Aadhaar card name chage process after marriage: ಭಾರತದಲ್ಲಿ ಸಾಮಾನ್ಯವಾಗಿ ಮಹಿಳೆಯರು ಮದುವೆಯ ನಂತರ ಹೆಸರು ಬದಲಾಯಿಸಿಕೊಳ್ಳುತ್ತಾರೆ. ಮದುವೆಯ ನಂತರ ಮಹಿಳೆಯರು ತನ್ನ ಹೆಸರಿನ ಮುಂದೆ ಗಂಡನ ಹೆಸರನ್ನು ಸೇರಿಸುತ್ತಾರೆ. ಮದುವೆಯ ನಂತರ ಅನೇಕ ಮಹಿಳೆಯರು ತಮ್ಮ ಕುಟುಂಬ ಹೆಸರು ಅಥವಾ ಸಂಪೂರ್ಣ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ. ಆಧಾರ್ ಕಾರ್ಡಿನಲ್ಲಿ ಹೆಸರು ಬದಲಾವಣೆ ಮಾಡಿದರೆ ಮಾತ್ರ ಪಾನ್ ಕಾರ್ಡ್, ಪಾಸ್ಪೋರ್ಟ್, ಬ್ಯಾಂಕ್ ಖಾತೆ ಸೇರಿದಂತೆ ಹಲವು ದಾಖಲೆಗಳನ್ನು ಹೆಸರು ಬದಲಾವಣೆ ಮಾಡಬಹುದು. ಸಾಕಷ್ಟು ಮಹಿಳೆಯರಿಗೆ ಮದುವೆಯ ನಂತರ ಆಧಾರ್ ಕಾರ್ಡಿನಲ್ಲಿರುವ ಹೆಸರು ಬದಲಾವಣೆ ಮಾಡುವುದು ಹೇಗೆ ಅನ್ನುವುದರ ಬಗ್ಗೆ ಮಾಹಿತಿ ತಿಳಿದಿಲ್ಲ. ಹಾಗಾದರೆ ಮದುವೆಯ ನಂತರ ಆಧಾರ್ ಕಾರ್ಡಿನ ಹೆಸರು ಬದಲಾವಣೆ ಮಾಡುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಆಧಾರ್ ಕಾರ್ಡ್ ಹೆಸರು ಬದಲಿಸುವ ಪ್ರಕ್ರಿಯೆ
2025ರ ನವೆಂಬರ್‌ನಿಂದ ಹೆಸರು ಬದಲಾವಣೆಯನ್ನು ಆನ್‌ಲೈನ್‌ನಲ್ಲಿ ಮಾಡಬಹುದು. myAadhaar ಪೋರ್ಟಲ್‌ಗೆ ಹೋಗಿ. uidai.gov.in ವೆಬ್ಸೈಟ್ ಗೆ ಬೇಟಿಕೊಡುವುದರ ಮೂಲಕ ಸುಲಭವಾಗಿ ಆಧಾರ್ ಕಾರ್ಡ್ ಹೆಸರು ಬದಲಾವಣೆ ಮಾಡಬಹುದು. ಮೊಬೈಲ್ ಸಂಖ್ಯೆಗೆ ಬರುವ OTP ನಮೂದಿಸುವುದರ ಮೂಲಕ ‘Update Aadhaar’ ಆಯ್ಕೆ ಮಾಡಬೇಕು. ಆಧಾರ್ ಅಪ್ಡೇಟ್ ನಲ್ಲಿ ಹೆಸರು ಸೇರಿಸಿ ಮದುವೆಯ ಪ್ರಮಾಣಪತ್ರ ಸ್ಕ್ಯಾನ್ ಮಾಡಿ ಅಪ್ಡೇಟ್ ಮಾಡಬೇಕು. ಈ ಪ್ರಕ್ರಿಯೆಗೆ ಸುಮಾರು ಸುಮಾರು 50-75 ರೂಪಾಯಿ ಶುಲ್ಕ ಆನ್‌ಲೈನ್‌ನಲ್ಲಿ ಪಾವತಿಸಬೇಕಾಗುತ್ತದೆ. ಈ ಪ್ರಕ್ರಿಯೆ ಮುಗಿದ ನಂತರ URN ಸಿಗುತ್ತದೆ, ಅದರಿಂದ ಸ್ಟೇಟಸ್ ಟ್ರ್ಯಾಕ್ ಮಾಡಿ. ಸಾಮಾನ್ಯವಾಗಿ 30 ದಿನಗಳಲ್ಲಿ ಅಪ್‌ಡೇಟ್ ಆಗುತ್ತದೆ. ಅಪ್ಡೇಟ್ ಮಾಡಿದ 30 ದಿನಗಳ ಒಳಗಾಗಿ ಆಧಾರ್ ಕಾರ್ಡ್ ಹೆಸರು ಬದಲಾವಣೆ ಆಗುತ್ತದೆ.
ಆಧಾರ್ ಕಾರ್ಡ್ ಹೆಸರು ಬದಲಾಯಿಸುವ ಆಫ್‌ಲೈನ್ ಪ್ರಕ್ರಿಯೆ
* ಆಫ್‌ಲೈನ್ ಪ್ರಕ್ರಿಯೆ ಮೂಲಕ ಆಧಾರ್ ಕಾರ್ಡ್ ಹೆಸರು ಬದಲಾವಣೆ ಮಾಡಬೇಕಾದರೆ ಹತ್ತಿರದ ಸೇವಾಸಿಂಧು ಕೇಂದ್ರಕ್ಕೆ ಬೇಟಿಕೊಡಬೇಕು. ಅಪ್‌ಡೇಟ್ ಫಾರ್ಮ್ ತುಂಬಿ.
* ದಾಖಲೆಗಳ ಸ್ವಯಂ ಪ್ರಮಾಣೀಕೃತ ಕಾಪಿ ಸಲ್ಲಿಸಬೇಕಾಗುತ್ತದೆ. ಬಯೋಮೆಟ್ರಿಕ್ ಪರಿಶೀಲನೆ ಮಾಡಿದ ನಂತರ URN ಪಡೆದು ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.
ಹೆಸರು ಬದಲಾವಣೆಗೆ ಬೇಕಾದ ದಾಖಲೆಗಳು
* ಸರ್ಕಾರಿ ರಿಜಿಸ್ಟ್ರಾರ್‌ನಿಂದ ಪಡೆದ ಮದುವೆಯ ಪ್ರಮಾಣಪತ್ರ
* ಹೆಸರನ್ನು ಸಂಪೂರ್ಣ ಬದಲಾಯಿಸುವುದಾದರೆ ಗೆಜೆಟ್ ನೋಟಿಫಿಕೇಷನ್ ಅಥವಾ ಕೋರ್ಟ್ ಆದೇಶ ಕೂಡ ಬೇಕಾಗಬಹುದು
* ಸ್ವಯಂ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಕೊಡಬೇಕು
* ಇದರ ಜೊತೆಗೆ ಇತರೆ ದಾಖಲೆ ಕೊಡಬೇಕಾಗುತ್ತದೆ (ಸೇವಾ ಕೇಂದ್ರದಲ್ಲಿ ಮಾಹಿತಿ ಪಡೆದುಕೊಳ್ಳಿ)
ಹೆಸರು ಬದಲಾವಣೆಯಿಂದ ಆಗುವ ಪ್ರಯೋಜನ
* ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಸಹಾಯಕವಾಗಬಹುದು
* ಕೆಲವು ಸರ್ಕಾರೀ ಕೆಲಸಗಳು ಮತ್ತು ಸರ್ಕಾರೀ ಯೋಜನೆಗಳು ಅರ್ಜಿ ಸಲ್ಲಿಸಲು ಸಹಾಯಕವಾಗಬಹುದು
* ಬ್ಯಾಂಕಿಂಗ್ ವಹಿವಾಟುಗಳು ಮತ್ತು ಹೂಡಿಕೆಗೆ ಸಾಕಷ್ಟು ಸಹಕಾರಿ
ಈ ಬದಲಾವಣೆ ಕಡ್ಡಾಯವಲ್ಲ, ಆದರೆ ಎಲ್ಲಾ ದಾಖಲೆಗಳು ಒಂದೇ ಆಗಿರಲು ಸಹಾಯಕ. ಯಾವುದೇ ಸಂದೇಹವಿದ್ದರೆ UIDAI ಹೆಲ್ಪ್‌ಲೈನ್ 1947 ಗೆ ಕರೆ ಮಾಡಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

