Swavalambi Sarathi Scheme 2025: ಸ್ವಂತ ಉದ್ಯೋಗವನ್ನು ಆರಂಭಿಸಬೇಕು ಅನ್ನುವುದು ಹಲವರ ಕನಸಾಗಿರುತ್ತದೆ. ಆದರೆ ಆ ಕನಸನ್ನು ಈಡೇರಿಸಿಕೊಳ್ಳಲು ಹಣಕಾಸಿನ ಸಮಸ್ಯೆ ಇರುತ್ತದೆ. ಇದೀಗ ಸ್ವಂತ ಉದ್ಯೋಗವನ್ನು ಮಾಡಬೇಕು ಅಂದುಕೊಂಡವರಿಗೆ ಕರ್ನಾಟಕ ಸರ್ಕಾರ ಈಗಾಗಲೇ ಒಂದು ಯೋಜನೆಯನ್ನು ಜಾರಿಗೆ ತಂದಿದೆ. ಸ್ವಾವಲಂಬಿ ಸಾರಥಿ ಯೋಜನೆಯ ಮೂಲಕ ಸರ್ಕಾರವು ಅಲ್ಪಸಂಖ್ಯಾತ, ಅನುಸೂಚಿತ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ಯುವಕ-ಯುವತಿಯರಿಗೆ ಆಟೋ ರಿಕ್ಷಾ, ಟ್ಯಾಕ್ಸಿ ಕ್ಯಾಬ್ ಅಥವಾ ಸಣ್ಣ ಗೂಡ್ಸ್ ವಾಹನ ಖರೀದಿ ಮಾಡಲು 50% ಅನುದಾನವನ್ನು (ಗರಿಷ್ಠ 3 ಲಕ್ಷ) ನೀಡುತ್ತಿದೆ. ಹಾಗಾದರೆ ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಬೇಕಾಗಿರುವ ದಾಖಲೆಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಸ್ವಾವಲಂಬಿ ಸಾರಥಿ ಯೋಜನೆ
ಕರ್ನಾಟಕ ರಾಜ್ಯ ಸರ್ಕಾರ 2024 ಸ್ವಾವಲಂಬಿ ಸಾರಥಿ ಯೋಜನೆಯನ್ನು ಜಾರಿಗೆ ತಂದಿದೆ. ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳಲ್ಲಿ ಸ್ವ ಉದ್ಯೋಗವನ್ನು ಹೆಚ್ಚಿಸುವುದು, ಮಹಿಳಾ ಸಬಲೀಕರಣ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆದಾಯ ಮೂಲ ಸ್ರಷ್ಟಿಸುವುದು ಇದರ ಮುಖ್ಯ ಉದ್ದೇಶ ಆಗಿದೆ. ನೀವು ಖರೀದಿ ಮಾಡುವ ವಾಹನದ 50% ಹಣವನ್ನು ಸರ್ಕಾರ ಅನುದಾನದ ರೂಪದಲ್ಲಿ ನೀಡುತ್ತದೆ.
ಯೋಜನೆಯ ಉದಾಹರಣೆಗೆ
* ನೀವು ಖರೀದಿಸುವ ವಾಹನದ ಬೆಲೆ 2 ಲಕ್ಷ ಆಗಿದ್ದರೆ, ನಿಮಗೆ 1 ಲಕ್ಷ ಸರ್ಕಾರದಿಂದ ಅನುದಾನ ಸಿಗುತ್ತದೆ.
* ನೀವು ಖರೀದಿಸುವ ವಾಹನದ ಬೆಲೆ 4 ಲಕ್ಷ ಆಗಿದ್ದರೆ, ನಿಮಗೆ 2 ಲಕ್ಷ ಸರ್ಕಾರದಿಂದ ಅನುದಾನ ಸಿಗುತ್ತದೆ.
* ನೀವು ಖರೀದಿಸುವ ವಾಹನದ ಬೆಲೆ 6 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿದ್ದರೆ, ನಿಮಗೆ 3 ಲಕ್ಷ ಸರ್ಕಾರದಿಂದ ಅನುದಾನ ಸಿಗುತ್ತದೆ.
* ಉಳಿದ 50% ಹಣಕ್ಕೆ ಬ್ಯಾಂಕ್ ನಿಂದ ಕಡಿಮೆ ಬಡ್ಡಿಗೆ ಸಲ ಸಿಗುತ್ತದೆ. ಬ್ಯಾಂಕ್ ಸಾಲದ ಅವಧಿ 5 ವರ್ಷಗಳು ಆಗಿರುತ್ತದೆ.
| ವಾಹನದ ಬೆಲೆ (₹) | ಸರ್ಕಾರಿ ಅನುದಾನ (50%) | ಗರಿಷ್ಠ ಅನುದಾನ ಮಿತಿ | ನೀವು ಪಾವತಿಸಬೇಕಾದ ಮೊತ್ತ (ಬ್ಯಾಂಕ್ ಸಾಲ) |
|---|---|---|---|
| ₹2,00,000 | ₹1,00,000 | ₹1,00,000 | ₹1,00,000 |
| ₹3,00,000 | ₹1,50,000 | ₹1,50,000 | ₹1,50,000 |
| ₹4,00,000 | ₹2,00,000 | ₹2,00,000 | ₹2,00,000 |
| ₹5,00,000 | ₹2,50,000 | ₹2,50,000 | ₹2,50,000 |
| ₹6,00,000 ಅಥವಾ ಅದಕ್ಕಿಂತ ಹೆಚ್ಚು | ₹3,00,000 (ಗರಿಷ್ಠ) | ₹3,00,000 | ಉಳಿದ ಮೊತ್ತ (ಉದಾ: ₹3 ಲಕ್ಷ +) |
ಯಾರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು
* ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು
* 18 ರಿಂದ 55 ವರ್ಷ ಒಳಗಿನವರಾಗಿರಬೇಕು
* ಕುಟುಂಬದ ವಾರ್ಷಿಕ ಆದಾಯ 4.5 ಲಕ್ಷ ಕ್ಕಿಂತ ಕಡಿಮೆ ಇರಬೇಕು
* ಅಲ್ಪಸಂಖ್ಯಾತ (Muslim, Christian, Jain, Buddhist, Sikh, Parsi), SC, ST, OBC
* ಮಾನ್ಯ ಚಾಲನಾ ಪರವಾನಗಿ ಹೊಂದಿರುವವರು
* ಬ್ಯಾಡ್ಜ್ (ಕಡ್ಡಾಯವಲ್ಲ)
* ಕಳೆದ 5 ವರ್ಷಗಳಲ್ಲಿ KMDCL ನಿಂದ ಯಾವುದೇ ಸ್ವ ಉದ್ಯೋಗ ಸಾಲ ಪಡೆದಿರಬಾರದು
* ಮಹಿಳೆಯರು, ಅಂಗವಿಕಲರು, ವಿಧವೆಯರಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು
* ಆಧಾರ್ ಕಾರ್ಡ್
* ಜಾತಿ ಮತ್ತು ಆದಾಯ ಪ್ರಮಾಣಪತ್ರ
* ರೇಷನ್ ಕಾರ್ಡ್
* ಚಾಲನಾ ಪರವಾನಗಿ
* ಬ್ಯಾಂಕ್ ಪಾಸ್ ಬುಕ್
* 4 ಭಾವಚಿತ್ರ
* ಪ್ರೊಜೆಕ್ಟ್ ರಿಪೋರ್ಟ್
* ವಾಹನ ಕೋಟೇಷನ್
* ಅಫಿಡವಿಟ್ – ವಾಹನ 5 ವರ್ಷ ಮಾರಾಟ ಮಾಡುವುದಿಲ್ಲ ಎಂದು
ಈ ರೀತಿಯಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ
https://kvldcl.karnataka.gov.in/45/swavalambi-sarathi-scheme/en ಗೆ ಭೇಟಿ ಕೊಟ್ಟು, “ Swavalambi Sarathi Scheme 2025-26 ” ಆಯ್ಕೆ ಮಾಡಿಕೊಳ್ಳಬೇಕು. ನಂತರ ಮೊಬೈಲ್ ನಂಬರ್ ಮತ್ತು ಆಧಾರ್ ನಂಬರ್ ಹಾಕಿ OTP ನಮೂದಿಸಬೇಕು. ಅರ್ಜಿ ಫಾರ್ಮ್ ಭರ್ತಿ ಮಾಡಿ, ಎಲ್ಲ ದಾಖಲೆಯನ್ನು PDF ರೂಪದಲ್ಲಿ ಅಪ್ಲೋಡ್ ಮಾಡಬೇಕು.
ಅರ್ಜಿ ಸಲ್ಲಿಸಿದ ನಂತರ ಅರ್ಜಿ ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಬೇಕು. ಜಿಲ್ಲಾ KMDCL ಕಚೇರಿಯಲ್ಲಿ ದಾಖಲೆ ಪರಿಶೀಲನೆ ಆಗಿ, ಬ್ಯಾಂಕ್ ಸಾಲ ಮಂಜೂರಾತಿ ಆದ ನಂತರ ಅನುದಾನ ಬಿಡುಗಡೆ ಆಗುತ್ತದೆ. ಅರ್ಜಿ ಸ್ಥಿತಿಯನ್ನು ಪರಿಶೀಲನೆ ಮಾಡಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ 080-22257777 ಕರೆ ಮಾಡಿ, [email protected] ಗೆ ಇಮೇಲ್ ಮಾಡಿ, ಅಥವಾ https://kmdcl.karnataka.gov.in/ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

