Home Loan EMI Reduce Tips: ಮಧ್ಯಮ ವರ್ಗದ ಜನರು ಮನೆ ಕಟ್ಟಲು ಗೃಹ ಸಾಲ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಹೆಚ್ಚಿನ EMI ಕಾರಣ ಜನರು ಗೃಹ ಸಾಲ ಪಡೆದುಕೊಳ್ಳಲು ಹಿಂದೇಟು ಹಾಕುತ್ತಾರೆ. ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ ಗಳಷ್ಟು ಕಡಿಮೆಗೊಳಿಸಿದ ಬಳಿಕ ಸಾಲಗಾರರ ತಿಂಗಳ EMI ಗಣನೀಯವಾಗಿ ಕಡಿಮೆಯಾಗಿದೆ. ನೀವು ಗೃಹ ಸಾಲವನ್ನು ಪಡೆದುಕೊಂಡಿದ್ದು ತಿಂಗಳಲ್ಲಿ ಬರುವ EMI ನೋಡಿ ತಲೆಕೆಡಿಸಿಕೊಳ್ಳುತ್ತಿದ್ದೀರಾ..? ಇದೀಗ ನಾವು ನಿಮಗೆ ನೀಡುವ 5 ಟಿಪ್ಸ್ ಮೂಲಕ ನಿಮ್ಮ ಗೃಹ ಸಾಲದ EMI ಭಾರವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.
ಈ 5 ಸರಳ ಮಾರ್ಘವನ್ನು ಅನುಸರಿಸುವ ಮೂಲಕ ನಿಮ್ಮ EMI ಭಾರವನ್ನು ಕಡಿಮೆ ಮಾಡಿಕೊಳ್ಳಬಹುದು
* ಬಡ್ಡಿದರ ಕಡಿಮೆ ಇರುವ ಬ್ಯಾಂಕ್ ಗೆ ನಿಮ್ಮ ಸಾಲವನ್ನು ವರ್ಗಾವಣೆ ಮಾಡಿ
ದೇಶಿಯ ಮಾರುಕಟ್ಟೆಯಲ್ಲಿ ಬಡ್ಡಿದರ ನಿರಂತರವಾಗಿ ಏರಿಳಿತ ಆಗುತ್ತಿದೆ. ನೀವು ಪ್ರಸ್ತುತ ಪಡೆದುಕೊಂಡಿರುವ ಬ್ಯಾಂಕ್ ನ ಬಡ್ಡಿದರ 8.5% ಆಗಿದ್ದರೆ ಮತ್ತು ಬೇರೆ ಬ್ಯಾಂಕ್ 7.8% ನೀಡುತ್ತಿದ್ದರೆ ನೀವು ಆ ಬ್ಯಾಂಕ್ ಗೆ ನಿಮ್ಮ ಸಾಲವನ್ನು ವರ್ಗಾಯಿಸಬಹುದಾಗಿದೆ. ಉದಾಹರಣೆ ಮೂಲಕ ಹೇಳುವುದಾದರೆ, 50 ಲಕ್ಷ ಸಾಲವನ್ನು 20 ವರ್ಷ ಅವಧಿಗೆ ತೆಗೆದುಕೊಂಡಿದು, ಬಡ್ಡಿದರ 0.5% ಕಡಿಮೆ ಆದರೂ ತಿಂಗಳ EMI ನಲ್ಲಿ 2500 ರೂ. ನಿಂದ 3500 ರೂ. ವರೆಗೆ ಉಳಿತಾಯವಾಗುತ್ತದೆ.
* ಪ್ರಿ ಪೇಮೆಂಟ್ ಮಾಡಿ
ಬೋನಸ್, ಇನ್ಕಮ್ ಟ್ಯಾಕ್ಸ್ ರಿಪಾಂಡ್ ಅಥವಾ ಬೇರೆ ಯಾವುದೇ ಮೂಲದಿಂದ ಹೆಚ್ಚುವರಿ ಹಣ ಬಂದರೆ, ಸಾಲದ ಮೂಲ ಧನಕ್ಕೆ ಪಾವತಿ ಮಾಡಬೇಕು. ಮೂಲ ಧನ ಕಡಿಕೆ ಆಗುತ್ತಾ ಬಂದ ಹಾಗೆ EMI ಬಡ್ಡಿ ಕೂಡ ಕಡಿಮೆ ಆಗುತ್ತದೆ. ಹೆಚ್ಚಿನ ಬ್ಯಾಂಕ್ ಗಳು 20 ರಿಂದ 30% ವರೆಗೆ ಉಚಿತ ಪ್ರಿ ಪೇಮೆಂಟ್ ಅನ್ನು ನೀಡುತ್ತದೆ.
* ಸಾಲದ ಅವಧಿಯನ್ನು ಹೆಚ್ಚಿಸಬೇಕು
EMI ತುಂಬಾ ಭಾರವಾಗಿದ್ದರೆ ಸಾಲದ ಅವಧಿಯನ್ನು 20 ವರ್ಷದಿಂದ 25 ಅಥವಾ 30 ವರ್ಷಕ್ಕೆ ವಿಸ್ತರಣೆ ಮಾಡಬಹುದಾಗಿದೆ. ಇದರಿಂದ ತಿಂಗಳ ಏಮಿ ಕಡಿಮೆ ಆಗುತ್ತದೆ, ಆದರೆ ಒಟ್ಟು ಬಡ್ಡಿ ಹೆಚ್ಚಾಗುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸಿದ ನಂತರ ಮತ್ತೆ ನಿಮ್ಮ ಸಾಲದ ಅವಧಿಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.
* ಸೆಟ್ ಆಫ್ ಅಥವಾ ಸೆಟ್ ಡೌನ್ EMI ಆಯ್ಕೆಯನ್ನು ಆರಿಸಿಕೊಳ್ಳಿ
ಸೆಟ್ ಆಫ್ ಅಥವಾ ಸೆಟ್ ಡೌನ್ EMI ಆಯ್ಕೆ ಅಂದರೆ, ಸದ್ಯ ನಿಮ್ಮ ಆದಾಯ ಕಡಿಮೆ ಇದ್ದರೆ ಮೊದಲ 5 ರಿಂದ 7 ವರ್ಷ ಕಡಿಮೆ EMI, ನಂತರ ಹೆಚ್ಚು EMI ಆಯ್ಕೆ ಮಾಡಿಕೊಳ್ಳಬಹುದಾಗಿದೆ.
* ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ಕಾಪಾಡಿಕೊಳ್ಳಿ
750 ಕಿಂತ ಹೆಚ್ಚಿನ CIBIL SCORE ಇದ್ದರೆ, ಬ್ಯಾಂಕ್ ಗಳು ತಾವಾಗಿಯೇ ಬಡ್ಡಿದರವನ್ನು ಕಡಿಮೆ ಮಾಡುತ್ತವೆ. ಕ್ರೆಡಿಟ್ ಕಾರ್ಡ್ ಬಿಲ್ ಸಮಯಕ್ಕೆ ಪಾವತಿಮಾಡಿ, ಹಳೆಯ ಸಾಲಗಳನ್ನು ಮುಚ್ಚಿ್ದರೆ ನಿಮ್ಮ ಕ್ರೆಡಿಟ್ ಸ್ಕೋರ್ 750 ಕಿಂತ ಹೆಚ್ಚಾಗಿಯೇ ಇರುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

