Udyogini Scheme Eligibility: ಉದ್ಯೋಗಿನಿ ಯೋಜನೆ ಇದು ಮಹಿಳೆಯರಿಗೆ ಸ್ವಂತ ಉದ್ಯೋಗವನ್ನು ಮಾಡಲು ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದ ಯೋಜನೆಯಾಗಿದೆ. ಭಾರತ ಸರ್ಕಾರವು ಮಹಿಳಾ ಸಬಲೀಕರಣ ಮತ್ತು ಸ್ವಾವಲಂಬನೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಈ ಕಾರಣಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಜಾರಿಯಲ್ಲಿರುವ ಈ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಮಹಿಳೆಯರು 3 ಲಕ್ಷ ತನಕ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. 3 ಲಕ್ಷ ರೂಪಾಯಿ ಸಾಲವನ್ನು ಅತೀ ಕಡಿಮೆ ಬಡ್ಡಿದರದಲ್ಲಿ ಪಡೆದುಕೊಳ್ಳಬಹುದು ಮತ್ತು ಕೆಲವು ವಿಶೇಷ ವರ್ಗದ ಮಹಿಳೆಯರು ಯಾವುದೇ ಬಡ್ಡಿ ಇಲ್ಲದೆ ಕೂಡ ಈ ಯೋಜನೆಯ ಅಡಿಯಲ್ಲಿ ಸಾಲ ಪಡೆದುಕೊಳ್ಳಬಹುದು.
ಉದ್ಯೋಗಿನಿ ಯೋಜನೆ
ಕರ್ನಾಟಕ ರಾಜ್ಯ ಸರ್ಕಾರ ಉದ್ಯೋಗಿನಿ ಯೋಜನೆಯ ಮೂಲಕ ಮಹಿಳೆಯರಿಗೆ 30,000 Rs ವರೆಗೆ ಆರ್ಥಿಕ ಸಹಾಯವನ್ನು ನೀಡುತ್ತದೆ. ಹೆಚ್ಚಿನ ಸಹಾಯದ ಅಗತ್ಯವಿದ್ದರೆ, ಈ ಯೋಜನೆಯ ಮೂಲಕ ಮಹಿಳೆಯರು 3 ಲಕ್ಷದವರೆಗೆ ಸಾಲವನ್ನು ಪಡೆಯಬಹುದು, ಇದನ್ನು ಸರ್ಕಾರವು ಯಾವುದೇ ಬಡ್ಡಿದರವಿಲ್ಲದೆ ಒದಗಿಸುತ್ತದೆ. ಮಹಿಳೆಯರ ಗಳಿಕೆಯನ್ನು ಹೆಚ್ಚಿಸಲು ಮತ್ತು ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ.
ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
* ರೇಷನ್ ಕಾರ್ಡ್
* ಆಧಾರ್ ಕಾರ್ಡ್
* ಆದಾಯ ಪ್ರಮಾಣ ಪತ್ರ
* ಜಾತಿ ಪ್ರಮಾಣ ಪತ್ರ
* ವ್ಯಾಪಾರ ಯೋಜನೆಯ ವರದಿ
* ಬ್ಯಾಂಕ್ ಪಾಸ್ ಬುಕ್
ಉದ್ಯೋಗಿನಿ ಯೋಜನೆಯ ಅರ್ಹತೆ
* ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
* ಇನ್ನು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು
* ಸಣ್ಣ ವ್ಯಾಪಾರಗಳಿಗೆ ಮಾತ್ರ
* 18 ರಿಂದ 55 ವರ್ಷದ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ
* ಕುಟುಂಬ ವಾರ್ಷಿಕ ಆದಾಯ 1.5 ಲಕ್ಷ ಕ್ಕಿಂತ ಕಡಿಮೆ ಆಗಿರಬೇಕು (SC / ST ಮಹಿಳೆಯರಿಗೆ 2 ಲಕ್ಷ ತನಕ ಅವಕಾಶ ಇದೆ)
* ವಿಧವೆಯರು ಮತ್ತು ಅಂಗವಿಕಲ ಮಹಿಳೆಯರಿಗೆ ಆದಾಯ ಮಿತಿ ಇಲ್ಲ.
* ಈ ಹಿಂದೆ ಯಾವುದೇ ಸಾಲ ಡಿಪೋಲ್ಟ್ ಆಗಿರಬಾರದು
* ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ.
ಉದ್ಯೋಗಿನಿ ಯೋಜನೆಯ ಪ್ರಯೋಜನ
* ಉದ್ಯೋಗಿನಿ ಯೋಜನೆಯನ್ನು ಕರ್ನಾಟಕ ಸ್ತ್ರೀ ಅಭಿವೃದ್ಧಿ ನಿಗಮ (KSWDC) ಕಾರ್ಯಗತಗೊಳಿಸುತ್ತದೆ.
* KSWDC ಅಡಿಯಲ್ಲಿ ಮಹಿಳೆಯರಿಗೆ ಗರಿಷ್ಠ 3 ಲಕ್ಷ ರೂಪಾಯಿ ಸಾಲ ಸಿಗುತ್ತದೆ.
* ವಿಶೇಷ ವರ್ಗದ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ಲಭ್ಯ.
* ಸಾಮಾನ್ಯ ವರ್ಗಕ್ಕೆ 30% ಸಬ್ಸಿಡಿ, ಪರಿಶಿಷ್ಟ ಜಾತಿ / ಪಂಗಡಕ್ಕೆ 50% ಸಬ್ಸಿಡಿ ಸಿಗುತ್ತದೆ.
* ವಿಧವೆಯರು, ಅಂಗವಿಕಲರು ಮತ್ತು ದುಸ್ಥಿತಿಯಲ್ಲಿರುವ ಮಹಿಳೆಯರಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತದೆ.
ಈ ರೀತಿಯಾಗಿ ಅರ್ಜಿ ಸಲ್ಲಿಸಿ
*.ಅರ್ಜಿ ಪ್ರಕ್ರಿಯೆ ಆಫ್ ಲೈನ್ ಮೂಲಕ ನೆಡೆಸಲಾಗುತ್ತದೆ.
* ಅರ್ಜಿ ಸಲ್ಲಿಸಲು ನೀವು ಜಿಲ್ಲಾ ಕೈಗಾರಿಕಾ ಕೇಂದ್ರಗಳು (DIC) ಅಥವಾ ಕರ್ನಾಟಕ ರಾಜ್ಯ ಹಣಕಾಸು ನಿಗಮ (KSFC) ಕಚೇರಿಗಳಿಂದ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕು.
* ಆ ಫಾರ್ಮ್ ಭರ್ತಿ ಮಾಡಿ, ID ಪುರಾವೆ, ಆದಾಯ ಪುರಾವೆ, ಯೋಜನಾ ವರದಿಯಂತಹ ದಾಖಲೆಗಳನ್ನು ಲಗತ್ತಿಸಿ ಮತ್ತು ಪ್ರಕ್ರಿಯೆಗಾಗಿ ಮಹಿಳಾ ಅಭಿವೃದ್ಧಿ ನಿಗಮ ಕಚೇರಿ ಅಥವಾ ಸಂಬಂಧಿತ ಬ್ಯಾಂಕ್ ಗಳಿಗೆ ನೀಡಬೇಕು.
* ಅನುಮೋದನೆಯ ನಂತರ ಸಾಲದ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
* ಆಯ್ಕೆಯಾದ ಅಭ್ಯರ್ಥಿಗಳಿಗೆ 3 ರಿಂದ 6 ದಿನಗಳ ಉದ್ಯಮಶೀಲತೆ ತರಬೇತಿ ನೀಡಲಾಗುತ್ತದೆ.
* ಹೆಚ್ಚಿನ ಮಾಹಿತಿಗಾಗಿ https://kswdc.karnataka.gov.in/ ಗೆ ಭೇಟಿ ನೀಡಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

