Top 3 Budget Cars Under 10 Lakhs: ಈಗಿನ ಕಾಲದಲ್ಲಿ ಹೆಚ್ಚಿನವರ ಮನೆಯಲ್ಲಿ ಯಾವುದಾದರೂ ಒಂದು ಕಾರ್ ಇದ್ದೆ ಇರುತ್ತದೆ ಎಂದು ಹೇಳಬಹುದು. ತಮ್ಮ ಕುಟುಂಬಕ್ಕಾಗಿ ಮತ್ತು ತಮ್ಮ ವ್ಯಾವಹಾರಿಕ ಉದ್ದೇಶದಿಂದ ಈಗಿನ ಕಾಲದ ಜನರು ಕಾರ್ ಖರೀದಿ ಮಾಡಲು ಹೆಚ್ಚು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇದರ ನಡುವೆ ಹಲವು ಕಾರ್ ತಯಾರಕ ಕಂಪನಿಗಳು ಹಲವು ಕಾರುಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ. ಇನ್ನು ಕಾಲದ ಜನರು ಬಜೆಟ್ ಬೆಲೆಗೆ ಹೆಚ್ಚು ಮೈಲೇಜ್ ಕೊಡುವ ಕಾರುಗಳನ್ನು ಖರೀದಿ ಮಾಡಲು ಬಯಸುತ್ತಾರೆ. ನಾವು ಈಗ ನಿಮಗೆ 10 ಲಕ್ಷದ ಒಳಗೆ ಸಿಗುವ ಬಜೆಟ್ ಕಾರುಗಳ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಈ ಮೂರೂ ಕಾರುಗಳು ದೇಶದಲ್ಲಿ ಅತೀ ಹೆಚ್ಚು ಮಾರಾಟ ಕಾಣುತ್ತಿರುವ ಬಜೆಟ್ ಬೆಲೆಯ ಕಾರುಗಳು ಅನಿಸಿಕೊಂಡಿದೆ.
ಮಾರುತಿ ಸುಜುಕಿ Fronx ಹೈಬ್ರಿಡ್ (Maruti Suzuki Fronx)
ಮಾರುತಿ ಸುಜುಕಿ ಕಂಪನಿ ಹಲವು ವರ್ಷಗಳಿಂದ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಗೆ ಕಾರುಗಳನ್ನು ನೀಡುವುದರಲ್ಲಿ ಯಶಸ್ವಿಯಾಗಿದೆ. ಸಾಕಷ್ಟು ಕಡಿಮೆ ಬೆಲೆಯ ಕಾರುಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಿರುವ ಮಾರುತಿ ಸುಜುಕಿ ಈಗ Fronx ಅನ್ನುವ ಇನ್ನೊಂದು ಹೈಬ್ರಿಡ್ ಕಾರನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ. 2025 ರ ವರ್ಷದಲ್ಲಿ ದಾಖಲೆಯ ಮಾರಾಟ ಗಿಟ್ಟಿಸಿಕೊಂಡಿರುವ ಮಾರುತಿ ಸುಜುಕಿ Fronx ಕಾರನ್ನು ಜನರು 10 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಖರೀದಿ ಮಾಡಬಹುದು. 360 ಡಿಗ್ರಿ ಕ್ಯಾಮೆರಾ ಸೇರಿದಂತೆ CNG ಮಾದರಿಯಲ್ಲಿ ಈ ಕಾರಿನಲ್ಲಿ ಲಭ್ಯವಿದೆ ಮತ್ತು ಮಾರುತಿ ಸುಜುಕಿ Fronx ಕಾರು CNG ಮಾದರಿಯಲ್ಲಿ 32 ಕಿಲೋಮೀಟರ್ ಮೈಲೇಜ್ ಕೂಡ ಕೊಡಲಿದೆ.
ಕಡಿಮೆ ಬೆಲೆಗೆ ಖರೀದಿಸಿ ಹುಂಡೈ ವೆನ್ಯೂ (Hyundai Venue)
ಹುಂಡೈ ಕಂಪನಿ ಕೂಡ ಸಾಕಷ್ಟು ವರ್ಷಗಳಿಂದ ಜನರ ವಿಶ್ವಾಸ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹುಂಡೈ ಕಂಪನಿಯ ಕಾರುಗಳು ಶಕ್ತಿಶಾಲಿ ಕಾರುಗಳು ಆಗಿದೆ ಮತ್ತು 10 ಲಕ್ಷದ ಒಳಗೆ ನೀವು ಹುಂಡೈ ನಿಮಗೆ ಹುಂಡೈ ವೆನ್ಯೂ ಕಾರ್ ಖರೀದಿ ಮಾಡಬಹುದು. ಹುಂಡೈ ವೆನ್ಯೂ SUV ಕಾರ್ ಆಗಿದ್ದು ಹಲವು ಆಧುನಿಕ ವಿಶೇಷತೆಗಳನ್ನು ನಾವು ಈ ಕಾರಿನಲ್ಲಿ ನೋಡಬಹುದು. 10 ಲಕ್ಷದ ಒಳಗೆ ನೀವು ಕಾರ್ ಖರೀದಿ ಮಾಡಬೇಕು ಅಂದರೆ ನಿಮಗೆ ಹುಂಡೈ ವೆನ್ಯೂ ಕಾರ್ ಕೂಡ ಒಂದು ಉತ್ತಮವಾದ ಆಯ್ಕೆ ಆಗಿದೆ ಎಂದು ಹೇಳಬಹುದು. ಪೆಟ್ರೋಲ್ ಮತ್ತು ಡೀಸೆಲ್ ಮಾದರಿಯಲ್ಲಿ ನಿಮಗೆ ಹುಂಡೈ ವೆನ್ಯೂ ಕಾರ್ ಲಭ್ಯವಿದ್ದು ಈ ಕಾರ್ ಸುಮಾರು 15 ರಿಂದ 17 ಕಿಲೋಮೀಟರ್ ಮೈಲೇಜ್ ಕೊಡುತ್ತದೆ.
ರೆನಾಲ್ಟ್ Kiger Facelift (Renault Kiger Facelift)
ರೆನಾಲ್ಟ್ ಕಂಪನಿಯ ಜನಪ್ರಿಯ ಕಾರ್ ಆಗಿರುವ ರೆನಾಲ್ಟ್ Kiger ಕಾರು ಬಡವರ ಬಂಧು ಅನಿಸಿಕೊಂಡಿದೆ. ನಿಮಗೆ ಕಡಿಮೆ ಬೆಲೆಗೆ ಕಾರ್ ಖರೀದಿಸುವ ಆಸೆ ಇದ್ದರೆ ನೀವು 10 ಲಕ್ಷದ ಒಳಗಿನ ಈ ರೆನಾಲ್ಟ್ Kiger ಖರೀದಿ ಮಾಡಬಹುದು. ರೆನಾಲ್ಟ್ Kiger SUV ಕಾರ್ ಆಗಿದ್ದು ನಿಮಗೆ ಹಲವು ಆಯ್ಕೆಗಳಲ್ಲಿ ಈ ಕಾರ್ ಲಭ್ಯವಿದೆ. 10 ಲಕ್ಷದ ಒಳಗೆ ರೆನಾಲ್ಟ್ Kiger ಕಾರ್ ನಿಮಗೆ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಯಲ್ಲಿ ಲಭ್ಯವಿದ್ದು ನೀವು ಹಲವು ಬಣ್ಣಗಳ ಆಯ್ಕೆಯಲ್ಲಿ ಕಾರ್ ಖರೀದಿ ಮಾಡಬಹುದು. 10 ಲಕ್ಷದ ಒಳಗೆ ಸಿಗುವ ರೆನಾಲ್ಟ್ Kiger ಕಾರು ನಿಮಗೆ 15 ರಿಂದ 20 ಕಿಲೋಮೀಟರ್ ಮೈಲೇಜ್ ಕೊಡಲಿದೆ.