Required Documents For e-swathu: ಇದೀಗ ನೀವು ನಿಮ್ಮ ಆಸ್ತಿಯನ್ನು ಸುರಕ್ಷಿತವಾಗಿಡಲು ಕರ್ನಾಟಕ ಸರ್ಕಾರ ಒಂದು ಆನ್ಲೈನ್ ಪೋರ್ಟಲ್ ಅನ್ನು ಬಿಡುಗಡೆ ಮಾಡಿದೆ. ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ಬರುವ ಈ ಆನ್ಲೈನ್ ಪೋರ್ಟಲ್ ನಲ್ಲಿ ಗ್ರಾಮೀಣ ಪ್ರದೇಶದ ಕೃಷಿಯೇತರ ಆಸ್ತಿಗಳಾದ ಮನೆ, ಮತ್ತು ಖಾಲಿ ಜಾಗಗಳ ಮಾಲೀಕತ್ವವನ್ನು ಡಿಜಿಟಲ್ ರೂಪದಲ್ಲಿ ನೋಂದಣಿ ಮಾಡಬಹುದಾಗಿದೆ.
ಇ- ಸ್ವತ್ತು ಎಂದರೆ?
ಇ-ಸ್ವತ್ತು ಎಂದರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಆಸ್ತಿಗಳ ಡಿಜಿಟಲ್ ನೋಂದಣಿಯಾಗಿದೆ. ಆಸ್ತಿ ವಹಿವಾಟುಗಳಲ್ಲಿ ಪಾರದರ್ಶಕತೆ ತರುವುದು, ವಂಚನೆ ತಡೆಯುವುದು ಮತ್ತು ಆಸ್ತಿ ಮಾಲೀಕರಿಗೆ ಸುಲಭವಾಗಿ ಮಾಲೀಕತ್ವದ ಪ್ರಮಾಣಪತ್ರ ಸಿಗುವಂತೆ ಮಾಡುವುದು ಇದರ ಮುಖ್ಯ ಉದ್ದೇಶ ಆಗಿದೆ. ಇದೀಗ ನೀವು ಇ-ಸ್ವತ್ತು ಪಡೆಯಲು ಈ 12 ದಾಖಲೆಗಳು ಅತಿ ಮುಖ್ಯ ಆಗಿದೆ. ಹಾಗಾದರೆ ನಾವೀಗ ಆ 12 ದಾಖಲೆಗಳು ಹಾಗಾದರೆ ಇ- ಸ್ವತ್ತು ಪಡೆದುಕೊಳ್ಳಲು ಕೊಡಬೇಕಾದ 12 ದಾಖಲೆಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಇ-ಸ್ವತ್ತು ಪಡೆಯಲು ಅಗತ್ಯವಿರುವ 12 ದಾಖಲೆಗಳು
* ಅರ್ಜಿದಾರರ ಗುರುತು ಮತ್ತು ವಿಳಾಸಕ್ಕಾಗಿ ಆಧಾರ್ ಕಾರ್ಡ್
* ಆಸ್ತಿ ಮಾಲೀಕನ ಗುರುತಿಗಾಗಿ ಮತದಾರರ ಐಡಿ ಕಾರ್ಡ್
* ಮಾಲೀಕನ ವಿಳಾಸದ ಗುರುತಿಗಾಗಿ ಡ್ರೈವಿಂಗ್ ಲೈಸೆನ್ಸ್
* ಮಾಲೀಕತ್ವ ದಾಖಲೆಗಳು ( ಕ್ರಯಪತ್ರ ಅಥವಾ ಪಹಣಿ ಪತ್ರ )
* ಆಸ್ತಿ ಸರ್ವೇ ನಂಬರ್
* ಆಸ್ತಿಯ ಸೈಟ್ ಮ್ಯಾಪ್ ಅಥವಾ ಗ್ರಾಮ ಠಾಣಾ ನಕ್ಷೆ
* ಕಟ್ಟಡ ತೆರಿಗೆ ರಶೀದಿ
* ವಿದ್ಯುತ್ ಬಿಲ್
* ನೀರಿನ ಬಿಲ್
* ಋಣಭಾರ ಪತ್ರ (EC)
* ಅರ್ಜಿದಾರನ ಎರಡು ಭಾವಚಿತ್ರ
* GPS ಫೋಟೋ
ಈ ರೀತಿಯಾಗಿ ಅರ್ಜಿ ಸಲ್ಲಿಸಿ
ನೀವು ಗ್ರಾಮ ಪಂಚಾಯತಿ ಕಚೇರಿಗೆ ಭೇಟಿ ಕೊಟ್ಟು ಅಥವಾ http://eswathu.karnataka.gov.in/ ಗೆ ಭೇಟಿ ಕೊಟ್ಟು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನಂತರ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಅರ್ಜಿಯನ್ನು ಪರಿಶೀಲನೆ ಮಾಡಿ ಆಸ್ತಿ ಅಳತೆಗೆ ಕಳುಹಿಸುತ್ತಾರೆ. ಈ ಪ್ರಕ್ರಿಯೆ 7 ರಿಂದ 15 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ. ಶುಲ್ಕವನ್ನು ಅಸ್ತಿ ಅಳತೆಗೆ ಅನುಗುಣವಾಗಿ ತೆಗೆದುಕೊಳ್ಳಲಾಗುತ್ತದೆ.
ಈ ಯೋಜನೆಯ ಲಾಭಗಳು
* ಆಸ್ತಿ ಮಾರಾಟಕ್ಕೆ ಅಡ್ಡಿ ಇರುವುದಿಲ್ಲ
* ಬ್ಯಾಂಕ್ ಸಾಲಕ್ಕೆ ದಾಖಲೆಯಾಗಿ ಬಳಸಬಹುದು
* ಆಸ್ತಿ ವಿವಾದಗಳನ್ನು ಕಡಿಮೆ ಮಾಡುತ್ತದೆ
* ತೆರಿಗೆ ಪಾವತಿಯನ್ನು ಸುಗಮಗೊಳಿಸುತ್ತದೆ
ನಿಮ್ಮ ಆಸ್ತಿಯನ್ನು ಇಂದೇ ನೋಂದಣಿ ಮಾಡಿಕೊಂಡು, ಭವಿಷ್ಯದಲ್ಲಿ ಬರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ http://eswathu.karnataka.gov.in/ ಗೆ ಸಂಪರ್ಕಿಸಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

