Arogya Sanjeevini Scheme Health Insurance: ಕರ್ನಾಟಕ ರಾಜ್ಯ ಸರ್ಕಾರ ಸರ್ಕಾರೀ ನೌಕರರಿಗಾಗಿ ಜಾರಿಗೆ ತಂದಿರುವ ಆರೋಗ್ಯ ಸಂಜೀವಿನಿ ಯೋಜನೆಯ ಅಡಿಯಲ್ಲಿ ಲಕ್ಷಾಂತರ ಸರ್ಕಾರೀ ನೌಕರರು ಮತ್ತು ಅವರ ಕುಟುಂಬದವರು ಸರ್ಕಾರದಿಂದ ಆರೋಗ್ಯ ವಿಮೆ ಪಡೆದುಕೊಳ್ಳುತ್ತಾರೆ. ಈಗಾಗಲೇ ಆರೋಗ್ಯ ಸಂಜೀವಿನಿ ಯೋಜನೆಗೆ ಅರ್ಜಿ ಆರಂಭ ಆಗಿದ್ದು ಸರ್ಕಾರೀ ನೌಕರರು ಕೆಲವು ಅಗತ್ಯ ದಾಖಲೆಗಳ ಜೊತೆಗೆ ಆರೋಗ್ಯ ಸಂಜೀವಿನಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಹಾಗಾದರೆ ಸರ್ಕಾರೀ ನೌಕರರು ಆರೋಗ್ಯ ಸಂಜೀವಿನಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಬೇಕಾಗಿರುವ ದಾಖಲೆಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಆರೋಗ್ಯ ಸಂಜೀವನಿ ಯೋಜನೆ
ಆರೋಗ್ಯ ಸಂಜೀವನಿ ಯೋಜನೆ, ಇದು ಕರ್ನಾಟಕ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಸದಸ್ಯರಿಗೆ ಜಾರಿಗೆ ತಂದ ರಾಜ್ಯ ಮಟ್ಟದ ಆರೋಗ್ಯ ವಿಮಾ ಯೋಜನೆ ಆಗಿದೆ. ಈ ಯೋಜನೆಯ ಮೂಲಕ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಗಳಲ್ಲಿ ನಗದು ರಹಿತ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದೆ. ಸರ್ಕಾರೀ ನೌಕರರು ಮಾತ್ರವಲ್ಲದೆ ಅವರು ಕೂಡ ಆರೋಗ್ಯ ಸಂಜೀವಿನಿ ಯೋಜನೆಯ ಅಡಿಯಲ್ಲಿ ನಾಗದ್ದು ರಹಿತ ಚಿಕೆತ್ಸೆ ಪಡೆದುಕೊಳ್ಳಬಹುದು.
ಆರೋಗ್ಯ ಸಂಜೀವಿನಿ ಯೋಜನೆಯ ಅರ್ಹತೆ
* ಭಾರತೀಯ ನಾಗರೀಕರಾಗಿರಬೇಕು
* ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೆ ಅವರ ಕುಟುಂಬದವರು (ಪತ್ನಿ, 3 ತಿಂಗಳಿನಿಂದ 25 ವರ್ಷದೊಳಗಿನ ಮಕ್ಕಳು)
* ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಸರ್ಕಾರಿ ನೌಕರರಿದ್ದರೆ ಪ್ರತ್ಯೇಕ ನೋಂದಣಿ ಮಾಡಿಸಬೇಕು.
* 18 ರಿಂದ 65 ವರ್ಷದವರು ಅರ್ಜಿ ನೋಂದಣಿ ಮಾಡಿಕೊಳ್ಳಬಹುದು
ಯೋಜನೆಯಲ್ಲಿ ಒಳಗೊಂಡಿರುವ ವೆಚ್ಚಗಳು
* ಆಸ್ಪತ್ರೆಗೆ ದಾಖಲಾಗುವ ವೆಚ್ಚ
* ಶಸ್ತ್ರ ಚಿಕಿತ್ಸೆ ವೆಚ್ಚ
* ವೈದ್ಯರ ಶುಲ್ಕ
* ಔಷಧಿ ವೆಚ್ಚ
ಯೋಜನೆಗೆ ಅರ್ಜಿ ಸಲ್ಲಿಸುವ ಹಂತಗಳು
ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ
* ಸರ್ಕಾರೀ ನೌಕರರ KGID ನಂಬರ್
* ಸರ್ಕಾರೀ ನೌಕರ ಮತ್ತು ಆತನ ಕುಟುಂಬ ಸದಸದ್ಯರ ಆಧಾರ್ ಕಾರ್ಡ್
* ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸ
* ಜನ್ಮ ದಿನಾಂಕ ಮತ್ತು ಇತರೆ ದಾಖಲೆಗಳು
ಅರ್ಜಿ ಸಲ್ಲಿಸುವ ಮೊದಲ ಹಂತ
* hrms.karnataka.gov.in ವೆಬ್ಸೈಟ್ ತೆರೆಯಬೇಕು
* KGID ನಂಬರ್ ಬಳಸಿ ಲಾಗಿನ್ ಆಗಬೇಕು
* ಮೊದಲ ಬಾರಿಗೆ ಲಾಗಿನ್ ಆಗುತ್ತಿದ್ದರೆ Forgot Password ಬಳಸಿ Password Reset ಮಾಡಬೇಕು
ಎರಡನೆಯ ಹಂತ
* ಲಾಗಿನ್ ಆದನಂತರ “Employee Corner” ನಲ್ಲಿ “KASS – Family Dependent Entry Form” ಅಥವಾ “Arogya Sanjeevini Scheme Enrollment” ಆಯ್ಕೆ ಕ್ಲಿಕ್ ಮಾಡಿ ಪ್ರವೇಶ ಪಡೆದುಕೊಳ್ಳಬೇಕು
ಮೂರನೇ ಹಂತ
* ಫಾರ್ಮ್ ತೆರೆದ ನಂತರ ಅಗತ್ಯ ದಾಖಲೆ ನಮೂದಿಸಬೇಕು
1. ಹೆಸರು
2. ಸಂಬಂಧ
3. ಜನ್ಮ ದಿನಾಂಕ
4. ಆಧಾರ್ ಸಂಖ್ಯೆ
5. ಮೊಬೈಲ್ ಸಂಖ್ಯೆ
ನಾಲ್ಕನೇ ಹಂತರ
* ಕೇಳಿದ ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು
* ಫೋಟೋ, ಆಧಾರ್ ಸಂಖ್ಯೆ, ಸ್ಕ್ಯಾನ್ ಮಾಡಿ PDF ನಲ್ಲಿ ಅಪ್ಲೋಡ್ ಮಾಡಬೇಕು
ಐದನೇ ಹಂತ
* ಅರ್ಜಿ ಸಲ್ಲಿಸಿ OTP ನಮೂದಿಸಬೇಕು
* OTP ನಮೂದಿಸಿದ ನಂತರ ಅರ್ಜಿ ಸಲ್ಲಿಕೆಯ ಸಂದೇಶ ಬರುತ್ತದೆ
ಆರನೇ ಹಂತ
* ಸಲ್ಲಿಸಿದ ಅರ್ಜಿಯನ್ನು ಇಲಾಖೆಯವರು ಪರಿಶೀಲನೆ ಮಾಡುತ್ತಾರೆ.
* HRMS ವೆಬ್ಸೈಟ್ ನಲ್ಲಿ ಸ್ಟೇಟಸ್ ಚೆಕ್ ಮಾಡಬೇಕು
* 7 ದಿನಗಳ ಅವಧಿಯಲ್ಲಿ ಅರ್ಜಿ ಪರಿಶೀಲನೆ ಮಾಡಲಾಗುತ್ತದೆ
ಹೆಚ್ಚಿನ ಮಾಹಿತಿಗಾಗಿ SAST ಹೆಲ್ಪ್ ಲೈನ್ ಅಥವಾ DPAR ಸಂಪರ್ಕಿಸಿ. ಸರ್ಕಾರೀ ನೌಕರರು ಕೆಲವು ಅಗತ್ಯ ದಾಖಲೆಯನ್ನು ಆನ್ಲೈನ್ ಮೂಲಕವೇ ಅಪ್ಲೋಡ್ ಮಾಡಬೇಕು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

