10 Benefits Salary Accounts: ಭಾರತದಲ್ಲಿ ಕೋಟ್ಯಾಂತರ ನೌಕರರು ಸಂಬಳದಾದ ಖಾತೆ ಹೊಂದಿದ್ದಾರೆ. ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರು ಸಾಮಾನ್ಯವರು ಸಂಬಳದ ಖಾತೆ ಹೊಂದಿರುತ್ತಾರೆ. ಇತರೆ ಸಾಮಾನ್ಯ ಖಾತೆಗಳಿಗೆ ಹೋಲಿಕೆ ಮಾಡಿದರೆ ಸ್ಯಾಲರಿ ಖಾತೆ ಸ್ವಲ್ಪ ವಿಭಿನ್ನ ಆಗಿರುತ್ತದೆ. ಉಳಿತಾಯ ಖಾತೆಗಳಿಗೆ ಹೋಲಿಕೆ ಮಾಡಿದರೆ ಸ್ಯಾಲರಿ ಖಾತೆ ಇದ್ದವರು ಕೆಲವು ವಿಶೇಷ ಪ್ರಯೋಜನೆ ಪಡೆದುಕೊಳ್ಳುತ್ತಾರೆ. ಹಾಗಾದರೆ ಸ್ಯಾಲರಿ ಖಾತೆ ಇದ್ದವರಿಗೆ ಸಿಗುವ 10 ವಿಶೇಷ ಪ್ರಯೋಜನ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಸ್ಯಾಲರಿ ಖಾತೆ ಎಂದರೆ ಏನು?
ಸಂಬಳ ಖಾತೆಯು ಉದ್ಯೋಗಿಗಳಿಗೆ ವಿಶೇಷ ರೀತಿಯ ಬ್ಯಾಂಕ್ ಖಾತೆಯಾಗಿದ್ದು, ನಿಮ್ಮ ಕಂಪನಿಯು ನೇರವಾಗಿ ಸಂಬಳವನ್ನು ಜಮಾ ಮಾಡುವ ಬ್ಯಾಂಕ್ ಖಾತೆ ಆಗಿದೆ. ಇದನ್ನು ಕಾರ್ಪೊರೇಟ್ ಸ್ಯಾಲರಿ ಅಕೌಂಟ್ ಎಂದೂ ಕೂಡ ಕರೆಯುತ್ತಾರೆ. ಈ ಖಾತೆಗಳನ್ನು ನೀಡಲು ಬ್ಯಾಂಕುಗಳು ಹೆಚ್ಚಾಗಿ ಕಂಪನಿಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುತ್ತವೆ. ಸಾಮಾನ್ಯವಾಗಿ ಕನಿಷ್ಠ ಬ್ಯಾಲೆನ್ಸ್ ಈ ಖಾತೆಯಲ್ಲಿ ಅಗತ್ಯವಿಲ್ಲ. ಇದನ್ನು ತೆರೆಯಲು ನಿಮ್ಮ ಕಂಪನಿಯ HR ಡಿಪಾರ್ಟ್‌ಮೆಂಟ್ ಮೂಲಕ ಅರ್ಜಿ ಸಲ್ಲಿಸಬೇಕು. ಆಧಾರ್, ಪ್ಯಾನ್ ಮತ್ತು ಉದ್ಯೋಗ ಪ್ರಮಾಣಪತ್ರ ಅಗತ್ಯವಾಗಿ ಬೇಕು.
ಸ್ಯಾಲರಿ ಖಾತೆ ತೆರೆಯಲು ಬೇಕಾಗುವ ಅಗತ್ಯ ದಾಖಲೆಗಳು
* ಆಧಾರ್ ಕಾರ್ಡ್
* ಪಾನ್ ಕಾರ್ಡ್
* ಉದ್ಯೋಗ ಪ್ರಮಾಣಪತ್ರ
* ಭಾವಚಿತ್ರ
ಪ್ರಯೋಜನಗಳ ಬಗ್ಗೆ ವಿವರವಾದ ಮಾಹಿತಿ
ಸ್ಯಾಲರಿ ಖಾತೆ ಹೊಂದಿರುವವರು ಕೆಲವು ವಿಶೇಷ ಪ್ರಯೋಜನ ಪಡೆದುಕೊಳ್ಳುತ್ತಾರೆ. ಹಾಗಾರೆ ಸ್ಯಾಲರಿ ಖಾತೆ ಹೊಂದಿರುವವರು ಪಡೆದುಕೊಳ್ಳುವ 10 ವಿಶೇಷ ಪ್ರಯೋಜನ ಈ ಕೆಳಗಿನಂತಿದೆ.
* ಶೂನ್ಯ ಬ್ಯಾಲೆನ್ಸ್
ಸಾಮಾನ್ಯ ಖಾತೆಯಲ್ಲಿ ಕನಿಷ್ಠ ಮೊತ್ತ ಇಟ್ಟುಕೊಳ್ಳದಿದ್ದರೆ ದಂಡ ಹಾಕುತ್ತಾರೆ, ಆದರೆ ಸ್ಯಾಲರಿ ಖಾತೆಯಲ್ಲಿ ಕನಿಷ್ಠ ಮೊತ್ತ ಇಟ್ಟುಕೊಳ್ಳುವ ಚಿಂತೆಯಿಲ್ಲ.
* ಬ್ಯಾಂಕಿಂಗ್ ಸೇವೆಗಳು ಉಚಿತವಾಗಿದೆ
ಸ್ಯಾಲರಿ ಖಾತೆಗೆ SBI, HDF , ICICI ಹೀಗೆ ಮುಂತಾದ ಬ್ಯಾಂಕ್ ಗಳಲ್ಲಿ ಡೆಬಿಟ್ ಕಾರ್ಡ್, ಚೆಕ್ ಬುಕ್, ಅನಿಯಮಿತ ATM ವಹಿವಾಟು, ಹಾಗೆ ನೆಟ್ ಬ್ಯಾಂಕಿಂಗ್ ಸೇವೆಯನ್ನು ಉಚಿತವಾಗಿ ನೀಡಲಾಗುತ್ತದೆ.
* ಸಾಲಗಳು ಕಡಿಮೆ ಬಡ್ಡಿದರದಲ್ಲಿ ಸಿಗುತ್ತದೆ
ವಯಕ್ತಿಕ ಸಾಲ, ಮನೆ ಸಾಲ, ವಾಹನ ಸಾಲಗಳನ್ನೂ ಸ್ಯಾಲರಿ ಖಾತೆ ಹೊಂದಿರುವವರಿಗೆ ಕಡಿಮೆ ಬಡ್ಡಿದರದಲ್ಲಿ ನೀಡಲಾಗುತ್ತದೆ. ಸಾಮಾನ್ಯವಾಗಿ ನೀಡುವ ಸಾಲಕ್ಕಿಂತ 0.5% ನಿಂದ 1% ಕಡಿಮೆ ಇರುತ್ತದೆ.
* ಓವರ್ ಡ್ರಾಫ್ಟ್ ಸೌಲಭ್ಯ
ಸಂಬಳದ 2 ರಿಂದ 3 ಪಟ್ಟು ಓವರ್ ಡ್ರಾಫ್ಟ್ ಸಿಗುತ್ತದೆ. ಅಂದರೆ ಅಗತ್ಯ ಸಮಯದಲ್ಲಿ ಹೆಚ್ಚುವರಿ ಹಣ ತೆಗೆದುಕೊಳ್ಳಬಹುದಾಗಿದೆ. ಅಗತ್ಯ ಸಮಯದಲ್ಲಿ ಕಡಿಮೆ ಬಡ್ಡಿ ಪಾವತಿ ಮಾಡುವುದರ ಮೂಲಕ Over Draft ಹಣ ಬಳಸಿಕೊಳ್ಳಬಹುದು.
* ಉಚಿತ ವಿಮೆ
ಸ್ಯಾಲರಿ ಖಾತೆ ಹೊಂದಿರುವವರಿಗೆ ಕೆಲವು ಬ್ಯಾಂಕು ಗಳು ಅಪಘಾತ ವಿಮೆಯನ್ನು ಉಚಿತವಾಗಿ ನೀಡುತ್ತವೆ. ಕೋಟಕ್ ಅಥವಾ ಆಕ್ಸಿಸ್ ಬ್ಯಾಂಕ್ ಗಳಲ್ಲಿ 10 ರಿಂದ 20 ಲಕ್ಷದ ತನಕ ಉಚಿತ ವಿಮೆಯ ಸೌಲಭ್ಯಗಳು ಸಿಗುತ್ತದೆ.
* ಡಿಸ್ಕೌಂಟ್ ಮತ್ತು ಕ್ಯಾಶ್ ಬ್ಯಾಕ್ ಗಳು
ಸ್ಯಾಲರಿ ಖಾತೆ ಹೊಂದಿರುವವರು ಡೆಬಿಟ್ ಕಾರ್ಡ್ ಬಳಸಿ ಖರೀದಿ ಮಾಡಿದರೆ ಕ್ಯಾಶ್ ಬ್ಯಾಕ್ ಮತ್ತು ಡಿಸ್ಕೌಂಟ್ ಗಳು ಸಿಗುತ್ತದೆ.
* ಠೇವಣಿಗಳಿಗೆ ಉತ್ತಮ ಬಡ್ಡಿದರ
ಸ್ಯಾಲರಿ ಖಾತೆಯಲ್ಲಿ ಫಿಕ್ಸೆಡ್ ಡೆಪಾಸಿಟ್ ಗಳಿಗೆ ಉತ್ತಮ ಬಡ್ಡಿಯನ್ನು ನೀಡಲಾಗುತ್ತದೆ. FD ಯೋಜನೆ ಆಗಿರಬಹುದು ಅಥವಾ ಇತರೆ ಯಾವುದೇ ಯೋಜನೆ ಆಗಿರಬಹುದು ಹಣ ಠೇವಣಿ ಮಾಡಿದರೆ ಹೆಚ್ಚಿನ ಬಡ್ಡಿ ಪಡೆದುಕೊಳ್ಳಬಹುದು.
* ಪ್ರೀಮಿಯಂ ಸೇವೆಗಳು ಲಭ್ಯ
ಡೆಡಿಕೇಟೆಡ್ ರಿಲೇಷನ್‌ಶಿಪ್ ಮ್ಯಾನೇಜರ್ ಮತ್ತು ಆಧ್ಯತೆಯ ಸೇವೆ ಸಿಗುತ್ತದೆ. ಈ ಸೇವೆ ಸ್ಯಾಲರಿ ಖಾತೆ ಹೊಂದಿರುವವರಿಗೆ ಸಿಗುವ ವಿಶೇಷ ಸೇವೆಯಾಗಿದೆ.
* ಕ್ರೆಡಿಟ್ ಕಾರ್ಡ್ ಸೌಲಭ್ಯ
ಸ್ಯಾಲರಿ ಖಾತೆ ಹೊಂದಿರುವವರಿಗೆ ಪ್ರೀ ಅಪ್ರುವ್ ಕ್ರೆಡಿಟ್ ಕಾರ್ಡ್ ಸಿಗುವ ಸಾಧ್ಯತೆ ಹೆಚ್ಚಿದೆ. ಹೆಚ್ಚುವರಿ ಲಿಮಿಟ್ ಇರುವ ಕ್ರೆಡಿಟ್ ಕಾರ್ಡ್ ಸ್ಯಾಲರಿ ಖಾತೆ ಹೊಂದಿರುವವರು ಪಡೆದುಕೊಳ್ಳಬಹುದು.
* ತೆರಿಗೆ ಉಳಿತಾಯ
ನಿಮ್ಮ ವಾರ್ಷಿಕ ಸಂಬಳ ತೆರಿಗೆ ಮಿತಿಯನ್ನು ಮೀರಿದರೆ ಮಾತ್ರ ತೆರಿಗೆ ಕಟ್ ಆಗುತ್ತದೆ. ಕಂಪನಿ ಸಂಬಳ ನೀಡುವಾಗಲೇ TDS (Tax Deducted at Source) ಕಟ್ ಮಾಡಿ ಸರ್ಕಾರಕ್ಕೆ ಜಮಾ ಮಾಡಿರುತ್ತದೆ. ಈ ಕಾರಣಗಳಿಂದ ಸ್ಯಾಲರಿ ಖಾತೆ ಹೊಂದಿರುವವರು ತೆರಿಗೆ ವಿನಾಯಿತಿ ಕೂಡ ಪಡೆದುಕೊಳ್ಳಬಹುದು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

