Google Pay Flex Credit Card: ಭಾರತದಲ್ಲಿ ಡಿಜಿಟಲ್ ಪೇಮೆಂಟ್ಸ್ ಬಹಳ ಮುಂದುವರೆದಿದ್ದು ಪ್ರತಿಯೊಬ್ಬರೂ ಕೂಡ UPI ಸೇರಿದಂತೆ ಹಲವು ಡಿಜಿಟಲ್ ಪೇಮೆಂಟ್ ಮೂಲಕ ಹಣಕಾಸಿನ ವಹಿವಾಟು ಮಾಡುತ್ತಿದ್ದಾರೆ. ಇದರ ನಡುವೆ ಈಗ ಗೂಗಲ್ ಪೆ ತನ್ನ ಗ್ರಾಹಕರಿಗೆ ಹೊಸ ಯೋಜನೆಯನ್ನು ಜಾರಿಗೆ ತರುವುದರ ಮೂಲಕ ಗ್ರಾಹಕರ ಸಂತಸಕ್ಕೆ ಕಾರಣವಾಗಿದೆ. ಇನ್ನುಮುಂದೆ ಗೂಗಲ್ ಪೆ ಬಳಕೆ ಮಾಡುವವರು ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದೆ ಇದ್ದರೂ ಕೂಡ ಸುಲಭವಾಗಿ ಪೇಮೆಂಟ್ ಮಾಡಬಹುದು. ಆಕ್ಸಿಸ್ ಬ್ಯಾಂಕ್ ಜೊತೆ ಕೈಜೋಡಿಸಿರುವ ಗೂಗಲ್ ಪೆ ಈಗ ಗ್ರಾಹಕರಿಗೆ ಹೊಸ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಪರಿಚಯ ಮಾಡಿದೆ.
ಗ್ರಾಹಕರಿಗೆ ಬಂತು ಗೂಗಲ್ ಪೇ ಫ್ಲೆಕ್ಸ್ ಕಾರ್ಡ್
ಗೂಗಲ್ ಈಗ ಆಕ್ಸಿಸ್ ಬ್ಯಾಂಕ್ ಸಹಯೋಗದೊಂದಿಗೆ ಗೂಗಲ್ ಪೇ ಫ್ಲೆಕ್ಸ್ ಕಾರ್ಡ್ ಜಾರಿಗೆ ತಂದಿದೆ. ಗೂಗಲ್ ಪೆ ಗ್ರಾಹಕರು ಈ ಗೂಗಲ್ ಪೇ ಫ್ಲೆಕ್ಸ್ ಕಾರ್ಡ್ ಬಳಕೆ ಮಾಡಿಕೊಂಡು ದಿನನಿತ್ಯದ ಪೇಮೆಂಟ್ ಮಾಡಬಹುದು. ಸಾಕಷ್ಟು ಆಫರ್ ಜೊತೆಗೆ ಈ ಗೂಗಲ್ ಪೇ ಫ್ಲೆಕ್ಸ್ ಕಾರ್ಡ್ ಬಿಡುಗಡೆ ಆಗಿದ್ದು ಅರ್ಹರು ಮಾತ್ರ ಈ ಕಾರ್ಡ್ ಪಡೆದುಕೊಳ್ಳಬಹುದು. ಯಾರಿಗೆ ಈ ಗೂಗಲ್ ಪೇ ಫ್ಲೆಕ್ಸ್ ಕಾರ್ಡ್ ಸಿಗುತ್ತೋ ಅವರು UPI ಮೂಲಕ, ಅಂದರೆ ಗೂಗಲ್ ಪೆ ಮೂಲಕ ಖಾತೆಯಲ್ಲಿ ಹಣ ಇಲ್ಲದೆ ಇದ್ದರೂ ಕೂಡ ಪೇಮೆಂಟ್ ಮಾಡಬಹುದು.
ಗೂಗಲ್ ಪೇ ಫ್ಲೆಕ್ಸ್ ಕಾರ್ಡಿನ ಪ್ರಯೋಜನ
* ಪ್ರತಿ ಟ್ರಾನ್ಸಾಕ್ಷನ್ ಮೇಲೆ ಗ್ರಾಹಕರು ರಿವಾರ್ಡ್ ಪಾಯಿಂಟ್ ಪಡೆದುಕೊಳ್ಳುತ್ತಾರೆ
* ರಿವಾರ್ಡ್ ಪಾಯಿಂಟ್ ಗಳನ್ನೂ ಕ್ಯಾಶ್ ಆಗಿ ಪರಿವರ್ತನೆ ಮಾಡಿಕೊಳ್ಳಬಹುದು.
* ರಿವಾರ್ಡ್ ಪಾಯಿಂಟ್ ಮೂಲಕ ಕ್ರೆಡಿಟ್ ಕಾರ್ಡ್ ಬಿಲ್ ಪೇಮೆಂಟ್ ಕೂಡ ಮಾಡಬಹುದು.
* ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡಲು ಕಷ್ಟವಾದರೆ 6-9 ತಿಂಗಳಿಗೆ EMI ಮಾಡಿಕೊಳ್ಳಬಹುದು.
* ಗ್ರಾಹಕರಿಗೆ ರಿವಾರ್ಡ್ ಪಾಯಿಂಟ್ ಗಳನು ಸುಲಭವಾಗಿ ಬಳಸುವಂತೆ ಕ್ರೆಡಿಟ್ ಕಾರ್ಡ್ ವಿನ್ಯಾಸ ಮಾಡಲಾಗಿದೆ.
ಗೂಗಲ್ ಪೇ ಫ್ಲೆಕ್ಸ್ ಕಾರ್ಡ್ ಪಡೆದುಕೊಳ್ಳುವುದು ಹೇಗೆ?
ನೇರವಾಗಿ ಗೂಗಲ್ ಪೆ ಅಪ್ಲಿಕೇಶನ್ ಮೂಲಕ ಗೂಗಲ್ ಪೇ ಫ್ಲೆಕ್ಸ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಂಪೂರ್ಣ ಆನ್ಲೈನ್ ಆಗಿರುತ್ತದೆ ಮತ್ತು ಯಾವುದೇ ಪೇಪರ್ ವರ್ಕ್ ಇರುವುದಿಲ್ಲ. ಗೂಗಲ್ ಪೆ ಅಪ್ಲಿಕೇಶನ್ ಮೂಲಕವೇ ಕಾರ್ಡ್ ಅಪ್ರೂವಲ್ ಆದನಂತರ ಪಿನ್ ಸೆಟ್ ಮಾಡಬಹುದು. ಕಾರ್ಡಿಗೆ ಅರ್ಜಿ ಸಲ್ಲಿಸಿದ ನಂತರ ನಿಮ್ಮ ಅರ್ಜಿ ಪರಿಶೀಲನೆ ಮಾಡಿ ನಂತರ ಕಾರ್ಡ್ ಅಪ್ರೂವಲ್ ಮಾಡಲಾಗುತ್ತದೆ. ಆಧಾರ್ ಸಂಖ್ಯೆ, ಪಾನ್ ಸಂಖ್ಯೆ, ಮೊಬೈಲ್ OTP ಸೇರಿದಂತೆ ನಿಮ್ಮ ಆದಾಯದ ಮೂಲದ ಬಗ್ಗೆ ಮಾಹಿತಿ ಕೊಡಬೇಕಾಗುತ್ತದೆ.
ಗೂಗಲ್ ಪೆ ಆಕ್ಸಿಸ್ ಬ್ಯಾಂಕ್ ಸಹಯೋಗದೊಂದಿಗೆ ಈ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡಿದ್ದು ಈ ಕ್ರೆಡಿಟ್ ಕಾರ್ಡ್ ಮೂಲಕ ಗ್ರಾಹಕರು ಪ್ರತಿ ವಹಿವಾಟಿನ ಮೇಲೆ ರಿವಾರ್ಡ್ ಪಾಯಿಂಟ್ ಪಡೆದುಕೊಳ್ಳುತ್ತಾರೆ. ಇದೊಂದು ರೂಪೇ ಕ್ರೆಡಿಟ್ ಕಾರ್ಡ್ ಆಗಿದ್ದು UPI ಮೂಲಕ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಸುಲಭವಾಗಿ ಪೇಮೆಂಟ್ ಮಾಡಬಹುದು. ಭಾರತದಲ್ಲಿ ಸುಮಾರು 5 ಕೋಟಿಗೂ ಅಧಿಕ ಜನರು ಈಗಾಗಲೇ ಹಲವು ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿಕೊಳ್ಳುತ್ತಾರೆ. ಗೂಗಲ್ ಪೆ ಕ್ರೆಡಿಟ್ ಕಾರ್ಡ್ ನಂತರ ಕ್ರೆಡಿಟ್ ಕಾರ್ಡ್ ಬಳಕೆ ಮಾಡುವವರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಬೇಕಾದ ಅರ್ಹತೆ
* ಉತ್ತಮ ಸಿಬಿಲ್ ಸ್ಕೋರ್ ಹೊಂದಿರುವುದು ಕಡ್ಡಾಯ
* ಯಾವುದೇ ಕ್ರೆಡಿಟ್ ಕಾರ್ಡ್ ಪೇಮೆಂಟ್ ಬಾಕಿ ಇರಬಾರದವು
* ನಿಮ್ಮ ಕ್ರೆಡಿಟ್ ಹಿಸ್ಟರಿ ಉತ್ತಮವಾಗಿರಬೇಕು
* ITR ಅಥವಾ ಆದಾಯದ ಮೂಲ ಹೊಂದಿರುವುದು ಕಡ್ಡಾಯ
* ಲೋನ್ ಬಾಕಿ ಉಳಿಸಿಕೊಂಡಿರಬಾರದು
* ಉತ್ತಮ ಸಿಬಿಲ್ ಸ್ಕೋರ್ ಹೊಂದಿರುವುದು ಕಡ್ಡಾಯ
* ಯಾವುದೇ ಕ್ರೆಡಿಟ್ ಕಾರ್ಡ್ ಪೇಮೆಂಟ್ ಬಾಕಿ ಇರಬಾರದವು
* ನಿಮ್ಮ ಕ್ರೆಡಿಟ್ ಹಿಸ್ಟರಿ ಉತ್ತಮವಾಗಿರಬೇಕು
* ITR ಅಥವಾ ಆದಾಯದ ಮೂಲ ಹೊಂದಿರುವುದು ಕಡ್ಡಾಯ
* ಲೋನ್ ಬಾಕಿ ಉಳಿಸಿಕೊಂಡಿರಬಾರದು
Disclaimer: This information is provided for awareness purposes only. For personalised legal advice, consult a qualified professional and refer to official government notifications.

