Daughter Ancestral Property Rights: ಹಿಂದೂ ಉತ್ತರಾಧಿಕಾರ ಕಾಯಿದೆಯಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. 2005 ರ ಹಿಂದೂ ಉತ್ತರಾಧಿಕಾರ ಕಾಯ್ದೆ ಪ್ರಕಾರ ತಂದೆಯ ಆಸ್ತಿಯಲ್ಲಿ ಹೆಣ್ಣು ಮಗಳಿಗೂ ಕೂಡ ಗಂಡು ಮಕ್ಕಳ ಹಾಗೆ ಸಮನಾದ ಪಾಲು ಇದೆ. ಅದೇ ರೀತಿಯಲ್ಲಿ ಹೆಣ್ಣು ಮಕ್ಕಳು ತವರಿನ ಆಸ್ತಿಯಲ್ಲಿ ಕೂಡ ಸಮನಾದ ಪಾಲು ಪಡೆದುಕೊಳ್ಳುತ್ತಾರೆ. ಆದರೆ ಕೆಲವು ವಿಶೇಷವಾದ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಯಾವುದೇ ರೀತಿಯಲ್ಲಿ ಪಾಲು ಸಿಗಲ್ಲ. ಹಾಗಾದರೆ ಯಾವ ವಿಶೇಷ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಯಾವುದೇ ಪಾಲು ಸಿಗಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ತಂದೆ ಜೀವಂತವಾಗಿದ್ದಾಗ ಮಾಡಿದ ವಿಲ್
ಕೆಲವು ಸಮಯದಲ್ಲಿ ತಂದೆಯಾದವನು ತಾನು ಸ್ವಂತ ಹಣದಲ್ಲಿ ಖರೀದಿ ಮಾಡಿದ ಆಸ್ತಿಗೆ ವಿಲ್ ಬರೆದಿಟ್ಟಿದ್ದರೆ ಹೆಣ್ಣು ಮಕ್ಕಳು ಮಾತ್ರವಲ್ಲದೆ ಗಂಡು ಮಕ್ಕಳು ಕೂಡ ಯಾವುದೇ ಪಾಲು ಕೇಳಲು ಸಾಧ್ಯವಿಲ್ಲ. ತಂದೆಯಾದವನು ತನ್ನ ಸ್ವಂತ ಹಣದಲ್ಲಿ ಖರೀದಿ ಮಾಡಿದ ಆಸ್ತಿಯನ್ನು ಯಾರಿಗೆ ಬೇಕಾದರೂ ದಾನ ಮಾಡಬಹುದು ಮತ್ತು ಯಾರ ಹೆಸರಿಗೆ ಬೇಕಾದರೂ ವಿಲ್ ಬರೆಯಬಹುದು. ಈ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಯಾವುದೇ ಪಾಲು ಸಿಗಲ್ಲ.
2005 ಕ್ಕೂ ಮೊದಲೇ ತಂದೆಯ ಭಾಗವಾಗಿ ಪ್ರತ್ಯೇಕವಾಗಿದ್ದರೆ
2005ರ ಮೊದಲೇ ತಂದೆಯ ತವರು ಆಸ್ತಿಯನ್ನು ಭಾಗ ಮಾಡಿ (partition) ತಂದೆಗೆ ಅವರ ಪಾಲು ಪ್ರತ್ಯೇಕವಾಗಿ ಬಂದಿದ್ದರೆ, ಆ ಪಾಲು ತಂದೆಯ ಸ್ವಯಂ-ಸಂಪಾದಿತ ಆಸ್ತಿಯಂತೆ ಪರಿಗಣಿಸಲಾಗುತ್ತದೆ. ಆ ಆಸ್ತಿಯನ್ನು ತಂದೆಯಾದವನು ವಿಲ್ ಬರೆದಿದ್ದರೆ ಹೆಣ್ಣು ಮಕ್ಕಳು ಆ ಆಸ್ತಿಯಲ್ಲಿ ಪಾಲು ಕೇಳುವಂತಿಲ್ಲ ಮತ್ತು ಈ ನಿಯಮ ಗಂಡು ಮಕ್ಕಳಿಗೂ ಅನ್ವಯ ಆಗಲಿದೆ. ತಂದೆಗೆ ಇಷ್ಟವಿದ್ದರೆ ಮಾತ್ರ ಮಕ್ಕಳಿಗೆ ಆ ಆಸ್ತಿಯಲ್ಲಿ ಪಾಲು ಕೊಡಬಹುದು.
ತಾಯಿಯ ಸ್ವಯಂ ಸಂಪಾದಿದ ಆಸ್ತಿಯಾಗಿದ್ದರೆ
ಕೇವಲ ತಂದೆಯ ಆಸ್ತಿ ಮಾತ್ರವಲ್ಲ ತಾಯಿಗೂ ಕೂಡ ಈ ನಿಯಮ ಅನ್ವಯ ಆಗಲಿದೆ. ತಾಯಿ ತಾನು ಗಳಿಸಿದ ಆಸ್ತಿಯನ್ನು ವಿಲ್ ಮಾಡಿದ್ದರೆ ಅಥವಾ ಬೇರೆಯವರಿಗೆ ಉಡುಗೊರೆ (gift) ಮಾಡಿದ್ದರೆ ಮಗಳಿಗೆ ಆ ಆಸ್ತಿಯಲ್ಲಿ ಹಕ್ಕು ಇರುವುದಿಲ್ಲ. ಆದರೆ ತಾಯಿಗೆ ಈ ಆಸ್ತಿ ತವರಿನಿಂದ ಬಂದಿದ್ದರೆ ಮಕ್ಕಳು ಅದರಲ್ಲಿ ಪಾಲು ಕೇಳುವ ಹಕ್ಕು ಪಡೆದುಕೊಂಡಿರುತ್ತಾರೆ.
2005 ಕ್ಕೂ ಮೊದಲೇ ತಂದೆ ಸತ್ತು ಆಸ್ತಿ ಭಾಗವಾಗಿದ್ದರೆ
2005 ಸೆಪ್ಟೆಂಬರ್ 9ರ ಮೊದಲೇ ತಂದೆ ಸಾವನ್ನಪ್ಪಿದ್ದು, ಆಗಲೇ ಕುಟುಂಬದ ಆಸ್ತಿ ಭಾಗವಾಗಿದ್ದರೆ ಕೆಲವು ಹಳೆಯ ತೀರ್ಪುಗಳ ಪ್ರಕಾರ ಮಗಳಿಗೆ ಹಕ್ಕು ನಿರಾಕರಣೆಯಾಗಬಹುದು. ಆದರೆ ಈ ನಿಯಮದಲ್ಲಿ ಈಗ ಕೆಲವು ಬದಲಾವಣೆ ಮಾಡಲಾಗಿದೆ. ಕೋರ್ಟ್ ಮುಖಾಂತರ ಹೆಣ್ಣು ಮಕ್ಕಳಿಗೆ ಪಾಲು ಪಡೆದುಕೊಳ್ಳುವ ಬಗ್ಗೆ ಅರ್ಜಿ ಸಲ್ಲಿಸಬಹುದು.
ದತ್ತು ಪಡೆದುಕೊಂಡ ಮಗಳಾಗಿದ್ದಾರೆ
ಕಾನೂನಿನ ಪ್ರಕಾರ ಮಗಳನ್ನು ದತ್ತು ಪಡೆದುಕೊಂಡಿದ್ದರೆ ಮಾತ್ರ ಮಗಳಾದವಳು ತಂದೆ ಮತ್ತು ತಾಯಿಯ ಆಸ್ತಿಯಲ್ಲಿ ಪಾಲು ಪಡೆದುಕೊಳ್ಳಬಹುದು. ಆದರೆ ಹೆಸರಿಗೆ ಮಾತ್ರ ದತ್ತು ಮಗಳಾಗಿದ್ದರೆ ಅವಳು ತಂದೆ ತಾಯಿಯ ಆಸ್ತಿಯಲ್ಲಿ ಯಾವುದೇ ರೀತಿಯ ಪಾಲು ಪಡೆದುಕೊಳ್ಳಲು ಸಾಧ್ಯವಿಲ್ಲ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

