School Admission: ಒಂದನೇ ತರಗತಿಗೆ ಮಕ್ಕಳನ್ನು ಶಾಲೆಗೆ ಸೇರಿಸಲು ಈ ದಾಖಲೆ ಕಡ್ಡಾಯ, ಇಲ್ಲವಾದರೆ ನೋ ಅಡ್ಮಿಶನ್

School Admission Karnataka 2024-2025: 2025-2026 ನೇ ವರ್ಷದ ಶಾಲಾ ಮಕ್ಕಳ ದಾಖಲಾತಿ ಪ್ರಕ್ರಿಯೆ ಈಗಾಗಲೇ ಆರಂಭ ಆಗಿದ್ದು ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸುವಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಇದರ ನಡುವೆ ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ಮಕ್ಕಳ ಒಂದನೇ ತರಗತಿ ದಾಖಲಾತಿಗೆ ಸಂಬಂಧಿಸಿದಂತೆ ಕೆಲವು ಹೊಸ ನಿಯಮಗಳನ್ನು ರಾಜ್ಯದಲ್ಲಿ ಜಾರಿಗೆ ತಂದಿದೆ ಮತ್ತು ಆ ಹೊಸ ನಿಯಮಗಳ ಅಡಿಯಲ್ಲಿ ಮಕ್ಕಳನ್ನು ಶಾಲೆಗೆ ದಾಖಲು ಮಾಡಬೇಕಾಗಿದೆ. ಅದೇ ರೀತಿಯಲ್ಲಿ ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸುವ ಸಮಯದಲ್ಲಿ ಈ ಕೆಲವು ದಾಖಲೆಗಳನ್ನು ಕಡ್ಡಾಯವಾಗಿ ನೀಡಬೇಕು ಎಂದು ರಾಜ್ಯ ಶಿಕ್ಷಣ ಇಲಾಖೆ ಆದೇಶ ಕೂಡ ಹೊರಡಿಸಿದೆ. ಹಾಗಾದರೆ ಶಾಲೆಗೆ ಮಕ್ಕಳನ್ನು ಸೇರಿಸಲು ಯಾವ ಯಾವ ದಾಖಲೆ ಕಡ್ಡಾಯ ಅನ್ನುವುದರ ಬಗ್ಗೆ ನಾವೀಗ ತಿಳಿಯೋಣ.

WhatsApp Group Join Now
Telegram Group Join Now

ಮಕ್ಕಳನ್ನು ಶಾಲೆಗೆ ಸೇರಿಸಲು ಈ ದಾಖಲೆ ಕಡ್ಡಾಯ
* ನಿಮ್ಮ ಮಗುವನ್ನು ನೀವು ಒಂದನೇ ತರಗತಿಗೆ ಸೇರಿಸಬೇಕು ಅಂದರೆ ನಿಮ್ಮ ಮಗುವಿನ ಆಧಾರ್ ಕಾರ್ಡ್ ನೀಡುವುದು ಕಡ್ಡಾಯವಾಗಿದೆ ಮತ್ತು ಆಧಾರ್ ಕಾರ್ಡ್ ಮಾಡಿಸದೇ ಇದ್ದರೆ ಮಗುವನ್ನು ಶಾಲೆಗೆ ಸೇರಿಸಲಿ ಸಾಧ್ಯವಾಗುವುದಿಲ್ಲ.

* ಮಗುವನ್ನು ಒಂದನೇ ತರಗತಿಗೆ ಸೇರಿಸುವ ಸಮಯದಲ್ಲಿ ರೇಷನ್ ಕಾರ್ಡ್ ಮತ್ತು ಮತ್ತು ಮಗುವಿನ ಎರಡು ಇತ್ತೀಚಿನ ಭಾವಿಚಿತ್ರ ಕೂಡ ನೀಡಬೇಕು.

* ಒಂದನೇ ತರಗತಿಗೆ ಮಗುವನ್ನು ದಾಖಲು ಮಾಡುವ ಸಮಯದಲ್ಲಿ ಮಗುವಿಗೆ ಆರು ವರ್ಷ ಪೂರ್ಣವಾಗಿದೆ ಎಂದು ತಿಳಿಯಲು ಮಗುವಿನ ಜನನ ಪ್ರಮಾಣಪತ್ರ ನೀಡುವುದು ಕಡ್ಡಾಯವಾಗಿದೆ.

* ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ನೀಡುವ ಸಮಯದಲ್ಲಿ ಮಗುವಿನ ಪೋಷಕರು ತಮ್ಮ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಕೂಡ ನೀಡಬೇಕು.

* ಮಗುವನ್ನು ಒಂದನೇ ತರಗತಿಗೆ ದಾಖಲು ಮಾಡುವ ಸಮಯದಲ್ಲಿ ಪೋಷಕರು ಮಗುವಿನ ಆಧಾರ್ ಕಾರ್ಡ್ ಜೊತೆಗೆ ತಮ್ಮ ಆಧಾರ್ ಕಾರ್ಡ್ ನೀಡಬೇಕು.

ಮಕ್ಕಳನ್ನು ಶಾಲೆಗೆ ಸೇರಿಸಲು 6 ವರ್ಷ ಕಡ್ಡಾಯ
ಮಕ್ಕಳ ಆರೋಗ್ಯ ಮತ್ತು ಮತ್ತು ಶಿಕ್ಷಣ ಭವಿಷ್ಯವನ್ನು ಗಮನದಲ್ಲಿ ಇರಿಸಿಕೊಂಡು ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ಮಕ್ಕಳನ್ನು ಶಾಲೆಗೆ ಸೇರಿಸುವ ಸಮಯದಲ್ಲಿ ಆ ಮಗುವಿಗೆ 6 ವರ್ಷ ವಯಸ್ಸು ಆಗಿರಬೇಕು ಅನ್ನುವ ಆದೇಶ ಹೊರಡಿಸಿದೆ ಮತ್ತು ಯಾವ ಮಗುವಿಗೆ ಇನ್ನೂ ಕೂಡ ಆರು ವರ್ಷ ಪೂರ್ಣ ಆಗಿಲ್ಲವೋ ಅಂತಹ ಮಗುವನ್ನು ಶಾಲೆಗೆ ದಾಖಲು ಮಾಡಲು ಸಾಧ್ಯವಿಲ್ಲ.

Leave a Comment