Credit Card Charegs And Disadvantages: ಕ್ರೆಡಿಟ್ ಕಾರ್ಡ್, ಇದು ಬ್ಯಾಂಕ್ ನೀಡುವ ಪಾವತಿ ಕಾರ್ಡ್ ಆಗಿದೆ. ಕ್ರೆಡಿಟ್ ಕಾರ್ಡುಗಳು ಸರಕು ಅಥವಾ ಸೇವೆಯನ್ನು ಖರೀದಿಸಲು ಹಾಗೆ ಹಣವನ್ನು ಹಿಂಪಡೆಯಲು ಸಹಾಯ ಮಾಡುತ್ತದೆ. ಕ್ರೆಡಿಟ್ ಕಾರ್ಡ್ ಪಡೆದುಕೊಂಡವರು ಕೆಲವು ಅಗತ್ಯ ಮಾಹಿತಿಯನ್ನು ಕಡ್ಡಾಯವಾಗಿ ತಿಳಿದುಕೊಳ್ಳಬೇಕು. ಕ್ರೆಡಿಟ್ ಕಾರ್ಡ್ ನಮ್ಮ ದೈನಂದಿನ ಜೀವನದಲ್ಲಿ ಬಹಳ ಸೌಲಭ್ಯ ನೀಡುತ್ತದೆ. ಆದರೆ ಕೆಲವು ಸ್ಥಳಗಳಲ್ಲಿ ನೀವು ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದರೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮುಖ್ಯವಾಗಿ ಈ 7 ಸ್ಥಳದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದರೆ ದೊಡ್ಡ ಮೊತ್ತದ ನಷ್ಟ ಅನುಭವಿಸಬೇಕಾಗುತ್ತದೆ. ಹಾಗಾದರೆ ಯಾವ 7 ಸ್ಥಳದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದರೆ ಅಪಾಯ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕ್ರೆಡಿಟ್ ಕಾರ್ಡ್ ಎಂದರೇನು?
ಕ್ರೆಡಿಟ್ ಕಾರ್ಡ್ ಎನ್ನುವುದು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ನೀಡಲಾಗುವ ಒಂದು ಸಾಲದ ಸಾಧನವಾಗಿದ್ದು, ಇದು ನಿಮಗೆ ಒಂದು ನಿರ್ದಿಷ್ಟ ಮಿತಿಯವರೆಗೆ ಹಣವನ್ನು ಸಾಲವಾಗಿ ಪಡೆದು, ತಕ್ಷಣವೇ ವಸ್ತುಗಳನ್ನು ಖರೀದಿಸಲು ಅಥವಾ ಸೇವೆಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ, ಆ ಮೊತ್ತವನ್ನು ನಿಗಧಿತಿದ ಸಮಯದ ಒಳಗೆ ಮರುಪಾವತಿ ಮಾಡಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್ ನಗದು ಹಣ ಲಭ್ಯವಿಲ್ಲದೆ ಇದ್ದರೂ ಕೂಡ ಆನ್ಲೈನ್ ಮತ್ತು ಆಫ್ ಲೈನ್ ಖರೀದಿಗಳಿಗೆ ಅನುಕೂಲಕರವಾಗಿದೆ, ಆದರೆ ಮರುಪಾವತಿ ಮಾಡದಿದ್ದರೆ ಬಡ್ಡಿ ವಿಧಿಸಲಾಗುತ್ತದೆ.
ಈ ಸ್ಥಳಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸದಿರಿ
* ಪೆಟ್ರೋಲ್ ಬಂಕ್ ನಲ್ಲಿ ಕಾರ್ಡ್ ಸ್ವೀಪ್ ಮಾಡುವಾಗ
ಪೆಟ್ರೋಲ್ ಬಂಕ್ ನಲ್ಲಿ ನೀವು ಕ್ರೆಡಿಟ್ ಕಾರ್ಡನ್ನು ಬಳಕೆ ಮಾಡಿದರೆ, ಸರ್ವಿಸ್ ಚಾರ್ಜ್ ಮತ್ತು GST ಹೆಚ್ಚಾಗಿ ಬರುತ್ತದೆ. ಇದರಿಂದ ಇಂಧನದ ಬೆಲೆ ಇನ್ನಷ್ಟು ಹೆಚ್ಚಾಗುತ್ತದೆ. POS ಯಂತ್ರಗಳಲ್ಲಿ ಸ್ಕಿಮ್ಮಿಂಗ್ ಸಾಧನ ಅಳವಡಿಸಿ ಕಾರ್ಡ್ ಮಾಹಿತಿ ಪಡೆದು ಕಳ್ಳತನ ಮಾಡುವ ಸಂದರ್ಭ ಇದೆ. POS ಯಂತ್ರದಲ್ಲಿ ಕಾರ್ಡ್ ಸ್ವೀಪ್ ಮಾಡಿದ ನೀವು ಕಾರ್ಡ್ ಪಿನ್ ಬದಲಾವಣೆ ಮಾಡುವುದು ಬಹಳ ಅವಶ್ಯಕ. ಕೆಲವು ಕ್ರೆಡಿಟ್ ಕಾರ್ಡುಗಳಲ್ಲಿ ಯಾವುದೇ ಶುಲ್ಕ ಇರುವುದಿಲ್ಲ. ಈ ಕಾರಣಗಳಿಂದ ನೀವು ಪೆಟ್ರೋಲ್ ಬಂಕ್ ನಲ್ಲಿ ಕಾರ್ಡ್ ಸ್ವೀಪ್ ಮಾಡುವ ಸಮಯದಲ್ಲಿ ಕಾರ್ಡಿನ ರೂಲ್ಸ್ ತಿಳಿದುಕೊಳ್ಳಬೇಕು.
* ATM ನಲ್ಲಿ ಹಣ ಹಿಂಪಡೆಯುವಾಗ
ಕ್ರೆಡಿಟ್ ಕಾರ್ಡ್ ನಿಂದ ATM ನಲ್ಲಿ ಕ್ಯಾಶ್ ಹಿಂಪಡೆದರೆ 2.5 ರಿಂದ 3 ಪ್ರತಿಶತ ಕ್ಯಾಶ್ ಅಡ್ವಾನ್ಸ್ ಶುಲ್ಕ ಬರುತ್ತದೆ. ಹಾಗೆ ಗ್ರೇಸ್ ಪೀರಿಯಡ್ ಇಲ್ಲದೇ ತಕ್ಷಣವೇ ಬಡ್ಡಿ ಆರಂಭವಾಗುತ್ತದೆ. ಉದಾಹರಣೆಗೆ, 10 ಸಾವಿರ ರೂಪಾಯಿ ಹಿಂಪಡೆದರೆ ಒಂದು ತಿಂಗಳಲ್ಲಿ ಹೆಚ್ಚುವರಿ ಬಡ್ಡಿ ಸೇರಿ ನಷ್ಟ ಉಂಟಾಗುತ್ತದೆ.
* ಮೊಬೈಲ್ ವಾಲೆಟ್ ಗಳಿಗೆ ಹಣ ಹಾಕುವಾಗ
Paytm , Phonepay , googlepay ಇತ್ಯಾದಿ ಮೊಬೈಲ್ ವಾಲೆಟ್ ಗಳಿಗೆ ಹಣ ತುಂಬುವಾಗ Convenience Fee ಹಾಗೆ GST ಹಾಕಲಾಗುತ್ತದೆ.
* IRCTC ವೆಬ್ ಸೈಟ ನಲ್ಲಿ ಟಿಕೆಟ್ ಬುಕ್ ಮಾಡುವಾಗ
ರೈಲು ಟಿಕೆಟ್ ಬುಕಿಂಗ್ ಸಮಯದಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ IRCTC ವೆಬ್ ಸೈಟ್ ನಲ್ಲಿ ಟೀಕೆ ಬುಕ್ ಮಾಡಿದರೆ, 1 ರಿಂದ 2% GST ಹಾಗೆ Payment gateway ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.
* ಅನುಮಾನಾಸ್ಪದ ವೆಬ್ ಸೈಟ್ ನಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಮಾಡುವುದು
ಸುರಕ್ಷಿತ ವಲ್ಲದ ವೆಬ್ ಸೈಟ್ ಗಳಲ್ಲಿ ಕ್ರೆಡಿಟ್ ಕಾರ್ಡ್ ವಿವರವನ್ನು ನೀಡುದು ಅಪಾಯಕ್ಕೆ ದಾರಿಯಾಗಿದೆ. ಇದರಲ್ಲಿ ಹ್ಯಾಕಿಂಗ್ ಅಥವಾ ಡೇಟಾ ಕಳ್ಳತನದ ಅಪಾಯಾ ಹೆಚ್ಚಾಗಿದೆ. ಹಾಗಾಗಿ ವಿಶ್ವಾಸಾರ್ಹ ವೆಬ್ ಸೈಟ್ ಗಳನ್ನೂ ಮಾತ್ರ ಬಳಕೆ ಮಾಡಿ.
* ಸಾಲ ಇರುವಾಗ ಹೊಸ ಖರ್ಚು ಮಾಡಬೇಡಿ
ಈಗಾಗಲೇ ಕ್ರೆಡಿಟ್ ಕಾರ್ಡ್ ನಲ್ಲಿ ಸಾಲ ಇದ್ದು ಹೊಸ ಖರ್ಚು ಮಾಡಬೇಡಿ, ಇದು ನೀವು ಸಾಲದ ಸುರುಳಿಗೆ ಸಿಲುಕುವಂತೆ ಮಾಡುತ್ತದೆ. ಡೆಬಿಟ್ ಕಾರ್ಡ್ ಅಥವಾ UPI ಬಳಸಿ ಬಜೆಟ್ ನಿಯಂತ್ರಣದಲ್ಲಿ ಇಟ್ಟುಕೊಳ್ಳಿ.
* ಬ್ಯಾಲೆನ್ಸ್ ಟ್ರಾನ್ಸ್ಫರ್ ಮಾಡುವಾಗ
ಒಂದು ಕಾರ್ಡ್ ನಿಂದ ಮತ್ತೊಂದು ಕಾರ್ಡ್ ಗೆ ಬ್ಯಾಲೆನ್ಸ್ ಟ್ರಾನ್ಸ್ಫರ್ ಮಾಡಿದರೆ ಪ್ರೊಸೆಸಿಂಗ್ ಪೀ ಮತ್ತು ಹೆಚ್ಚಿನ ಬಡ್ಡಿ ಪಾವತಿ ಮಾಡಬೇಕಾಗುತ್ತದೆ. ಈ ಕಾರಣಗಳಿಂದ ಕ್ರೆಡಿಟ್ ಕಾರ್ಡ್ ಮೂಲಕ Balance Transfer ಮಾಡುವುದು ಅಷ್ಟೊಂದು ಸಮಂಜಸವಲ್ಲ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

