Namma Metro Ticket Fare: ಬೆಂಗಳೂರು ನಮ್ಮ ಮೆಟ್ರೋದಲ್ಲಿ ಪ್ರತಿನಿತ್ಯ ಸಾಕಷ್ಟು ಜನರು ಪ್ರಯಾಣ ಮಾಡುತ್ತಿದ್ದಾರೆ. ಪ್ರತಿನಿತ್ಯ ಕೆಲಸಕ್ಕೆ ಹೋಗುವವರು ಮತ್ತು ದೂರದ ಸ್ಥಳಗಳಿಗೆ ಹೋಗುವವರು ಮೆಟ್ರೋ ಟ್ರೈನ್ ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಮ್ಮ ಮೆಟ್ರೋ ಬೆಲೆ ಗಗನಕ್ಕೆ ಏರಿಕೆಯಾಗಿದೆ. ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ನಮ್ಮ ಮೆಟ್ರೋ ಟಿಕೆಟ್ ದರವನ್ನು ಪರಿಷ್ಕರಣೆ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿ ಮೆಟ್ರೋ ಟಿಕೆಟ್ ಬೆಲೆಯಲ್ಲಿ ಏರಿಕೆ ಮಾಡಲಾಗಿತ್ತು. ಈ ನಡುವೆ ಸಾಕಷ್ಟು ಪ್ರಯಾಣಿಕರು ಮೆಟ್ರೋ ಟಿಕೆಟ್ ಬೆಲೆ ಇಳಿಕೆ ಮಾಡುವಂತೆ BMRCL ಬಳಿ ಮನವಿ ಮಾಡಿಕೊಂಡಿದ್ದರು. ಆದರೆ ಈಗ ಮತ್ತೆ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬೇಸರದ ಸುದ್ದಿ ಬಂದಿದೆ.
ಟಿಕೆಟ್ ಬೆಲೆ ಏರಿಕೆಯಿಂದ ಸಮಸ್ಯೆಗೆ ಸಿಲುಕಿದ ಪ್ರಯಾಣಿಕರು
ನಮ್ಮ ಮೆಟ್ರೋ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಟಿಕೆಟ್ ಬೆಲೆಯಲ್ಲಿ ಸಾಕಷ್ಟು ಏರಿಕೆ ಮಾಡಿದೆ. ಮೆಟ್ರೋ ಟಿಕೆಟ್ ಬೆಲೆ ಏರಿಕೆ ದಿನನಿತ್ಯ ಪ್ರಯಾಣ ಮಾಡುವ ಸಾಕಷ್ಟು ಪ್ರಯಾಣಿಕರ ತೊಂದರೆಗೆ ಕಾರಣವಾಗಿದೆ. ಈ ಹಿಂದೆ ನಮ್ಮ ಮೆಟ್ರೋ ಪ್ರಯಾಣಿಕರು ಟಿಕೆಟ್ ಬೆಲೆ ಇಳಿಕೆ ಮಾಡುವಂತೆ BMRCL ಬಳಿ ಮನವಿ ಮಾಡಿಕೊಂಡಿದ್ದರು. ಸದ್ಯ ಪ್ರಯಾಣಿಕರ ಮನವಿಯ ನಡುವೆಯೂ ಈಗ BMRCL ಮೆಟ್ರೋ ಪ್ರಯಾಣಿಕರಿಗೆ ಬೇಸರದ ಸುದ್ದಿ ನೀಡಿದೆ.
ಟಿಕೆಟ್ ಬೆಲೆ ಯಾವುದೇ ಕಾರಣಕ್ಕೂ ಇಳಿಕೆ ಆಗಲ್ಲ
ಲಕ್ಷಾಂತರ ಮೆಟ್ರೋ ಪ್ರಯಾಣಿಕರು ಟಿಕೆಟ್ ಬೆಲೆ ಇಳಿಕೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಪ್ರಯಾಣಿಕರು ಮನವಿ ಮಾಡಿಕೊಂಡರು ಕೂಡ BMRCL ಟಿಕೆಟ್ ಬೆಲೆಯನ್ನು ಯಾವುದೇ ಕಾರಣಕ್ಕೂ ಇಳಿಕೆ ಮಾಡಲಾಗುವುದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದೆ. ಕೆಲವು ಸಮಯಗಳ ಹಿಂದೆ ದರ ನಿಗದಿ ಸಮಿತಿಗೆ ಪ್ರಯಾಣಿಕರು ಟಿಕೆಟ್ ಬೆಲೆ ಇಳಿಕೆ ಮಾಡುವಂತೆ ಸಲಹೆ ಕೊಟ್ಟಿದ್ದರು, ಆದರೆ ಸಮಿತಿ ದರ ಇಳಿಕೆ ಮಾಡಲು ಸಾಧ್ಯವಿಲ್ಲ ಎಂದು ಉತ್ತರ ನೀಡಿದೆ.
ಟಿಕೆಟ್ ಬೆಲೆ ಇಳಿಕೆ ಮಾಡದಿದ್ದರೂ ಕಾರಣ
ಮೆಟ್ರೋ ನಿರ್ವಹಣೆಗೆ ಹಣಕಾಸಿನ ಅಗತ್ಯತೆ ಇದ್ದು, ದರ ಇಳಿಕೆಯಿಂದ ಸಮಸ್ಯೆ ಉಂಟಾಗಬಹುದು ಎಂಬುದು ಸಮಿತಿಯ ನಿಲುವು. ಮೆಟ್ರೋ ಮತ್ತು ನೌಕರರ ನಿರ್ವಹರಣೆಗೆ ಸಾಕಷ್ಟು ಹಣದ ಅಗತ್ಯ ಇರುವ ಕಾರಣ ಮೆಟ್ರೋ ಟಿಕೆಟ್ ಬೆಲೆಯನ್ನು ಯಾವುದೇ ಕಾರಣಕ್ಕೂ ಇಳಿಕೆ ಮಾಡಲು ಸಾಧ್ಯವಿಲ್ಲ ಎಂದು BMRCL ಈಗ ಸ್ಪಷ್ಟನೆ ಕೊಟ್ಟಿದೆ. ಬೆಂಗಳೂರು ಮೆಟ್ರೋ ಮತ್ತು ಬಸ್ ಟಿಕೆಟ್ ದರ ಏರಿಕೆಯಿಂದ ಸಾಮಾನ್ಯ ಜನತೆಗೆ ಹೊರೆ ಹೆಚ್ಚಾಗಿದೆ. ಪ್ರಯಾಣಿಕರು ದರ ಕಡಿಮೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ.
ವಿದ್ಯಾರ್ಥಿಗಳಿಗೂ ಬೇಸರದ ಸುದ್ದಿ ನೀಡಿದ BMRCL
ಮೆಟ್ರೋ ಪ್ರಯಾಣಿಕರು ತಿಂಗಳ ಪಾಸ್ ಮತ್ತು ವಿದ್ಯಾರ್ಥಿಗಳು ಪ್ರತ್ಯೇಕ ಸಿಂಗಲ್ ಪಾಸ್ ಕೊಡುವಂತೆ BMRCL ಬಳಿ ಮನವಿ ಮಾಡಿಕೊಂಡಿದ್ದರು. ಆದರೆ BMRCL ತಿಂಗಳ ಪಾಸ್ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅಷ್ಟೇ ಮಾತ್ರವಲ್ಲದೆ ವಿದ್ಯಾರ್ಥಿಗಳಿಗೂ ಕೂಡ ಸಿಂಗಲ್ ಪಾಸ್ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ ಶಿಕ್ಷಣ ಸಂಸ್ಥೆಗಳು ಅನುಮೋದನೆ ನೀಡಿದರೆ ವಿದ್ಯಾರ್ಥಿಗಳು ಗ್ರೂಪ್ ಪಾಸ್ ಮಾಡಿಸಿಕೊಳ್ಳಬಹುದು. ಗ್ರೂಪ್ ವಿದ್ಯಾರ್ಥಿಗಳಿಗೆ ಸ್ವಲ್ಪ ಮಟ್ಟಿಗೆ ರಿಯಾಯಿತಿ ನೀಡಲಿದೆ. ಒಟ್ಟಾರೆಯಾಗಿ, ಮೆಟ್ರೋ ಪ್ರಯಾಣಿಕರು ದರ ಇಳಿಕೆಗಾಗಿ ಎದುರುನೋಡುತ್ತಿದ್ದರೂ, ಆದರೆ ಸಮಿತಿ ಮತ್ತು BMRCL ನಿರ್ಧಾರದಿಂದ ನಿರಾಸೆಯಾಗಿದೆ. ಮುಂದೆ ಯಾವ ಬದಲಾವಣೆ ಬರುತ್ತದೆ ಎಂದು ಕಾದುನೋಡಬೇಕು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

