Venkatesh Iyer RCB 7 Crore: ಮಂಗಳವಾರ (17/ 12/ 2025) ಅಬುಧಾಬಿಯಲ್ಲಿ ನಡೆದ IPL 2026 ರ ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಭಾರತೀಯ ಆಲ್ ರೌಂಡರ್ ವೆಂಕಟೇಶ್ ಅಯ್ಯರ್ (Venkatesh Iyer) ಅವರನ್ನು 7 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ವಾಸ್ತವವಾಗಿ ಕಳೆದ ಬಾರಿಯ ಮೆಗಾ ಹರಾಜಿನಲ್ಲಿ ಇದೇ ವೆಂಕಟೇಶ್ಗಾಗಿ RCB ಹಾಗೂ KKR ನಡುವೆ ಭಾರಿ ಪೈಪೋಟಿ ನಡೆದಿತ್ತು. ಅಂತಿಮವಾಗಿ ಬಿಡ್ ಗೆಲ್ಲುವಲ್ಲಿ KKR ಯಶಸ್ವಿಯಾಗಿತ್ತು. ಈ ಬಾರಿಯೂ ಇದೇ ಎರಡು ತಂಡಗಳು ಪೈಪೋಟಿಗೆ ಬಿದ್ದಿದ್ದವು, ಆದರೆ ಈ ಬಾರಿ ಬಿಡ್ ಗೆದ್ದಿದ್ದು RCB, ಅದು ಭರ್ಜರಿ 7 ಕೋಟಿ ರೂಪಾಯಿಗೆ. ಹಾಗಾದರೆ RCB ವೆಂಕಟೇಶ್ ಅಯ್ಯರ್ 7 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿರುವುದು ಏಕೆ ಅನ್ನುವುದರ ಬಗ್ಗೆ ಕೆಲವು ಮಾಹಿತಿ ಇಲ್ಲಿದೆ.
ವೆಂಕಟೇಶ್ ಅಯ್ಯರ್ ಅವರ IPL ಪಯಣ
* ವೆಂಕಟೇಶ್ ಅಯ್ಯರ್ ಅವರ IPL ಪಯಣವು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮೂಲಕ 2021 ರಲ್ಲಿ ಅದ್ಭುತವಾಗಿ ಆರಂಭವಾಯಿತು. ಅಲ್ಲಿ ಅವರು ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ನಿಂದ ತಂಡವನ್ನು ಫೈನಲ್ ಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಕೇವಲ 10 ಪಂದ್ಯಗಳಲ್ಲಿ 370 ರನ್ ಗಳಿಸಿ ನಾಲ್ಕು ಅರ್ಧಶತಕ ಬಾರಿಸುತ್ತಾರೆ.
* 2023 ರಲ್ಲಿ ಶತಕ ಸಿಡಿಸಿದರು ಮತ್ತು 2024 ರಲ್ಲಿ ಚಾಂಪಿಯನ್ ಆದ KKR ತಂಡದಲ್ಲಿದ್ದರು, ಆದರೆ ದುಬಾರಿ ಬೆಲೆಗೆ (23.75 kooti ) ಖರೀದಿಸಲ್ಪಟ್ಟಿದ್ದರೂ 2025 ರಲ್ಲಿ ಫಾರ್ಮ್ ಕಳೆದುಕೊಂಡು ತಂಡದಿಂದ ಹೊರಗುಳಿಯಬೇಕಾಯಿತು.
* ಒಟ್ಟಾರೆ IPL ಕರಿಯರ್‌ನಲ್ಲಿ 62 ಪಂದ್ಯಗಳಲ್ಲಿ 1468 ರನ್ ಗಳಿಸಿದ್ದಾರೆ. ಸರಾಸರಿ 29.95 ಮತ್ತು ಸ್ಟ್ರೈಕ್ ರೇಟ್ 137.32. ಒಂದು ಶತಕ ಮತ್ತು 12 ಅರ್ಧಶತಕಗಳು ಅವರ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.
2025 ರಲ್ಲಿ ವೆಂಕಟೇಶ್ ಅಯ್ಯರ್ ಅವರ ಬೆಲೆ ಕುಸಿತಕ್ಕೆ ಕಾರಣ ಏನು?
IPL 2025 ಮೆಗಾ ಆಕ್ಷನ್ ನಲ್ಲಿ KKR ಅವರನ್ನು 23.75 ಕೋಟಿಗೆ ಖರೀದಿ ಮಾಡಿತ್ತು. ಆದರೆ ಋತುವಿನಲ್ಲಿ ಫಾರ್ಮ್ ಕಡಿಮೆಯಾಗಿ 11 ಪಂದ್ಯಗಳಲ್ಲಿ ಕೇವಲ 142 ರನ್ ಗಳಿಸಿದರು, ಇದರಿಂದ KKR ಅವರನ್ನು ರಿಲೀಸ್ ಮಾಡಿದೆ. ಆದರೆ ಇತ್ತೀಚಿನ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಧ್ಯಪ್ರದೇಶ ಪರ ವೆಂಕಟೇಶ್ ಅಯ್ಯರ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಟ್ರೋಫಿಯಲ್ಲಿ 211 ರನ್ ಗಳಿಸಿ ಎರಡು ಅರ್ಧಶತಕ ಬಾರಿಸಿದ್ದಾರೆ. ಆಕ್ಷನ್ ದಿನವೇ ಪಂಜಾಬ್ ವಿರುದ್ಧ 43 ಎಸೆತಗಳಲ್ಲಿ 70 ರನ್ ಗಳಿಸಿ ತಂಡಗಳ ಗಮನ ಸೆಳೆದಿದ್ದಾರೆ. ಬೇಸ್ ಪ್ರೈಸ್ 2 ಕೋಟಿ ಆಗಿದ್ದರೂ LSG, GT, KKR ಮತ್ತು RCB ನಡುವೆ ಬಿಡ್ಡಿಂಗ್ ವಾರ್ ನಡೆದು ಕೊನೆಗೆ RCB 7 ಕೋಟಿಗೆ ವೆಂಕಟೇಶ್ ಅಯ್ಯರ್ ಅವರನ್ನು ಖರೀದಿ ಮಾಡಿದೆ.
ವೆಂಕಟೇಶ್ ಅಯ್ಯರ್ ಅವರನ್ನು RCB ಗೆ ಆಯ್ಕೆ ಮಾಡಿಕೊಳ್ಳಲು ಕಾರಣ ಏನು?
* ಆಲ್ ರೌಂಡರ್ ಸಾಮರ್ಥ್ಯ
ಎಡಗೈ ಬ್ಯಾಟಿಂಗ್ ನಿಂದ ಮಧ್ಯಮ ಕ್ರಮಾಂಕದಲ್ಲಿ ಬಲ ತಂದುಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್ ನಲ್ಲಿ ಆರನೇ ಸ್ಥಾನದಲ್ಲಿ ಆಯ್ಕೆ ಆಗಿದ್ದಾರೆ. ಬ್ಯಾಟಿಂಗ್ ಬೌಲಿಂಗ್ ಎರಡು ಇರುವ ಕಾರಣ ವೆಂಕಟೇಶ್ ಅಯ್ಯರ್ RCB ತಂಡಕ್ಕೆ ಒಂದು ರೀತಿಯಲ್ಲಿ ಆನೆಬಲ ಎಂದು ಹೇಳಬಹುದು.
* ಮಿನಿ ಹರಾಜಿನಲ್ಲಿ ಉತ್ತಮ ಡೀಲ್
ಕಳೆದ ಮೆಗಾ ಆಕ್ಷನ್‌ನಲ್ಲಿ 23.75 ಕೋಟಿ ರೂಪಾಯಿಗೆ KKR ಗೆ ಹೋಗಿದ್ದ ಅವರು ಈ ಬಾರಿ ಬೆಲೆಯಲ್ಲಿ ಭಾರಿ ಕುಸಿತ ಕಂಡಿದ್ದಾರೆ. ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಆಲ್ ರೌಂಡರ್ ವೆಂಕಟೇಶ್ ಅಯ್ಯರ್ ಅವರನ್ನು 7 ಕೋಟಿ ರೂಪಾಯಿಗೆ ಖರೀದಿ ಮಾಡಿದೆ.
* ತಂಡದ ಬ್ಯಾಲೆನ್ಸ್
RCB ಗೆ ಭಾರತೀಯ ಆಲ್ ರೌಂಡರ್ ಅಗತ್ಯವಿತ್ತು. ವಿರಾಟ್ ಕೊಹ್ಲಿ, ರಜತ್ ಪಾಟೀದಾರ್ ಜೊತೆ ಸೇರಿ ಬ್ಯಾಟಿಂಗ್ ಲೈನಪ್ ಬಲಪಡಿಸಲು ಸಮರ್ಥರು. ವೆಂಕಟೇಶ್ ಅಯ್ಯರ್ ಸೇರ್ಪಡೆಯಿಂದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ಬಲಿಷ್ಠವಾಗಲಿವೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

