Realme 16 Pro Series Launch In india: ದೇಶದಲ್ಲಿ ಜನಪ್ರಿಯ ಸ್ಮಾರ್ಟ್ ಫೋನ್ ಕಂಪನಿಗಳಾದ ವಿವೊ, ಒನ್ ಪ್ಲಸ್, ಮೊಟೊರೊಲಾ, ಐಫೋನ್, ಸ್ಯಾಮ್ ಸಂಗ್ ಹೊಸ ಹೊಸ ಸ್ಮಾರ್ಟ್ ಫೋನ್ ಗಳನ್ನೂ ಬಿಡುಗಡೆ ಮಾಡುತ್ತಿರುತ್ತವೆ. ಹಾಗೆ ಹೊಸ ಫೋನ್ ಖರೀದಿ ಮಾಡಬೇಕು ಅನ್ನುವ ಆಸೆ ಎಲ್ಲರಲ್ಲೂ ಇರುತ್ತದೆ. ಇದೀಗ ರಿಯಲ್ ಮೀ ಕಂಪನಿಯ ಒಂದು ಹೊಸ ಸ್ಮಾರ್ಟ್ ಫೋನ್ ಶೀಘ್ರದಲ್ಲೇ ಭಾರತದಲ್ಲಿ ಲಾಂಚ್ ಆಗಲಿದೆ. ಇದೀಗ ರಿಯಲ್ ಮೀ ಕಂಪನಿ ಆ ಹೊಸ ಸ್ಮಾರ್ಟ್ ಫೋನ್ ಬಗ್ಗೆ ಕೆಲವು ಮಾಹಿತಿಯನ್ನ ಬಿಡುಗಡೆ ಮಾಡಿದೆ. Realme ಕಂಪನಯ್ಯ ಈ ಮೊಬೈಲ್ ಫೀಚರ್ ಕಂಡು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗಾದರೆ Realme ಲಾಂಚ್ ಮಾಡುತ್ತಿರುವ ಆ ಹೊಸ ಮೊಬೈಲ್ ಯಾವುದು ಮತ್ತು ಫೀಚರ್ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Realme New Smartphone
ರಿಯಲ್ ಮೀ ಕಂಪನಿ ರಿಯಲ್ ಮೀ 16 ಪ್ರೋ 5G ಮತ್ತು ರಿಯಲ್ ಮೀ 16 ಪ್ರೋ+ 5G ಸ್ಮಾರ್ಟ್ ಫೋನ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಈ ರಿಯಲ್ ಮೀ 16 ಪ್ರೋ 5G ಮತ್ತು 16 ಪ್ರೋ+ 5G ಇವೆರಡೂ ಪ್ರೀಮಿಯಂ ಫೀಚರ್ಸ್, Curved AMOLED display, ಮತ್ತು 5G ಕನೆಕ್ಟಿವಿಟಿ ಹೊಂದಿರುವ ಹೊಸ ಫೋನ್‌ಗಳಾಗಿವೆ. ನಾವೀಗ ಈ ಸ್ಮಾರ್ಟ್ ಫೋನ್ ನ ಡಿಸೈನ್ ಹಾಗೆ ಯಾವ ಯಾವ ಬಣ್ಣಗಳಲ್ಲಿ ಲಭ್ಯವಿದೆ ಅನ್ನುವ ಬಗ್ಗೆ ಮಾಹಿತಿಯನ್ನ ತಿಳಿದುಕೊಳ್ಳೋಣ.
Realme ಮೊಬೈಲ್ ಡಿಸೈನ್
ಈ ರಿಯಲ್ ಮೀ ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ಸ್ಕ್ವೇರ್ ಆಕಾರದಲ್ಲಿ ಕ್ಯಾಮರವನ್ನು ಅಳವಡಿಸಲಾಗಿದೆ. ಇದರಲ್ಲಿ ಮೂರೂ ಕ್ಯಾಮರಾ ಮತ್ತು ಒಂದು LED ಪ್ಲಾಶ್ ಲೈಟ್ ಅಳವಡಿಸಲಾಗಿದೆ. ಪವರ್ ಬಟನ್ ಮತ್ತು ವಾಲ್ಯೂಮ್ ಕೀ ಗಳನ್ನೂ ಬಲ ಸೈಡ್ ನಲ್ಲಿ ನೀಡಲಾಗಿದೆ. ರಿಯಲ್ ಮೀ ಬ್ರ್ಯಾಂಡಿಂಗ್ ಬಲಭಾಗದಲ್ಲಿ ಕಾಣುತ್ತದೆ. ಇನ್ನು ರಿಯಲ್ ಮೀ 16 ಪ್ರೋ+ 5G ಮಾಡೆಲ್ ಸ್ನಾಪ್ ಡ್ರಾಗನ್ ಚಿಪ್ ಸೆಟ್ ನೊಂದಿಗೆ ಬರುತ್ತದೆ. ಇದು ಸ್ನಾಪ್ ಡ್ರಾಗನ್ 7 ಜೆನ್ 4 ಗಿಂತ ಉತ್ತಮ ಪ್ರದರ್ಶನ ನೀಡುತ್ತದೆ. ಎರಡೂ ಮಾಡೆಲ್ ಗಳಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇದ್ದು, ಪ್ರೋ + ಮಾಡೆಲ್ 10x ಜೂಮ್ ಸಾಮರ್ಥ್ಯ ಪಡೆದುಕೊಂಡಿದೆ. ಈ ರಿಯಲ್ ಮೀ ಸ್ಮಾರ್ಟ್ ಫೋನ್ ನಲ್ಲಿ AI Edit Genie 2.0 ಪಿಚರ್ ಅಳವಡಿಸಲಾಗಿದೆ. ಹಾಗೆ ಇದರಲ್ಲಿ ಇದರಲ್ಲಿ AI ಸ್ಟೈಲ್ ಮೀ ಮತ್ತು AI ಲೈಟ್ ಮೀ ಇಮೇಜ್ ಎಡಿಟಿಂಗ್ ಟೂಲ್‌ಗಳಿವೆ.
ಬಣ್ಣಗಳ ಆಯ್ಕೆ
ರಿಯಲ್ ಮೀ ಸ್ಮಾರ್ಟ್ ಫೋನ್ ಪ್ರೋ ಸೀರೀಸ್ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ. ಅವುಗಳೆಂದರೆ, Master Gold, Master Gray, Camellia Pink and Orchid Purple. ಈ ಫೋನ್ ಗಳು ಫ್ಲಿಪ್ ಕಾರ್ಟ್ ಮತ್ತು ರಿಯಲ್ ಮೀ ಅಧಿಕೃತ ವೆಬ್ ಸೈಟ್ ಗಳಲ್ಲಿ ಮಾರಾಟ ಆಗಲಿದೆ. ಹೊಸ ಮೊಬೈಲ್ ಖರೀದಿಸುವವರಿಗೆ ಸ್ವಲ್ಪ ಕಾಯಿರಿ, ಏಕೆ ಅಂದರೆ ಈ ಮೊಬೈಲ್ ಫೀಚರ್ ನಿಮ್ಮನ್ನು ಆಕರ್ಷಣೆ ಮಾಡಬಹುದು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

