Karnataka School Admission New Rules: ಸದ್ಯ 2025 -2026 ನೇ ವರ್ಷದ ಶಾಲಾ ಮಕ್ಕಳ ಹಾಜರಾತಿ ಈಗಾಗಲೇ ಆರಂಭ ಆಗಿದೆ ಎಂದು ಹೇಳಬಹುದು. ಶಾಲಾ ಮಕ್ಕಳ ಹಾಜರಾತಿ ಆರಂಭ ಆಗಿದ್ದು ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸುವ ಕೆಲಸದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಈನಡುವೆ ರಾಜ್ಯ ಶಿಕ್ಷಣ ಇಲಾಖೆ ಒಂದನೇ ತರಗತಿಗೆ ಮಕ್ಕಳನ್ನು ಸೇರಿಸಲು ಮಗುವಿಗೆ ಆರು ವರ್ಷ ವಯಸ್ಸಾಗಿರುವುದು ಕಡ್ಡಾಯ ಅನ್ನುವ ಹೊಸ ನಿಯಮವನ್ನು ಪ್ರಸ್ತುತ ವರ್ಷದಲ್ಲಿ ಜಾರಿಗೆ ತಂದಿದ್ದು ಇದು ಸಾಕಷ್ಟು ಜನರ ಬೇಸರಕ್ಕೆ ಕೂಡ ಕಾರಣವಾಗಿತ್ತು. ಹೌದು, ಆರು ವರ್ಷವಾಗದೆ ಮಗುವನ್ನು ಶಾಲೆಗೆ ಸೇರಿಸಲು ಸಾಧ್ಯವಿಲ್ಲ ಎಂದು ರಾಜ್ಯ ಶಿಕ್ಷಣ ಇಲಾಖೆ ಆದೇಶ ಹೊರಡಿಸುವುದರ ಮೂಲಕ ರಾಜ್ಯದ ಎಲ್ಲಾ ಪೋಷಕರಿಗೆ ಹೊಸ ರೂಲ್ಸ್ ಜಾರಿಗೆ ತಂದಿತ್ತು, ಆದರೆ ಈಗ ಆ ನಿಯಮದಲ್ಲಿ ಬದಲಾವಣೆ ಮಾಡಿದೆ.
ಮಕ್ಕಳ ಪೋಷಕರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ
ಈ ಹಿಂದೆ ಮಗುವಿಗೆ ಆರು ವರ್ಷ ವಯಸ್ಸಾಗಿರಬೇಕು ಎಂದು ಆದೇಶ ಹೊರಡಿಸಿದ್ದ ರಾಜ್ಯ ಶಿಕ್ಷಣ ಇಲಾಖೆ ಈಗ ನಿಯಮದಲ್ಲಿ ಕೊಂಚ ಬದಲಾವಣೆ ಮಾಡಿದೆ. ಹೌದು, ಮಗುವಿಗೆ 5 ವರ್ಷ 5 ತಿಂಗಳು ತುಂಬಿದ್ದರೂ ಕೂಡ ಮಗುವನ್ನು ಶಾಲೆಗೆ ಸೇರಿಸಬಹುದು ಎಂದು ಹೇಳುವುದರ ಮೂಲಕ ಈಗ ರಾಜ್ಯ ಶಿಕ್ಷಣ ಇಲಾಖೆ ಮಕ್ಕಳ ಶಾಲಾ ದಾಖಲಾತಿ ನಿಯಮದಲ್ಲಿ ಬದಲಾವಣೆ ಮಾಡಿದೆ. ಒಂದನೇ ತರಗತಿ ದಾಖಲಾತಿ ವಯಯೋಮಿತಿಯಲ್ಲಿ ಸಡಿಲಿಕೆ ಮಾಡುವುದರ ಮೂಲಕ ಈಗ ರಾಜ್ಯ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ (Madhu Bangarappa) ಎಲ್ಲಾ ಪೋಷಕರಿಗೆ ಗುಡ್ ನ್ಯೂಸ್ ನೀಡಿದ್ದಾರೆ.
5 ವರ್ಷ 5 ತಿಂಗಳಾಗಿದ್ದರೆ ಶಾಲೆಗೆ ಸೇರಿಸಬಹುದು
ಮಕ್ಕಳ ಆರೋಗ್ಯ ಮತ್ತು ಅವರ ಶಿಕ್ಷಣ ಉದ್ದೇಶದಿಂದ ರಾಜ್ಯ ಶಿಕ್ಷಣ ಇಲಾಖೆ ಮಕ್ಕಳಿಗೆ 6 ವರ್ಷ ಕಡ್ಡಾಯ ಆಗಿರಬೇಕು ಎಂದು ಆದೇಶ ಹೊರಡಿಸಿತ್ತು. ಆದರೆ ಹಲವು ಪೋಷಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣ ರಾಜ್ಯ ಶಿಕ್ಷಣ ಈಗ ಈಗ ನಿಯಮಲ್ಲಿ ಕೆಲವು ಬದಲಾವಣೆ ಮಾಡಲು ಮುಂದಾಗಿದೆ. ಪೋಷಕರ ವಿರೋಧದ ನಂತರ ರಾಜ್ಯದ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಮಕ್ಕಳಿಗೆ 5 ವರ್ಷ 5 ತಿಂಗಳು ಆಗಿದ್ದರೂ ಕೂಡ ಅವರನ್ನು ಶಾಲೆಗೆ ಸೇರಿಸಬಹುದು ಎಂದು ಆದೇಶ ಹೊರಡಿಸಿದ್ದಾರೆ.
ಇನ್ನು ಈ ಹೊಸ ನಿಯಮ ರಾಜ್ಯ ಶಿಕ್ಷಣ ಪಠ್ಯಕ್ರಮಕ್ಕೆ ಮಾತ್ರ ಅನ್ವಯ ಆಗಲಿದೆ, ಆದರೆ CBSE ಅಥವಾ ICSE ಪಠ್ಯಕ್ರಮಕ್ಕೆ ಇದು ಅನ್ವಯ ಆಗಲ್ಲ ಎಂದು ರಾಜ್ಯ ಶಿಕ್ಷಣ ಇಲಾಖೆ ತಿಳಿಸಿದೆ. ಇನ್ನು ಒಂದನೇ ತರಗತಿ ಮಾತ್ರವಲ್ಲದೆ ರಾಜ್ಯದಲ್ಲಿ LGK ಶಿಕ್ಷಣ ಪಡೆಯುವ ಮಕ್ಕಳಿಗೆ 4 ವರ್ಷ ವಯಸ್ಸು ಕಡ್ಡಾಯವಾಗಿ ಆಗಿರಬೇಕು ಎಂದು ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ. ಈಗಾಗಲೇ ಮಕ್ಕಳ ದಾಖಲಾತಿ ಆರಂಭ ಆಗಿದ್ದು ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸುವ ಕೆಲಸ ಮಾಡಲಾಗುತ್ತಿದೆ.