Karnataka B.ED minority incentive 2025-2026: ಇದೀಗ ಕರ್ನಾಟಕ ರಾಜ್ಯ ಸರ್ಕಾರ ಶಿಕ್ಷಕ ಅಥವಾ ಶಿಕ್ಷಕಿ ವೃತ್ತಿಯ ಕಡೆಗೆ ಸಾಗುತ್ತಿರುವ B.Ed ವಿದ್ಯಾರ್ಥಿಗಳಿಗೆ ಹೊಸ ಯೋಜನೆ ಒಂದನ್ನು ಜಾರಿಗೆ ತಂದಿದೆ. ಹಣಕಾಸಿನ ಸಮಸ್ಯೆಯಿಂದ ವಿಧ್ಯಾಭ್ಯಾಸವನ್ನು ಅರ್ಧಕ್ಕೆ ಕೈಬಿಡುವ ಮಕ್ಕಳಿಗೆ ವಿಶೇಷ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಲು ಕರ್ನಾಟಕ ರಾಜ್ಯ ಸರ್ಕಾರ ಮುಂದಾಗಿದೆ. ಹಾಗಾದರೆ ಕರ್ನಾಟಕ ರಾಜ್ಯ ಸರ್ಕಾರದ ಯೋಜನೆ ಯಾವುದು..? ಯೋಜನೆಗೆ ಯಾರು ಯಾರು ಅರ್ಜಿ ಸಲ್ಲಿಸಬಹುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಲ್ಪಸಂಖ್ಯಾತ B.Ed ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ ಯೋಜನೆ
ಇದೀಗ ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ 2025-26 ನೇ ಸಾಲಿನ B.Ed ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ (Special Incentive) ನೀಡಲು ಮುಂದಾಗಿದೆ. ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಯಾವುದೇ ಆರ್ಥಿಕ ಸಮಸ್ಯೆ ಇಲ್ಲದೆ ತಮ್ಮ ವಿಧ್ಯಾಭ್ಯಾಸವನ್ನು ಪೂರ್ಣಗೊಳಿಸುವುದು ಈ ಯೋಜನೆಯ ಮುಖ್ಯ ಇದ್ದೇಶ ಆಗಿದೆ. ಇದೀಗ ನಾವು ” Special Incentive Scheme to Minority B.Ed Students – 2025-26 ” ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳೋಣ.
ಯೋಜನೆಯ ಅರ್ಹತೆ
* ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಆಗಿರಬೇಕು (Muslim, Christian, Jain, Buddhist, Sikh, Parsi)
* ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು
* NCTE ಮಾನ್ಯತೆ ಪಡೆದ ಯಾವುದೇ ಕಾಲೇಜಿನಲ್ಲಿ 2025-26 ರಲ್ಲಿ ಬಿ.ಎಡ್ ಪ್ರವೇಶ ಪಡೆದಿರಬೇಕು
* Degree ಯಲ್ಲಿ ಕನಿಷ್ಠ 50 % ಅಂಕಗಳು ತೆಗೆದಿರಬೇಕು ( SC / ST / OBC ಗೆ 45 % )
* ಕುಟುಂಬದ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರಬೇಕು
* ಇತರ ಸರ್ಕಾರಿ ಸ್ಕಾಲರ್ ಶಿಪ್ ಪಡೆದುಕೊಂಡರು ಸಹ ಈ ಇನ್ಸೆಂಟಿವ್ ಪಡೆದುಕೊಳ್ಳಬಹುದು.
ಎಷ್ಟು ಹಣವನ್ನು ಪಡೆದುಕೊಳ್ಳಬಹುದು
* ಮೊದಲ ವರ್ಷ B.Ed ಪೂರ್ಣಗೊಂಡ ನಂತರ 25,000 ರೂ.
* ಎರಡನೇ ವರ್ಷ B.Ed ಪೂರ್ಣಗೊಂಡ ನಂತರ 25,000 ರೂ.
* ಒಟ್ಟು 50,000 ರೂ. ನೇರವಾಗಿ ಬ್ಯಾಂಕ್ ಖಾತೆಗೆ DBT ಆಗುತ್ತದೆ
ಅಗತ್ಯ ದಾಖಲೆಗಳು
* ಆಧಾರ್ ಕಾರ್ಡ್
* Minority Certificate
* Karnataka Domicile Certificate
* ಆದಾಯ ಪ್ರಮಾಣಪತ್ರ
* Degree Marks Card
* B.Ed Fee Paid Receipt
* B.Ed Admission Order
* ಬ್ಯಾಂಕ್ ಪಾಸ್ ಬುಕ್
* ಭಾವಚಿತ್ರ
* ಮೊಬೈಲ್ ಸಂಖ್ಯೆ
ಈ ರೀತಿಯಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ
ಮೊದಲು https://sevasindhuservices.karnataka.gov.in/ ಗೆ ಮೊಬೈಲ್ ನಂಬರ್ ಹಾಕಿ OTP ನಮೂದಿಸಿ ಲಾಗಿನ್ ಮಾಡಬೇಕು. ನಂತರ Services > Department > Minority Welfare Department ಆಯ್ಕೆ ಮಾಡಿಕೊಳ್ಳಬೇಕು. “Special Incentive Scheme to B.Ed Minority Students 2025-26 ” ಸರ್ಚ್ ಮಾಡಿ Apply Now ಕ್ಲಿಕ್ ಮಾಡಬೇಕು. ನಂತರ ಎಲ್ಲ ವಿವರವನ್ನು ಭರ್ತಿ ಮಾಡಿ, ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಕೊನೆಗೆ submit ಕೊಟ್ಟು Application Tracking ID ಅನ್ನು ಸೇವ್ ಮಾಡಿ ಇಟ್ಟುಕೊಳ್ಳಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಡಿಸೆಂಬರ್ 2025 ಆಗಿದೆ.
ಹೆಚ್ಚಿನ ಮಾಹಿತಿಗಾಗಿ
* ಹೆಲ್ಪ್ ಲೈನ್ ನಂಬರ್ 080-22577444 / 8277799990
* ವಾಟ್ಸಪ್ಪ್ ನಂಬರ್ 9480843115
* ಇಮೇಲ್ ಐಡಿ [email protected]
* ಅಧಿಕೃತ ವೆಬ್ ಸೈಟ್ https://dom.karnataka.gov.in/
* Seva Sindhu ಪೋರ್ಟಲ್ https://sevasindhuservices.karnataka.gov.in/
Disclaimer: This information is provided for awareness purposes only. For personalised legal advice, consult a qualified professional and refer to official government notifications.

