Free Anganwadi Services Fo Womens: ನೀವು ಗರ್ಭಿಣಿ ಅಥವಾ ಮಗುವಿನ ತಾಯಿ ಆಗಿದ್ದರೆ, ಅಂಗನವಾಡಿಯಲ್ಲಿ ಕೆಲವು ಉಚಿತ ಸೇವೆಗಳನ್ನು ನೀಡಲಾಗುತ್ತಿದೆ. ಅಂಗನವಾಡಿಯಲ್ಲಿ ಮಕ್ಕಳಿಗೆ ಮಾತ್ರವಲ್ಲದೆ ತಾಯಂದಿರಿಗೂ ಕೂಡ ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದೆ. ಒಮ್ಮೆ ಅಂಗನವಾಡಿಗೆ ಭೇಟಿ ಕೊಟ್ಟು ಉಚಿತ ಸೇವೆಯ ಲಾಭವನ್ನು ಪಡೆದುಕೊಳ್ಳಿ. ನೀವು ಗರ್ಭಿಣಿಯಾದ 3 ತಿಂಗಳ ಒಳಗೆ ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಭೇಟಿ ಕೊಟ್ಟು, ಅಗತ್ಯ ದಾಖಲೆ (ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತು ಗರ್ಭಿಣಿ ಚೀಟಿ) ನೀಡಿ ನೋಂದಣಿ ಮಾಡಿಸಿದರೆ, ಎಲ್ಲ ಉಚಿತ ಸೇವೆಗಳು ನಿಮಗೆ ಸಿಗುತ್ತದೆ. ಇದೀಗ ನಾವು ಅಂಗನವಾಡಿಯಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಸಿಗುವ 8 ಉಚಿತ ಸೇವೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಂಗನವಾಡಿಯಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಸಿಗುವ 8 ಉಚಿತ ಸೇವೆಗಳು
* ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡಲಾಗುತ್ತದೆ
ಅಂಗನವಾಡಿಯಲ್ಲಿ ಪ್ರತಿ ತಿಂಗಳು ಗರ್ಭಿಣಿ ಮತ್ತು ಬಾಣಂತಿಯರಿಗೆ ಚಿಕ್ಕಿಗಳು, ಲಡ್ಡು, ಖೀರ್ ಪೌಡರ್, ರಾಗಿ ಮಿಶ್ರಿತ ಆಹಾರ ಪೊಟ್ಟಣಗಳನ್ನು ಮನೆಗೆ ತೆಗೆದುಕೊಂಡು ಹೋಗಲು ನೀಡಲಾಗುತ್ತದೆ. ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಪ್ರೋಟೀನ್ ಹೇರಳವಾಗಿರುತ್ತದೆ, ಈ ಕಾರಣದಿಂದ ಗರ್ಭಿಣಿ ಮತ್ತು ಬಾಣಂತಿಯರಿಗೆ ಈ ಪೌಷ್ಟಿಕ ಆಹಾರವನ್ನು ಪ್ರತಿ ತಿಂಗಳು ನೀಡಲಾಗುತ್ತದೆ.
* ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (PMMVY)
ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಅಡಿಯಲ್ಲಿ ಮೊದಲ ಎರಡು ಮಕ್ಕಳಿಗೆ 6000 Rs ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ನೋಂದಣಿ ಸಮಯದಲ್ಲಿ 1000, 6 ತಿಂಗಳ ನಂತರ 2000 Rs ಮತ್ತು ಮಗು ಜನಿಸಿದ ನಂತರ 3000 Rs ಹಣವನ್ನು ತಾಯಿಯ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
* ಉಚಿತ ಆರೋಗ್ಯ ತಪಾಸಣೆ
ತೂಕ ಅಳತೆ, ರಕ್ತದೊತ್ತಡ ಪರೀಕ್ಷೆ, ಹಿಮೋಗ್ಲೋಬಿನ್ (HB) ಟೆಸ್ಟ್, ಕಬ್ಬಿಣ ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುತ್ತದೆ.
* ಲಸಿಕೆ ಮತ್ತು ಲಸಿಕೆ ಬಗ್ಗೆ ಮಾಹಿತಿ
ಗರ್ಭಿಣಿಯರಿಗೆ TT ಇಂಜೆಕ್ಷನ್ ಮತ್ತು ಮಗುವಿನ ಎಲ್ಲ ಲಸಿಕೆಗಳ ಬಗ್ಗೆ ಮಾಹಿತಿ ನೀಡುತ್ತಾರೆ.
* ಬಾಣಂತಿಯರಿಗೆ 6 ತಿಂಗಳವರೆಗೆ ಪೌಷ್ಟಿಕ ಆಹಾರ
ಮಗು ಜನಿಸಿದ ನಂತರವೂ ತಾಯಂದಿರಿಗೆ 6 ತಿಂಗಳವರೆಗೆ ಪೌಷ್ಟಿಕ ಆಹಾರ ಪೂರೈಕೆ ಮಾಡಲಾಗುತ್ತದೆ.
* ಮಕ್ಕಳಿಗೆ ಪೂರಕ ಪೌಷ್ಟಿಕಾಂಶ
6 ತಿಂಗಳಿನಿಂದ 2 ವರ್ಷಗಳ ವರೆಗೆ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ನೀಡಲಾಗುತ್ತದೆ. ಮಗುವಿಗೆ ಬಿಸಿ ಅನ್ನ, ಖಿಚಡಿ, ಹಾಲು, ಇತ್ಯಾದಿ.
* ಮಹಿಳೆಯರಿಗೆ ಆರೋಗ್ಯ ಶಿಕ್ಷಣ
ಪ್ರತಿ ತಿಂಗಳು “ಮಾತೃ ದಿನ” ಅಥವಾ “ಗೋಧೂಲಿ ವೇಳೆ” ಯಲ್ಲಿ ಸ್ತನಪಾನ, ಕುಟುಂಬ ಯೋಜನೆ, ಸ್ವಚ್ಛತೆ ಕುರಿತು ತರಬೇತಿಯನ್ನು ನೀಡಲಾಗುತ್ತದೆ.
* ತುರ್ತು ಸಂದರ್ಭದಲ್ಲಿ ರೆಫರಲ್ ಸೇವೆ
ತುರ್ತು ಸಂದರ್ಭದಲ್ಲಿ ರೆಫರಲ್ ಸೇವೆ ಎಂದರೆ, ಆರೋಗ್ಯದ ಗಂಭೀರ ಪರಿಸ್ಥಿತಿಯಲ್ಲಿ ತಕ್ಷಣದ ವೈದ್ಯಕೀಯ ನೆರವಿಗಾಗಿ ಕರೆ ಮಾಡಿ, ಆಂಬ್ಯುಲೆನ್ಸ್ ಮೂಲಕ ರೋಗಿಯನ್ನು ಹತ್ತಿರದ ಸೂಕ್ತ ಆಸ್ಪತ್ರೆಗೆ ಸಾಗಿಸುವುದು ಅಥವಾ ಗಂಭೀರ ಸ್ಥಿತಿಗಳನ್ನು ಗುರುತಿಸಿ ಮೊದಲ ಚಿಕಿತ್ಸೆ ನೀಡಿ ಸುರಕ್ಷಿತವಾಗಿ ಆಸ್ಪತ್ರೆಗೆ ತಲುಪಿಸುವುದು. ಇದಕ್ಕಾಗಿ ಭಾರತದಲ್ಲಿ 108 ನಂತಹ ತುರ್ತು ಸಂಖ್ಯೆಗಳನ್ನು ಬಳಸಬಹುದು, ಇದು ವೈದ್ಯಕೀಯ ನೆರವು ಮತ್ತು ಸಾರಿಗೆಯನ್ನು ಒದಗಿಸುತ್ತದೆ.
ಇವು ತಾಯಂದಿರ ಮತ್ತು ಮಕ್ಕಳ ಆರೋಗ್ಯ ಸುಧಾರಣೆಗೆ ಸಹಕಾರಿ ಆಗಿದೆ. ಇಂದೇ ನೋಂದಣಿ ಮಾಡಿಕೊಂಡು ಸರ್ಕಾರದಿಂದ ಸಿಗುವ ಲಾಭ ಪಡೆದುಕೊಳ್ಳಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

