕೇಂದ್ರ ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಅಡಿಯಲ್ಲಿ ಉಚಿತ ಹೊಲಿಗೆ ಯಂತ್ರ, ಉಚಿತ ತರಬೇತಿ ಮತ್ತು ಕೇವಲ 5% ಬಡ್ಡಿಯಲ್ಲಿ 3 ಲಕ್ಷದವರೆಗೆ ಸಾಲ ನೀಡಲಾಗುತ್ತಿದೆ. ಮಹಿಳೆಯರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸ್ವಾವಲಂಭಿಯಾನ್ನಾಗಿ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ ಆಗಿದೆ.
ಯೋಜನೆಯ ಲಾಭ
* ಉಚಿತ ಟೂಲ್ ಕಿಟ್
ಹೊಸದಾಗಿ ಖರೀದಿಸಿದ ಹೊಲಿಗೆ ಯಂತ್ರಕ್ಕೆ ಸೀರೆ ಕಟಿಂಗ್ ಟೇಬಲ್, ಮಾಪನ ಟೇಪ್, ಕತ್ತರಿ, ಇತ್ಯಾದಿ ಅಗತ್ಯ ವಸ್ತುಗಳನ್ನು ಟೂಲ್ ಕಿಟ್ ನಲ್ಲಿ ನೀಡಲಾಗುತ್ತದೆ.
* ಉಚಿತ ತರಬೇತಿ
ಉಚಿತವಾಗಿ 15 ದಿನಗಳಲ್ಲಿ ಹೊಲಿಗೆ ತರಬೇತಿಯನ್ನು ನೀಡಲಾಗುತ್ತದೆ ಮತ್ತು ಪ್ರತಿದಿನ 500 ರೂ. ಸ್ಟೇ ಫಂಡ್ ಅನ್ನು ನೀಡಲಾಗುತ್ತದೆ.
* ಕಡಿಮೆ ಬಡ್ಡಿಗೆ ಸಾಲಸೌಲಭ್ಯ
ಮೊದಲು 5% ಬಡ್ಡಿಗೆ 1 ಲಕ್ಷ ಸಾಲವನ್ನು ನೀಡಲಾಗುತ್ತದೆ. ಆ ಹಣವನ್ನು ಸರಿಯಾಗಿ ಮರುಪಾವತಿ ಮಾಡಿದರೆ ಮತ್ತೆ 3 ಲಕ್ಷ ರೂಪಾಯಿಯ ತನಕ ಸಾಲ ಪಡೆದುಕೊಳ್ಳಬಹುದು.
ಯೋಜನೆಯ ಅರ್ಹತೆ
* 18 ವರ್ಷ ಮೇಲ್ಪಟ್ಟ ಮಹಿಳೆಯರು
* ಕುಶಲರ್ಮಿಗಳು ಮತ್ತು ನುರಿತ ಕೆಲಸಗಾರರು ಮಾತ್ರ ಅರ್ಜಿ ಸಲ್ಲಿಸಬಹುದು
* ಕುಟುಂಬದ ವಾರ್ಷಿಕ ಆದಾಯ 1.80 ಲಕ್ಷಕ್ಕಿಂತ ಕಡಿಮೆ ಇರಬಾರದು
* ಕುಟುಂಬದಲ್ಲಿ ಒಬ್ಬರು ಮಾತ್ರ ಯೋಜನೆಯ ಲಾಭ ಪಡೆದುಕೊಳ್ಳಬಹುದು
* ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರು ಇದಕ್ಕೆ ಅರ್ಹರಲ್ಲ
ಈ ರೀತಿಯಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ
ಮೊದಲು eShram ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡು, ಮೊಬೈಲ್ ನಂಬರ್ ಹಾಕಿ OTP ನಮೂದಿಸಬೇಕು. ನಂತರ https://pmvishwakarma.gov.in/ ಗೆ ಭೇಟಿ ಕೊಟ್ಟು “Register with eShram” ಆಯ್ಕೆ ಮಾಡಬೇಕು. ಆಧಾರ್ ಸಂಖ್ಯೆ ಹಾಕಿ, ವೃತ್ತಿಯನ್ನು (Tailor) ಆಯ್ಕೆ ಮಾಡಬೇಕು. ನಂತರ ಎಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡಿ submit ಕೊಡಬೇಕು. ಸ್ಥಳೀಯ CSC ಅಥವಾ ಗ್ರಾಮ ಪಂಚಾಯತ್ ನಲ್ಲಿ ಬಯೋಮೆಟ್ರಿಕ್ ಪರಿಶೀಲನೆ ಮಾಡಬೇಕು.
ಅಗತ್ಯ ದಾಖಲೆಗಳು
* ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್
* ರೇಷನ್ ಕಾರ್ಡ್ ಅಥವಾ ಆದಾಯ ಪ್ರಮಾಣಪತ್ರ
* ಭಾವಚಿತ್ರ
2025 ರಲ್ಲಿ ಕೆಲವು ಬದಲಾವಣೆಗಳು
* ಕುಶಲಕರ್ಮಿಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತದೆ
* ಮಹಿಳಾ ಸ್ವಸಹಾಯ ಗುಂಪುಗಳಲ್ಲಿ ಕೂಡ ಅರ್ಜಿ ಸಲ್ಲಿಸಬಹುದಾಗಿದೆ
* ಆನ್ಲೈನ್ ತರಬೇತಿಯನ್ನು ನೀಡಲಾಗುತ್ತಿದೆ
* ಟೂಲ್ ಕಿಟ್ ಮೌಲ್ಯವನ್ನು 15000 ರುಪಾಯಿಗೆ ಏರಿಕೆ ಮಾಡಲಾಗಿದೆ
Disclaimer: This information is provided for awareness purposes only. For personalised legal advice, consult a qualified professional and refer to official government notifications.

