Rental Rules Changes 2025: ಬೆಂಗಳೂರು, ಮುಂಬೈ, ಹೈದ್ರಾಬಾದ್ ನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಬಾಡಿಗೆ ಮನೆ ಹುಡುಕುವುದು ಸಾಹಸದ ಕೆಲಸ. ಏಕೆಂದರೆ ಬಾಡಿಗೆ ಮನೆಗೆ 6 ರಿಂದ 10 ತಿಂಗಳ ವರೆಗೆ ಅಡ್ವಾನ್ಸ್ ಅನ್ನು ಕೇಳುತ್ತಾರೆ. ಯುವಕರು, ವಿದ್ಯಾರ್ಥಿಗಳು, ಕುಟುಂಬದವರು ಬಾಡಿಗೆ ಮನೆ ಅಡ್ವಾನ್ಸ್ ನಿಂದ ಒತ್ತಡ ಅನುಭವಿಸುತ್ತಿದ್ದಾರೆ. ಇದೀಗ Home Rant Rules 2025 ರ ಪ್ರಕಾರ ಬಾಡಿಗೆ ಮನೆ ಅಡ್ವಾನ್ಸ್ ಗೆ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ವಿಶೇಷವಾಗಿ ಬೆಂಗಳೂರು, ಮುಂಬೈ ಸೇರಿದಂತೆ ಹಲವು ನಗರ ಪ್ರದೇಶಗಳ ಬಾಡಿಗೆ ಮನೆ ನಿಯಮದಲ್ಲಿ ಕೆಲವು ಬದಲಾವಣೆ ಜಾರಿಗೆ ತರಲಾಗಿದೆ.
ಬಾಡಿಗೆ ಮನೆ ನಿಯಮ ಬದಲಾವಣೆ
ಇದೀಗ Model Tenancy Act ( MTA ) ಹೊಸ ಬಾಡಿಗೆ ನಿಯಮಗಳನ್ನು ಜಾರಿಗೆ ತಂದಿದೆ. ಅವುಗಳೆಂದರೆ, ವಸತಿ ಆಸ್ತಿಗಳಿಗೆ ಅಡ್ವಾನ್ಸ್ ಎರಡು ತಿಂಗಳ ಬಾಡಿಗೆಗಿಂತ ಹೆಚ್ಚಿರಬಾರದು, 90 ದಿನಗಳ ಲಿಖಿತ ಸೂಚನೆಯೊಂದಿಗೆ ನಿಯಮಿತ ಬಾಡಿಗೆ ಹೆಚ್ಚಳ ಮತ್ತು ಡಿಜಿಟಲ್ ನೋಂದಣಿ. ಇದು ನಿಮ್ಮ ಬಾಡಿಗೆ ಅನುಭವವನ್ನು ಸರಳ ಮತ್ತು ನ್ಯಾಯಯುತವಾಗಿ ಇರುವಂತೆ ಮಾಡುವುದು ಆಗಿದೆ.
ಬಾಡಿಗೆ ಮನೆ ಹೊಸ ನಿಯಮಗಳು
* ಬಾಡಿಗೆ ಅಡ್ವಾನ್ಸ್ ಹಣ
ಬಾಡಿಗೆದಾರರು ಮುಂಚಿತವಾಗಿ ಪಾವತಿಸಬೇಕಾದ ಭದ್ರತಾ ಠೇವಣಿಯು ಬಾಡಿಗೆ ಒಪ್ಪಂದದಲ್ಲಿ ಭೂಮಾಲೀಕರು ಅಥವಾ ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಒಪ್ಪಂದದಂತೆ ಇರಬೇಕು. ಭದ್ರತಾ ಠೇವಣಿ ಎರಡು ತಿಂಗಳ ಬಾಡಿಗೆಯನ್ನು ಮೀರಬಾರದು ಎಂದು ಆದೇಶವನ್ನು ಹೊರಡಿಸಲಾಗಿದೆ. ಮೊದಲು 20000 ರೂ. ಬಾಡಿಗೆಗೆ 2 ಲಕ್ಷ ರೂ. ಅಡ್ವಾನ್ಸ್ ಕೊಡಬೇಕಿತ್ತು. ಆದರೆ ಈಗ ಕೇವಲ 40000 ರೂ ಮಾತ್ರ ಅಡ್ವಾನ್ಸ್ ಕೊಡಬೇಕು.
* ಬಾಡಿಗೆ ಒಪ್ಪಂದದ ನೋಂದಣಿ
ಬಾಡಿಗೆ ಒಪ್ಪಂದವನ್ನು ಸೈನ್ ಮಾಡಿದ 60 ದಿನಗಳ ಒಳಗೆ ಆನ್ಲೈನ್ ಮೂಲಕ ನೋಂದಣಿ ಮಾಡಿಸಬೇಕು. ಕರ್ನಾಟಕದ ಕಾವೇರಿ ಆನ್ಲೈನ್ ಪೋರ್ಟಲ್ ಅಥವಾ SHCIL ನಂತಹ ಪ್ಲಾಟ್ ಫಾರ್ಮ್ ಗಳ ಮೂಲಕ ಡಿಜಿಟಲ್ ಸ್ಟ್ಯಾಂಪ್ ಬಳಸಿ ನೋಂದಣಿ ಮಾಡಬಹುದು. ಬಾಡಿಗೆ ಒಪ್ಪಂದವನ್ನು ನೋಂದಣಿ ಮಾಡದಿದ್ದರೆ 5000 ರೂ. ದಂಡ ಮತ್ತು ರೆಂಟ್ ಟ್ರಿಬ್ಯೂನಲ್ ನಲ್ಲಿ ದೂರು ನೀಡಬಹುದಾಗಿದೆ.
* ಬಾಡಿಗೆ ಹೆಚ್ಚಳ
ವರ್ಷಕ್ಕೆ ಒಮ್ಮೆ 10% ಮಿತಿ ಒಳಗೆ ಬಾಡಿಗೆಯನ್ನು ಹೆಚ್ಚಳ ಮಾಡಬೇಕು ಮತ್ತು ಬಾಡಿಗೆ ಹೆಚ್ಚಳ ಮಾಡಲು 3 ತಿಂಗಳ ಒಳಗೆ ನೋಟೀಸ್ ಅನ್ನು ನೀಡಬೇಕು.
* ಮನೆಯಿಂದ ಹೊರಹಾಕುವಿಕೆ
ಬಾಡಿಗೆ ನ್ಯಾಯಮಂಡಳಿಯಿಂದ ಅಧಿಕೃತ ಆದೇಶವಿಲ್ಲದೆ ಭೂಮಾಲೀಕರು ಬಾಡಿಗೆದಾರರನ್ನು ಹೊರಹಾಕಲು ಸಾಧ್ಯವಿಲ್ಲ. ಬಲವಂತದ ಹೊರಹಾಕುವಿಕೆ, ಬೀಗಮುದ್ರೆ ಈಗ ಕಾನೂನಿನಿಂದ ಶಿಕ್ಷಾರ್ಹ ಅಪರಾಧವಾಗಿದೆ. ಗುತ್ತಿಗೆ ಅವಧಿ ಮುಗಿದ ನಂತರ ಬಾಡಿಗೆದಾರರು ಆವರಣವನ್ನು ಖಾಲಿ ಮಾಡಬೇಕು.
ಬಾಡಿಗೆದಾರರ ಹಕ್ಕುಗಳು
* ಮನೆ ಮಾಲೀಕರು ನೀರು ಮತ್ತು ವಿದ್ಯುತ್‌ನಂತಹ ಅಗತ್ಯ ಸೌಲಭ್ಯಗಳನ್ನು ತಡೆಹಿಡಿಯುವುದನ್ನು ನಿಷೇಧಿಸಲಾಗಿದೆ.
*ಮನೆ ಮಾಲೀಕರು ಸೂಚನೆ ನೀಡಿದ 30 ದಿನಗಳ ಒಳಗೆ ಅಗತ್ಯ ದುರಸ್ತಿಗಳನ್ನು ಕೈಗೊಳ್ಳಲು ವಿಫಲವಾದರೆ, ಬಾಡಿಗೆದಾರರು ಸ್ವತಃ ದುರಸ್ತಿಗೆ ವ್ಯವಸ್ಥೆ ಮಾಡಿಕೊಳ್ಳಬಹುದು ಮತ್ತು ಬಿಲ್‌ಗಳನ್ನು ಸಲ್ಲಿಸಿದರೆ ಬಾಡಿಗೆಯಿಂದ ವೆಚ್ಚವನ್ನು ಕಡಿತಗೊಳಿಸಬಹುದು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

