Barrier Electronic Toll Collection System: ಇದೀಗ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ Nitin Gadkari ಅವರು ವಾಹನ ಪ್ರಯಾಣಿಕರಿಗೆ ಹೆದ್ದಾರಿಗಳಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಇನ್ನುಮುಂದೆ ಪ್ರಯಾಣಿಕರು ಟೋಲ್ ಪ್ಲಾಜಾದಲ್ಲಿ ನಿಲ್ಲುವ ಅಗತ್ಯ ಇಲ್ಲ. ಇದಕ್ಕಾಗಿ ಇಲೆಕ್ಟ್ರಾನಿಕ್ ಟೂಲ್ ಕಲೆಕ್ಷನ್ ಸಿಸ್ಟಮ್ ಜಾರಿಗೆ ತರಲಾಗುತ್ತಿದೆ. ಈ ಹೊಸ ವ್ಯವಸ್ಥೆಯ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳೋಣ.
ಬ್ಯಾರಿಯರ್ ಫ್ರೀ ಇಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಸಿಸ್ಟಮ್
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿರುವ Nitin Gadkari ಅವರು ಡಿಸೆಂಬರ್ 4 2025 ರಲ್ಲಿ ಲೋಕಸಭೆಯಲ್ಲಿ ಬ್ಯಾರಿಯರ್ ಫ್ರೀ ಇಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಸಿಸ್ಟಮ್ (barrier electronic toll collection system) ಅನ್ನು ಜಾರಿಗೆ ತರುವಂತೆ ಘೋಷಣೆ ಮಾಡಿದ್ದಾರೆ. ಹೊಸ ವ್ಯವಸ್ಥೆಯನ್ನು 10 ಸ್ಥಳಗಳಲ್ಲಿ ಜಾರಿಗೆ ತರಲಾಗಿದ್ದು, ಇನ್ನು ಒಂದು ವರ್ಷದೊಳಗೆ ದೇಶಾದ್ಯಂತ ವಿಸ್ತರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಸಮಯ ಮತ್ತು ಇಂಧನದ ಉಳಿತಾಯ ಆಗುತ್ತದೆ.
ಪ್ರಸ್ತುತ ಟೂಲ್ ವ್ಯವಸ್ಥೆಯ ಸಮಸ್ಯೆಗಳು
* ಟ್ರಾಫಿಕ್ ಜಾಮ್
* ಸರದಿ ಸಾಲುಗಳು
* ಇಂಧನ ವ್ಯರ್ತ
* ಸಮಯ ವ್ಯರ್ತ
ಹೊಸ ಟೋಲ್ ಕಲೆಕ್ಷನ್ ಸಿಸ್ಟಮ್ ನ ಕಾರ್ಯ
ಬ್ಯಾರಿಯರ್ ಫ್ರೀ ಇಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಸಿಸ್ಟಮ್ Multi-Lane Free Flow (MLFF) ತಂತ್ರಜ್ಞಾನದ ಮೇಲೆ ಆಧಾರಿತವಾಗಿದೆ. FASTag RFID ಟ್ಯಾಗ್ ಮೂಲಕ ಆಟೋಮ್ಯಾಟಿಕ್ ಡಿಡಕ್ಷನ್ (Automatic Deduction) ಮಾಡುತ್ತದೆ. ನಿಮ್ಮ ವಾಹನದ ಮೇಲಿನ ಟ್ಯಾಗ್ ಸ್ಕ್ಯಾನ್ ಆಗಿ, ಬ್ಯಾಂಕ್ ಅಕೌಂಟ್ ನಿಂದ ಹಣ ಕಡಿತವಾಗುತ್ತದೆ. ಇದರಿಂದ ನೀವು ಟೋಲ್ ಪ್ಲಾಜಾದಲ್ಲಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ ಮತ್ತು ಈ ವ್ಯವಸ್ಥೆ ಟ್ರಾಫಿಕ್ ಸಮಸ್ಯೆಯನ್ನು 20% ರಿಂದ 30% ಕಡಿಮೆ ಮಾಡಲಿದೆ.
ಹೊಸ ಟೋಲ್ ಕಲೆಕ್ಷನ್ ಸಿಸ್ಟಮ್ ನ ಪ್ರಯೋಜನಗಳು
ಈ ಟೂಲ್ ಸಿಸ್ಟಮ್ ಆರ್ಥಿಕ ಮತ್ತು ಪರಿಸರ ಸ್ನೇಹಿ ಆಗಿ ಕಾರ್ಯವನ್ನು ಮಾಡುತ್ತದೆ. ಪ್ರತಿ ವರ್ಷ 20,000 ಕೋಟಿ ರೂ ಇಂಧನ ಉಳಿತಾಯವಾಗುತ್ತದೆ. ಇಂಗಾಲದ ಹೊರಸೂಸುವಿಕೆ 15 ರಿಂದ 20% ಕಡಿಮೆ ಆಗುತ್ತದೆ. ಇನ್ನು ಈ ಹೊಸ ಟೋಲ್ ಕಲೆಕ್ಷನ್ ಸಿಸ್ಟಮ್ ನಿಂದ ಪ್ರಯಾಣಿಕರ ಸಮಯ ಉಳಿತಾಯವಾಗುತ್ತದೆ. ಹಳೆ ಟೂಲ್ ವ್ಯವಸ್ಥೆಯಲ್ಲಿ ಕೆಲವೊಮ್ಮೆ 5 ರಿಂದ 10 ನಿಮಿಷಗಳ ಕಾಲ ನಿಲ್ಲಬೇಕಿತ್ತು. ಇದೀಗ ಇಲೆಕ್ಟ್ರಾನಿಕ್ ಟೂಲ್ ಕಲೆಕ್ಷನ್ ವ್ಯವಸ್ಥೆಯಿಂದ ಹೆದ್ದಾರಿ ಬಳಕೆದಾರರಿಗೆ ಸುಗಮ ಸಂಚಾರ ಅನುಭವ ದೊರೆಯಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೆ ನೀಡಿದ್ದಾರೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

