Jio vs Airtel Comparison: ಇತ್ತೀಚಿನ ದಿನಗಳಲ್ಲಿ ರಿಲಯನ್ಸ್ ಜಿಯೋ, ಏರ್ಟೆಲ್ ಹಾಗೆ ವೊಡಾಫೋನ್ ಐಡಿಯಾ ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳಲು ಅನೇಕ ರಿಚಾರ್ಜ್ ಪ್ಲ್ಯಾನ್ ಗಳನ್ನು ಘೋಷಣೆ ಮಾಡಿದೆ. ಇದೀಗ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್ಟೆಲ್ ನ 84 ದಿನಗಳ ರಿಚಾರ್ಜ್ ಯೋಜನೆ ಬಿಡುಗಡೆ ಮಾಡಿದ್ದು ಗ್ರಾಹಕರು ಗೊಂದಲಕ್ಕೆ ಒಳಗಾಗಿದ್ದಾರೆ. ಜಿಯೋ ಕಂಪಿನೈಗೆ ಪೈಪೋಟಿ ಕೊಡುವಂತೆ ಈಗ ಏರ್ಟೆಲ್ ಕಡಿಮೆ ಬೆಲೆಗೆ 84 ದಿನಗಳ ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದೆ. ಹಾಗಾದರೆ ಜಿಯೋ ಮತ್ತು ಏರ್ಟೆಲ್ ನಲ್ಲಿ ಯಾವುದು ಬೆಸ್ಟ್ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರ್ತಿ ಏರ್ಟೆಲ್ ಹಾಗೂ ರಿಲಯನ್ಸ್ ಜಿಯೋ
ಏರ್ಟೆಲ್ ಮತ್ತು ಜಿಯೋ ದೇಶದಲ್ಲಿ ಅತೀ ಗ್ರಾಹಕರು ಬಳಕೆ ಮಾಡುವ ಟೆಲಿಕಾಂ ನೆಟ್ವರ್ಕ್ ಆಗಿದೆ. ಏರ್ಟೆಲ್ ಹಾಗು ಜಿಯೋ ನಡುವೆ ಇರುವ ಸ್ವಲ್ಪ ಮಟ್ಟಿನ ವ್ಯತ್ಯಾಸದ ಬಗ್ಗೆ ತಿಳಿದುಕೊಳ್ಳೋಣ.
* ನೆಟ್ವರ್ಕ್
ಸ್ಥಿರ ನೆಟ್ವರ್ಕ್, ಉತ್ತಮ ಕರೆ ಅನುಭವವನ್ನು ಏರ್ಟೆಲ್ ನೀಡುತ್ತದೆ. ಇನ್ನು ಜಿಯೋ ವ್ಯಾಪಕ 4G/ 5G ಕವರೇಜ್ ಹೊಂದಿದ್ದು, ಕಡಿಮೆ ಬೆಲೆಗೆ ರಿಚಾರ್ಜ್ ಯೋಜನೆ ಬಿಡುಗಡೆ ಮಾಡುವಲ್ಲಿ ಹೆಸರುವಾಸಿಯಾಗಿದೆ.
* ಇಂಟರ್ನೆಟ್
ಏರ್ಟೆಲ್ ಸಮರ್ಪಕ ಹಾಗೆ ಸ್ಥಿರ ವೇಗವನ್ನು ಪಡೆದುಕೊಂಡಿದೆ. ಆದರೆ ಜಿಯೋ ಹೆಚ್ಚು ವೇಗದ ಡೇಟಾವನ್ನು ನೀಡುತ್ತದೆ. ವೇಗದ ಡೇಟಾ ಬಳಕೆ ಮಾಡುವವರು ಹೆಚ್ಚಾಗಿ ಜಿಯೋ ಸಿಮ್ ಬಳಕೆ ಮಾಡುತ್ತಾರೆ.
* 5G ಸೇವೆ
ಏರ್ಟೆಲ್ ಪ್ರಮುಖ ನಗರಗಳಲ್ಲಿ ಮಾತ್ರ 5G ಸೇವೆಯನ್ನು ನೀಡುತ್ತದೆ. ಜಿಯೋ ಭಾರತದೆಲ್ಲೆಡೆ 5G ಸೇವೆಯನ್ನು ನೀಡುತ್ತದೆ.
* ರಿಚಾರ್ಜ್ ಬೆಲೆ
ಏರ್ಟೆಲ್ ನ ರಿಚಾರ್ಜ್ ಪ್ಲಾನ್ ಸ್ವಲ್ಪ ದುಬಾರಿ ಆಗಿದೆ. ಜಿಯೋ ಕಡಿಮೆ ಬೆಲೆಗೆ ಮೌಲ್ಯಯುತ ರಿಚಾರ್ಜ್ ನೀಡುತ್ತದೆ.
* OTT ಸೌಲಭ್ಯಗಳು
ಏರ್ಟೆಲ್ ನಲ್ಲಿ Netflix, Amazon Prime, Airtel Xstream ಲಭ್ಯವಿದೆ. ಜಿಯೋದಲ್ಲಿ JioCinema, JioTV, JioSaavn ಲಭ್ಯವಿದೆ.
* ಗ್ರಾಮೀಣ ಪ್ರದೇಶದಲ್ಲಿ ನೆಟ್ವರ್ಕ್
ಏರ್ಟೆಲ್ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ನೆಟ್ವರ್ಕ್ ನೀಡುತ್ತದೆ, ಆದರೆ ಜಿಯೋ ಕೆಲವು ಹಳ್ಳಿ ಮತ್ತು ಗ್ರಾಮೀಣ ಪ್ರದೇಶದ ನೆಟ್ವರ್ಕ್ ಸಮಸ್ಯೆ ಹೊಂದಿದೆ ಅನ್ನುವುದು ಕೆಲವು ಗ್ರಾಹಕರ ಅಭಿಪ್ರಾಯವಾಗಿದೆ.
ಉತ್ತಮ ಕರೆ ಗುಣಮಟ್ಟ ಮತ್ತು ಗ್ರಾಹಕ ಸೇವೆ ಬೇಕಾದರೆ ಏರ್ಟೆಲ್ ಉತ್ತಮವಾಗಿದೆ. ಕಡಿಮೆ ಬೆಲೆ, ವೇಗದ ಡೇಟಾ ಮತ್ತು ಉಚಿತ 5G ಬೇಕಾದರೆ ಜಿಯೋ ಉತ್ತಮವಾಗಿದೆ.
ಜಿಯೋ 889 ರೂಪಾಯಿ ರಿಚಾರ್ಜ್ ಯೋಜನೆ
* ಜಿಯೋ ದ ಈ ರಿಚಾರ್ಜ್ ಪ್ಲ್ಯಾನ್ ನಲ್ಲಿ ಅನಿಯಮಿತ ಕರೆ
* ಪ್ರತಿ ದಿನ 2 GB ಡೇಟಾ (ಒಟ್ಟು 168 GB)
* 84 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ
* ಪ್ರತಿದಿನ 100 SMS ಉಚಿತ
* ಅನ್ಲಿಮಿಟೆಡ್ 5G ಡೇಟಾ ಲಭ್ಯವಿದೆ
* ಇದೆಲ್ಲದರ ಜೊತೆಗೆ, Jio TV, Jio Cinema ಹಾಗೆ Jio Cloud ಸೇವೆಗಳು ಉಚಿತವಾಗಿ ಸಿಗುತ್ತದೆ.
ಏರ್ಟೆಲ್ ನ 859 ರೂಪಾಯಿ ರಿಚಾರ್ಜ್ ಯೋಜನೆ
* ಅನಿಯಮಿತ ಕರೆಯ ಸೌಲಭ್ಯ
* ಪ್ರತಿ ದಿನ 1.5 GB ಡೇಟಾ (ಒಟ್ಟು 126 GB ಡೇಟಾ)
* 84 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ
* ಪ್ರತಿ ದಿನ 100 SMS ಉಚಿತ
* ಅನಿಯಮಿತ 5G ಡೇಟಾ ಲಭ್ಯ
* Wynk Music and Airtel Xstream app ಉಚಿತವಾಗಿ ಸಿಗುತ್ತದೆ.
ಏರ್ಟೆಲ್ ಮತ್ತು ಜಿಯೋ ಎರದಲ್ಲಿ ಯಾವುದು ಉತ್ತಮ?
* ಹೆಚ್ಚು ಡೇಟಾ ಬಳಕೆ ಮಾಡುವವರಿಗೆ ಜಿಯೋ ಉತ್ತಮವಾಗಿದೆ. ಬೆಲೆ ಸ್ವಲ್ಪ ಹೆಚ್ಚಾದರೂ ಡೇಟಾ ಹೆಚ್ಚು ಸಿಗುತ್ತದೆ.
* ಏರ್ಟೆಲ್ ನಲ್ಲಿ OTT Subscription ಗಳು ಹೆಚ್ಚು ಸಿಗುತ್ತದೆ.
* ಸಾಮಾನ್ಯ ಬಳಕೆ ಮಾಡುವವರಿಗೆ ಏರ್ಟೆಲ್ ಉತ್ತಮ ಆಯ್ಕೆ ಆಗಿದೆ.
* ಎರಡು ಕಂಪನಿಗಳಲ್ಲಿ ಅನಿಯಮಿತ 5g ಡೇಟಾ ಸಿಗುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

