Tata Sierra And Toyota Innova Comparison 2025: ಇತ್ತೀಚಿಗೆ ಟಾಟಾ Sierra ಕಾರ್ ಬಿಡುಗಡೆಯಾದ ನಂತರ ಕಾರ್ ಖರೀದಿ ಮಾಡುವವರು ಯಾವ ಕಾರ್ ಖರೀದಿ ಮಾಡಬೇಕು ಅನ್ನುವ ಗೊಂದಲಕ್ಕೆ ಒಳಗಾಗಿದ್ದಾರೆ. ಇದೀಗ ನೀವು ಕುಟುಂಬದ ಜೊತೆ ಪ್ರಯಾಣ ಮಾಡಲು ಒಂದೊಳ್ಳೆ ಕಾರ್ ಹುಡುಕುತಿದ್ದರೆ, Tata Sierra ಮತ್ತು Toyota Innova Crysta ಉತ್ತಮ ಆಯ್ಕೆ ಆಗಿದೆ. ಇದೀಗ ನಾವು ನಿಮಗೆ ಈ ಎರಡು ಕಾರುಗಳ ಬಗ್ಗೆ ಮಾಹಿತಿ ನೀಡುತ್ತೇವೆ, ನಿಮಗೆ ಯಾವುದು ಉತ್ತಮ ಅನಿಸುತ್ತದೆ ಅದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಡಿಸೈನ್ ಮತ್ತು ಬಾಹ್ಯ ರೂಪದಲ್ಲಿ ಯಾವುದು ಉತ್ತಮ?
* 2025 ರಲ್ಲಿ Tata Sierra ಕ್ಲಾಸಿಕ್ ಡಿಸೈನ್ ನೊಂದಿಗೆ ಮರಳಿ ಬಂದಿದೆ. Curved roofline, LED headlights and 19-inch alloy wheels ಗಳನ್ನೂ ಪಡೆದುಕೊಂಡಿದೆ. ಆಧುನಿಕ ತಂತ್ರಜ್ಞಾನವನ್ನು ಪಡೆದುಕೊಂಡಿದೆ. ಇದರ ಎತ್ತರ 205 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ರೋಡ್ ಗಳಲ್ಲಿ ಉತ್ತಮವಾಗಿದೆ.
* ಇನ್ನು Toyota Innova Crysta MPV ಸ್ಟೈಲ್ ನೊಂದಿಗೆ Simple exterior, chrome grille and 17-inch wheels ಗಳನ್ನೂ ಪಡೆದುಕೊಂಡಿದೆ.
ಇಂಜಿನ್ ಮತ್ತು ಕಾರ್ಯಕ್ಷಮತೆಯಲ್ಲಿ ಯಾವುದು ಉತ್ತಮ?
* Tata Sierra 3 ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದೆ, 1.5-liter petrol (106 horsepower), turbo petrol (160 horsepower) and diesel (118 horsepower). ಮತ್ತು ಇದರ ಆಟೋಮ್ಯಾಟಿಕ್ ಆಯ್ಕೆಗಳು ಸಿಟಿ ಡ್ರೈವಿಂಗ್ ಗೆ ಉತ್ತಮವಾಗಿದೆ. Tata Sierra 15 ರಿಂದ 18 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.
* ಇನ್ನು Toyota Innova Crysta 2.4 ಲೀಟರ್ ಡಿಸೇಲ್ ಇಂಜಿನ್ ನೊಂದಿಗೆ 148 horsepower ಮತ್ತು 343 Nm Tark ನೀಡುತ್ತದೆ. Toyota Innova Crysta 13 ರಿಂದ 15 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಹೈವೇನಲ್ಲಿ ಪ್ರಯಾಣ ಮಾಡಲು ಉತ್ತಮ ಆಯ್ಕೆ ಆಗಿದೆ.
ಒಳಾಂಗಣ ಸೌಕರ್ಯದಲ್ಲಿ ಯಾವುದು ಉತ್ತಮ?
* Tata Sierra ಇಂಟೀರಿಯರ್ ನಲ್ಲಿ Triple screen setup, panoramic sunroof, ventilated seats and 6 airbags, ಮತ್ತು 622 ಲೀಟರ್ ಬೂಟ್ ಸ್ಪೇಸ್ ನೊಂದಿಗೆ 5 ಆಸನವನ್ನು ಅಳವಡಿಸಲಾಗಿದೆ. Tata Sierra ಕುಟುಂಬ ಪ್ರಯಾಣಕ್ಕೆ ಉತ್ತಮವಾಗಿದೆ.
* ಇನ್ನು Toyota Innova Crysta 7 ರಿಂದ 8 ಆಸನವನ್ನು ಪಡೆದುಕೊಂಡಿದೆ. ದೂರ ಪ್ರಯಾಣಕ್ಕೆ Toyota Innova Crysta ಉತ್ತಮ ಆಯ್ಕೆ ಆಗಿದೆ.
| ವಿಷಯ | ಟಾಟಾ ಸಿಯೆರಾ (2025) | ಟೊಯೋಟಾ ಇನ್ನೋವಾ ಕ್ರಿಸ್ಟಾ (2025) |
|---|---|---|
| ಆರಂಭಿಕ ಬೆಲೆ (ಎಕ್ಸ್-ಶೋರೂಂ) | ₹11.49 ಲಕ್ಷ | ₹18.66 ಲಕ್ಷ |
| ಟಾಪ್ ವೇರಿಯಂಟ್ ಬೆಲೆ | ₹19-20 ಲಕ್ಷ | ₹25-26 ಲಕ್ಷ |
| ಇಂಜಿನ್ ಆಯ್ಕೆಗಳು | ಪೆಟ್ರೋಲ್, ಟರ್ಬೊ ಪೆಟ್ರೋಲ್, ಡೀಸಲ್, EV ಆಗಸ್ಟ್ನಲ್ಲಿ | ಕೇವಲ ಡೀಸಲ್ |
| ಪವರ್ (hp) | 106 – 170 hp | 148 hp |
| ಟಾರ್ಕ್ (Nm) | 260 – 350 Nm | 343 Nm |
| ಮೈಲೇಜ್ (ಕ್ಲೈಮ್ಡ್) | 15 – 18 kmpl | 13 – 15.6 kmpl |
| ಸೀಟಿಂಗ್ | 5 ಸೀಟರ್ (ಮಾತ್ರ) | 7 ಅಥವಾ 8 ಸೀಟರ್ |
| ಬೂಟ್ ಸ್ಪೇಸ್ (ಲೀಟರ್) | 622 L | 300 – 991 L (ಸೀಟ್ ಫೋಲ್ಡ್ ಮಾಡಿದರೆ) |
| ಗ್ರೌಂಡ್ ಕ್ಲಿಯರೆನ್ಸ್ (mm) | 205 mm | 178 mm |
| ಸೇಫ್ಟಿ (ಏರ್ಬ್ಯಾಗ್ಗಳು) | 6 | 3 – 7 (ವೇರಿಯಂಟ್ ಪ್ರಕಾರ) |
| ಇನ್ಫೋಟೈನ್ಮೆಂಟ್ ಸ್ಕ್ರೀನ್ | 10.25″ + 10.25″ ಡ್ಯುಯಲ್ + ಡಿಜಿಟಲ್ ಕ್ಲಸ್ಟರ್ | 8″ ಅಥವಾ 9″ |
| ADAS ಲೆವೆಲ್-2 | ಇದೆ (ಟಾಪ್ ವೇರಿಯಂಟ್ಗಳಲ್ಲಿ) | ಇಲ್ಲ |
| ರಿಸೇಲ್ ವ್ಯಾಲ್ಯೂ & ಸರ್ವೀಸ್ | ಉತ್ತಮ | ಅತ್ಯುತ್ತಮ (ಟೊಯೋಟಾ ಖ್ಯಾತಿ) |
ಬೆಲೆ ಮತ್ತು ಮೈಂಟೆನನ್ಸ್ ನಲ್ಲಿ ಯಾವುದು ಉತ್ತಮ?
* Tata Sierra ದ ಆರಂಭಿಕ ಬೆಲೆ 11.49 ಲಕ್ಷ ಆಗಿದೆ. ಮತ್ತು ಇದರ ಟಾಪ್ ವೆರಿಯಂಟ್ ಬೆಲೆ 20 ಲಕ್ಷದ ತನಕ ಇದೆ.
* ಇನ್ನು Toyota Innova Crysta ಆರಂಭಿಕ ಬೆಲೆ ಸ್ವಲ್ಪ ದುಬಾರಿ ಆಗಿದೆ. 18.66 ಲಕ್ಷ ಆರಂಭಿಕ ಬೆಲೆ ಮತ್ತು ಇದರ ಟಾಪ್ ವೆರಿಯಂಟ್ ಬೆಲೆ 25 ಲಕ್ಷ ಆಗಿದೆ.
SUV ಲುಕ್ ಮತ್ತು ಮಾಡ್ರನ್ ಟೆಕ್ನಾಲಜಿ ಆಯ್ಕೆ ಮಾಡುವುದಾದರೆ Tata Sierra ಉತ್ತಮವಾಗಿದೆ. Toyota Innova Crysta ರಿಸೆಲ್ ವ್ಯಾಲ್ಯೂ ಉತ್ತಮವಾಗಿದೆ ಮತ್ತು ಕಡಿಮೆ ಮೈಂಟೆನನ್ಸ್ ನಿಂದ ಧೀರ್ಘ ಕಾಲ ಲಾಭ ಪಡೆದುಕೊಳ್ಳಬಹುದು. ಹಾಗೆ ಇದು ಕುಟುಂಬ ಪ್ರಯಾಣಕ್ಕೆ ಉತ್ತಮವಾದ ಆಯ್ಕೆ ಆಗಿದೆ. ನಿಮಗೆ ಇವೆರಡರಲ್ಲಿ ಯಾವುದು ಉತ್ತಮ ಅನಿಸುತ್ತದೆ ಅದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

